
ಮುಂಬೈ(ಅ.13): ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಯರಾರಿಸಿದ್ದ ಪಿಚ್ಗಳು ಸ್ಪಿನ್ನರ್ಗಳಿಗೆ ಹೇಳಿ ಮಾಡಿಸಿದಂತಿತ್ತು ಎಂದು ಹರ್ಭಜನ್ ಹೇಳಿಕೆ ನೀಡಿದ್ದರು.
ಕಳೆದ 4 ವರ್ಷದಿಂದ ಭಾರತದ ಸ್ಪಿನ್ನರ್ಗಳನ್ನ ಸಹಕರಿಸುತ್ತಿರುವುದು ಪಿಚ್ಗಳೇ ಹೊರೆತು, ಅವರ ಸ್ಪಿನ್ ಮಾಂತ್ರಿಕತೆಯಿಂದಲ್ಲಾ ಎಂದು ಹರ್ಭಜನ್ ಸಿಂಗ್ ಹೇಳುವ ಮೂಲಕ ಅಶ್ವಿನ್ಗೆ ನೇರವಾಗಿ ಟಾಂಗ್ ಕೊಟ್ಟಿದ್ದರು.
ಆದರೆ ಇದ್ದಕೆ ತಿರುಗೇಟು ನೀಡಿರುವ ನಾಯಕ ಕೊಹ್ಲಿ, ಯಾವುದೇ ಪಿಚ್ ಇದ್ದರೂ ಸಹ ಬೌಲರ್ ತನ್ನ ಕೌಶಲ್ಯವನ್ನ ತೋರಿಸಲೇಬೇಕಾಗುತ್ತೆ ಎಂದಿದ್ದಾರೆ.
ಅಶ್ವಿನ್ ಈ ಸರಣಿಯಲ್ಲಿ 3 ಟೆಸ್ಟ್ಗಳಿಂದ 27 ವಿಕೆಟ್ ಪಡೆದು ಸರಣಿ ಶ್ರೇಷ್ಠರಾಗಿದ್ದರು. ಅಲ್ಲದೇ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.