ಕೋಚ್ ರವಿ ಶಾಸ್ತ್ರಿ ಹಾಗೂ ದ್ರಾವಿಡ್ ಸ್ಯಾಲರಿ ಏಷ್ಟು ಗೊತ್ತಾ?

 |  First Published Jun 19, 2018, 3:39 PM IST

ಟೀಮ್ಇಂಡಿಯಾ ಕ್ರಿಕೆಟಿಗರಿಗೆ ಕೋಟಿ ಕೋಟಿ ವೇತನ ನೀಡಿದರೆ, ಆಟಗಾರರಿಗೆ ಮಾರ್ಗದರ್ಶನ ನೀಡೋ ಕೋಚ್ ಸ್ಯಾಲರಿ ಏಷ್ಟು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಕೋಚ್ ರವಿ ಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಸ್ಯಾಲರಿಯನ್ನ ಬಿಸಿಸಿಐ ಬಹಿರಂಗಗೊಳಿಸಿದೆ. ಇವರ ವೇತನ ಏಷ್ಟು ಗೊತ್ತಾ? ಇಲ್ಲಿದೆ  ವಿವರ


ಮುಂಬೈ(ಜೂ.19): ಟೀಮ್ಇಂಡಿಯಾ ಕೋಚ್ ರವಿ ಶಾಸ್ತ್ರಿ ಹಾಗೂ ಅಂಡರ್ -19 ತಂಡದ ಕೋಚ್ ರಾಹುಲ್ ದ್ರಾವಿಡ್ ಸ್ಯಾಲರಿಯನ್ನ ಬಿಸಿಸಿಐ ಬಹಿರಂಗ ಪಡಿಸಿದೆ. ರವಿ ಶಾಸ್ತ್ರಿ ಮಾಸಿಕ ವೇತನ ಬರೋಬ್ಬರಿ 63 ಲಕ್ಷ ರೂಪಾಯಿ. ಇನ್ನು ರಾಹುಲ್ ದ್ರಾವಿಡ್ ಮಾಸಿಕ ವೇತನ 40.5 ಲಕ್ಷ ರೂಪಾಯಿ..

ಕ್ರಿಕೆಟ್ ರಾಷ್ಟ್ರಗಳ ಪೈಕಿ ಅತ್ಯಂತ ಗರಿಷ್ಠ ಸ್ಯಾಲರಿ ಪಡೆಯುತ್ತಿರುವ ಕೋಚ್ ಅನ್ನೋ ಹೆಗ್ಗಳಿಕೆಗೆ ರವಿ ಶಾಸ್ತ್ರಿ ಹಾಗೂ ದ್ರಾವಿಡ್ ಪಾತ್ರರಾಗಿದ್ದಾರೆ. ರವಿ ಶಾಸ್ತ್ರಿ 18-04-2018 ರಿಂದ 18-07-2018ರ ವರೆಗಿನ 3 ತಿಂಗಳ 1.89 ಕೋಟಿ ರೂಪಾಯಿ ಸ್ಯಾಲರಿಯನ್ನ ಬಿಸಿಸಿಐ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈ ಮೂಲಕ ರವಿ ಶಾಸ್ತ್ರಿ ಮಾಸಿಕ ವೇತನ  ಬಯಲಾಗಿದೆ. 

Latest Videos

ಭಾರತ  ಎ ಹಾಗೂ ಅಂಡರ್ -19 ತಂಡದ ಕೋಚ್ ರಾಹುಲ್ ದ್ರಾವಿಡ್ ವಾರ್ಷಿಕ ವೇತನ 4.86 ಕೋಟಿ ರೂಪಾಯಿ. ಅಂದರೆ ದ್ರಾವಿಡ್ ಮಾಸಿಕ ವೇತನ 40.5 ಲಕ್ಷ ರೂಪಾಯಿ. ರವಿ ಶಾಸ್ತ್ರಿ ಹಾಗೂ ದ್ರಾವಿಡ್  ಗರಿಷ್ಠ ವೇತನ ಪಡೆದ ಕೋಚ್ ಅನ್ನೋ ದಾಖಲೆ ಬರೆದಿದ್ದಾರೆ. 
   

click me!