ಕ್ರಿಕೆಟಿಗರ ಕೇಂದ್ರ ಗುತ್ತಿಗೆಗೆ ಬಿಸಿಸಿಐ ಅಸ್ತು

First Published Jun 23, 2018, 10:05 AM IST
Highlights

ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಯ ಅನುಮತಿ ಇಲ್ಲದಿದ್ದರೂ ಬಿಸಿಸಿಐ ನಡೆಸಿದ ಸಭೆಯಲ್ಲಿ, ಭಾರತೀಯ ಕ್ರಿಕೆಟಿಗರ ನೂತನ ಕೇಂದ್ರ ಗುತ್ತಿಗೆಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ.

ನವದೆಹಲಿ: ಭಾರತೀಯ ಕ್ರಿಕೆಟಿಗರ ನೂತನ ಕೇಂದ್ರ ಗುತ್ತಿಗೆಗೆ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಸಮ್ಮತಿ ದೊರೆತಿದೆ. ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಯ ಅನುಮತಿ ಇಲ್ಲದಿದ್ದರೂ ನಡೆದ ಸಭೆಯಲ್ಲಿ ಎಲ್ಲಾ 28 ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ವೇತನ ಪರಿಷ್ಕರಣೆ ವಿಚಾರದ ಬಗ್ಗೆ ಚರ್ಚೆ ನಡೆದ ಬಳಿಕ, ನೂತನ ಗುತ್ತಿಗೆ ಮಾದರಿಯನ್ನು ಜಾರಿಗೆ ತರಲು ಒಪ್ಪಿಗೆ ದೊರೆಯಿತು.

ಮಾ.7ರಂದು ಆಡಳಿತ ಸಮಿತಿ ಆಟಗಾರರ ಗುತ್ತಿಗೆಯನ್ನು ಪ್ರಕಟಿಸಿತ್ತು. ಹೊಸದಾಗಿ ‘ಎ+’ ವಿಭಾಗವನ್ನು ಸೇರ್ಪಡೆಗೊಳಿಸಲಾಗಿತ್ತು. ‘ಎ+’ಗೆ .7 ಕೋಟಿ, ‘ಎ’ ದರ್ಜೆಗೆ .5 ಕೋಟಿ, ‘ಬಿ’ಗೆ .3 ಕೋಟಿ ಹಾಗೂ ‘ಸಿ’ ದರ್ಜೆಗೆ .1 ಕೋಟಿ ವೇತನ ನಿಗದಿಪಡಿಸಲಾಗಿತ್ತು.

click me!