ಪ್ಲೇ-ಆಫ್ ಹಾದಿಯಲ್ಲಿರುವ ಪುಣೆಗೆ ಅರ್ಧದಲ್ಲೇ ಕೈಕೊಟ್ಟ ಸ್ಟಾರ್ ಆಟಗಾರ..!

Published : May 11, 2017, 04:33 PM ISTUpdated : Apr 11, 2018, 01:02 PM IST
ಪ್ಲೇ-ಆಫ್ ಹಾದಿಯಲ್ಲಿರುವ ಪುಣೆಗೆ ಅರ್ಧದಲ್ಲೇ ಕೈಕೊಟ್ಟ ಸ್ಟಾರ್ ಆಟಗಾರ..!

ಸಾರಾಂಶ

ಸ್ಟೋಕ್ಸ್ ಈ ಬಾರಿಯ ಐಪಿಎಲ್‌'ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿದ್ದಾರೆ.

ನವದೆಹಲಿ(ಮೇ.11): ಪುಣೆ ಸೂಪರ್‌'ಜೈಂಟ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್‌ಸ್ಟೋಕ್ಸ್ ಪ್ರಸಕ್ತ ಐಪಿಎಲ್ ಟೂರ್ನಿಯ ಪ್ಲೇ-ಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಮೇ 24ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಏಕದಿನ ಪಂದ್ಯಗಳು ನಡೆಯಲಿದ್ದು ಸ್ಟೋಕ್ಸ್ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಈ ಪಂದ್ಯಾವಳಿಗೂ ಮುನ್ನ ತರಬೇತಿ ಶಿಬಿರ ನಡೆಯಲಿದ್ದು, ತಂಡದ ಎಲ್ಲಾ ಪ್ರಮುಖ ಆಟಗಾರರು ತಪ್ಪದೇ ಭಾಗವಹಿಸಬೇಕು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಆ್ಯಂಡ್ರೂ ಸ್ಟ್ರಾಸ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೋಕ್ಸ್ ತವರಿಗೆ ಮರಳಲಿದ್ದು, ಪುಣೆ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸ್ಟೋಕ್ಸ್ ಈ ಬಾರಿಯ ಐಪಿಎಲ್‌'ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿದ್ದಾರೆ.

ಈಗಾಗಲೇ ಪ್ಲೇ-ಆಫ್ ಹಂತಕ್ಕೇರಿರುವ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಇಂಗ್ಲೆಂಡ್‌'ನ ಮತ್ತೊಬ್ಬ ಆಟಗಾರ ಜಾಸ್ ಬಟ್ಲರ್ ಕೂಡ ಸ್ವದೇಶಕ್ಕೆ ತೆರಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒನ್ ಸೈಡ್ ಸೆಕ್ಯುಲರಿಸಂ?: ಜೆಮಿಮಾ ಜೊತೆ ಸಾಂತಾ ಟೋಪಿ ಧರಿಸಿದ ಸ್ಮೃತಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್!
ಗೋ ಟು ಹೆಲ್, ಗೆಳತಿಯೊಂದಿಗೆ ಡಿನ್ನರ್ ಡೇಟ್ ವೇಳೆ ಫ್ಯಾನ್ಸ್ ಬೈಗುಳ, ಹಾರ್ದಿಕ್ ಪಾಂಡ್ಯ ಮಾಡಿದ್ದೇನು?