IPL 2019: ಐಸಿಸಿ ಭ್ರಷ್ಟಾರ ನಿಗ್ರಹ ದಳಕ್ಕೆ ಬ್ರೇಕ್ -3 ಕೋಟಿ ಉಳಿತಾಯ!

Published : Feb 28, 2019, 02:41 PM IST
IPL 2019: ಐಸಿಸಿ ಭ್ರಷ್ಟಾರ ನಿಗ್ರಹ ದಳಕ್ಕೆ ಬ್ರೇಕ್ -3 ಕೋಟಿ ಉಳಿತಾಯ!

ಸಾರಾಂಶ

ಕಳೆದ 10 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ (ACU) ಕಾರ್ಯನಿರ್ವಹಿಸುತ್ತಿದೆ. ಇದೀಗ ಐಸಿಸಿ ACU ಘಟಕಕ್ಕೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ. ಬಿಸಿಸಿಐ ಈ ನಿರ್ಧಾರಕ್ಕೆ ಬಂದಿರುವುದೇಕೆ? ಇಲ್ಲಿದೆ ವಿವರ.

ಮುಂಬೈ(ಫೆ.28): ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್ 23 ರಿಂದ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ಮಂಡಳಿ(BCCI) ಐಸಿಸಿಗೆ ಶಾಕ್ ನೀಡಿದೆ. ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ(ACU) ಸೇವೆ ಕಡಿತಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್!

ಕಳೆದ 10 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಸೇವೆಯನ್ನ ಉಪಯೋಗಿಸಿಕೊಂಡಿದೆ. ಇದಕ್ಕಾಗಿ ಬಿಸಿಸಿಐ ಪ್ರತಿ ಆವೃತ್ತಿಯಲ್ಲಿ ಬರೋಬ್ಬರಿ 3.1 ಕೋಟಿ ರೂಪಾಯಿ ನೀಡುತ್ತಿದೆ. ಇದೀಗ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಬದಲು ಬಿಸಿಸಿಐ ಹೊಸ ಭ್ರಷ್ಟಾಚಾರ ನಿಗ್ರಹ ದಳ ನೇಮಕ ಮಾಡಲು ನಿರ್ಧರಿಸಿದೆ.

ಇದನ್ನೂ ಓದಿ: ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

ಐಸಿಸಿ ನೇಮಕ ಮಾಡುವ ACU ದಳವನ್ನು ರದ್ದು ಮಾಡಿ, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ನೇಮಕ ಮಾಡಿದರೆ ಹಣ ಉಳಿತಾಯವಾಗಲಿದೆ ಎಂದು ಬಿಸಿಸಿಐ CoA ಮುಖ್ಯಸ್ಥ ವಿನೋದ್ ರೈ ಹೇಳಿದ್ದಾರೆ. 12ನೇ ಆವೃತ್ತಿಯಲ್ಲಿ ಬಿಸಿಸಿಐ ನೇಮಕ ಮಾಡೋ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯನಿರ್ವಹಸಲಿದೆ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!