ಬುಧವಾರ ಹಾಂಕಾಂಗ್ ವಿರುದ್ಧ 1-4 ಅಂತರದ ಜಯ ಸಾಧಿಸಿರುವ ಭಾರತ, ಈಗಾಗಲೇ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಹಾಗಾಗಿ ಸಾತ್ವಿಕ್ ಮತ್ತು ಚಿರಾಗ್‌ಗೆ ವಿಶ್ರಾಂತಿ ನೀಡಲಾಗಿತ್ತು. ಲೀಗ್ ಹಂತದಲ್ಲಿ ಚೀನಾವನ್ನು 3-2ರಿಂದ ಮಣಿಸಿ ಕ್ವಾರ್ಟರ್‌ಗೇರಿರುವ ಮಹಿಳಾ ತಂಡಕ್ಕೆ ಅಂತಿಮ 8ರ ಘಟ್ಟದಲ್ಲಿ ಶುಕ್ರವಾರ ಬಲಿಷ್ಠ ಮಲೇಷ್ಯಾ ಎದುರಾಗಲಿದೆ.
ಶಾಹ್ ಆಲಮ್( ಮಲೇಷ್ಯಾ): ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಗುರುವಾರ ಚೀನಾ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿದೆ. ಬುಧವಾರ ಹಾಂಕಾಂಗ್ ವಿರುದ್ಧ 1-4 ಅಂತರದ ಜಯ ಸಾಧಿಸಿರುವ ಭಾರತ, ಈಗಾಗಲೇ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಹಾಗಾಗಿ ಸಾತ್ವಿಕ್ ಮತ್ತು ಚಿರಾಗ್‌ಗೆ ವಿಶ್ರಾಂತಿ ನೀಡಲಾಗಿತ್ತು. ಲೀಗ್ ಹಂತದಲ್ಲಿ ಚೀನಾವನ್ನು 3-2ರಿಂದ ಮಣಿಸಿ ಕ್ವಾರ್ಟರ್‌ಗೇರಿರುವ ಮಹಿಳಾ ತಂಡಕ್ಕೆ ಅಂತಿಮ 8ರ ಘಟ್ಟದಲ್ಲಿ ಶುಕ್ರವಾರ ಬಲಿಷ್ಠ ಮಲೇಷ್ಯಾ ಎದುರಾಗಲಿದೆ.
ಸಿಂಗಲ್ಸ್‌ನಲ್ಲಿ ತಾರಾ ಆಟಗಾರ, ವಿಶ್ವ ನಂ.7 ಎಚ್.ಎಸ್.ಪ್ರಣಯ್, ವಿಶ್ವ ನಂ.16 ವೆಂಗ್ ಹಾಂಗ್ ಯಾಂಗ್ ವಿರುದ್ಧ 6-21, 21-18, 21-19ರಿಂದ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ಡಬಲ್ಸ್‌ನಲ್ಲಿ ಭಾರತದ ಎಂ.ಆರ್.ಅರ್ಜುನ್-ಧ್ರುವ್ ಕಪಿಲ ವಿರುದ್ಧ ಜಯ ಸಾಧಿಸಿದ ಚೆನ್ ಯಾಂಗ್- ಲಿಯು ಯಿನ್ 1-1ರಿಂದ ಸಮಬಲ ಸಾಧಿಸುವಲ್ಲಿ ನೆರವಾದರು.
ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಪತ್ನಿಯ ಕಣ್ಣೀರು ಒರೆಸಿದ ಸರ್ಫರಾಜ್ ಖಾನ್..! ವಿಡಿಯೋ ವೈರಲ್
ಕಾಮನ್‌ವೆಲ್ತ್ ಚಾಂಪಿಯನ್ ಲಕ್ಷ್ಯ ಸೇನ್ ಲೆಯಿ ಕ್ಸಿ ವಿರುದ್ಧ 21-11, 21-16ರಿಂದ ಜಯ ಸಾಧಿಸುವ ಮೂಲಕ ಭಾರತಕ್ಕೆ 2-1ರಿಂದ ಮುನ್ನಡೆ ತಂದುಕೊಟ್ಟರು. ನಂತರ ನಡೆದ ಮತ್ತೊಂದು ಡಬಲ್ಸ್‌ನಲ್ಲಿ ಸೂರಜ್ ಗೋಲಾ-ಪೃಥ್ವಿ ರಾಯ್ ವಿರುದ್ಧ ಗೆದ್ದ ರೆನ್ ಕ್ಸಿಂಗ್ ಯೂ ಮತ್ತು ಕ್ಸಿಯಿ ಹೊ ಜೋಡಿಯೂ ಚೀನಾಕ್ಕೆ 2-2 ಸಮಬಲ ಸಾಧಿಸಲು ನೆರವಾಯಿತು.
ರಾಷ್ಟ್ರೀಯ ಚಾಂಪಿಯನ್ ಚಿರಾಗ್ ಸೇನ್, ವಾಂಗ್ ಝೆಂಗ್ ಕ್ಸಿಂಗ್ ವಿರುದ್ಧ 15-21, 16-21ರಿಂದ ಸೋಲು ಕಂಡರು. ಈ ಜಯದ ಮೂಲಕ ಚೀನಾ 3-2ರಿಂದ ಗೆದ್ದು ಬೀಗಿತು.
ಬೆಂಗಳೂರು ಓಪನ್‌ನಲ್ಲಿ ಸುಮಿತ್ ನಗಾಲ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಬೆಂಗಳೂರು: ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ವಿಶ್ವ ನಂ.98 ಸುಮಿತ್ ನಗಾಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ಹಾಂಕಾಂಗ್ ನ ಕೋಲ್‌ಮನ್ ವಾಂಗ್ ವಿರುದ್ಧ 6-2, 7-5 ನೇರ ಸೆಟ್‌ಗಳಿಂದ ಗೆಲುವು ದಾಖಲಿಸಿರುವ ನಗಾಲ್, ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾದ ಆ್ಯಡಮ್ ವಾಲ್ಟನ್‌ರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ವಾಲ್ಟನ್, ಬೆಲ್ಜಿಯಂನ ಗ್ಯುಟೆರ್ ಓಂಕ್ಲಿನ್ ವಿರುದ್ಧ 6-2, 6-2 ಜಯ ಸಾಧಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ವಿಶ್ವ ನಂ.25, ಕೆನಡಾದ ವಾಸೆಕ್ ಪಾಸ್ಪಿಸಿಲ್, ಇಟಲಿಯ ಸ್ಟೆಫಾನೊ ನಪೊಲಿಟನೊ ವಿರುದ್ಧ 4-6, 6-4, 4-6ರಿಂದ ಸೋತು ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು.
ಕುಸ್ತಿ ಸಂಸ್ಥೆ ಮತ್ತೆ ಬ್ಯಾನ್ ಮಾಡಿ: ಬಜರಂಗ್ ಪೂನಿಯಾ ಆಗ್ರಹ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮೇಲೆ ಮತ್ತೆ ನಿಷೇಧ ಹೇರಬೇಕೆಂದು ಒಲಿಂಪಿಕ್ಸ್ ಪದಕ ವಿಜೇತ ತಾರಾ ಕುಸ್ತಿಪಟು ಬಜರಂಗ್ ಪೂನಿಯಾ, ಜಾಗತಿಕ ಕುಸ್ತಿ ಸಂಸ್ಥೆಗೆ ಮನವಿ ಮಾಡಿದ್ದಾರೆ. ‘ನಿಷೇಧ ತೆರವಿನಿಂದ ಕುಸ್ತಿಪಟುಗಳು ಅಪಾಯದಲ್ಲಿದ್ದಾರೆ. ಡಬ್ಲ್ಯುಎಫ್‌ಐ ಸದಸ್ಯರು ದೌರ್ಜನ್ಯ ನಡೆಸುತ್ತಾರೆ’ ಎಂದು ಬಜರಂಗ್ ಆರೋಪ ಮಾಡಿದ್ದಾರೆ.
ಅಮಾನತು ತೆರವಿಗೆ ಸಂಜಯ್ ಸಿಂಗ್ ಸೆಟ್ಟಿಂಗ್: ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಆರೋಪ
ಗುರುವಾರ ತಾವು ಜಾಗತಿಕ ಸಂಸ್ಥೆಗೆ ಬರೆದಿರುವ ಪತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ಬಜರಂಗ್, ‘ಭಾರತದ ಕುಸ್ತಿಪಟುಗಳು ಅನ್ಯಾಯ, ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯ ಸಮ್ಮತವಾಗಿದೆ. ನಮ್ಮ ಕುಸ್ತಿಪಟುಗಳನ್ನು ಜಾಗತಿಕ ಸಂಸ್ಥೆ ಬೆಂಬಲಿಸಬೇಕು. ಭಾರತದಲ್ಲಿ ನ್ಯಾಯಯುತ ಕುಸ್ತಿ ಚಟುವಟಿಕೆ ನಡೆಸಬೇಕೆಂಬ ನಮ್ಮ ಕೋರಿಕೆಯನ್ನು ಪರಿಗಣಿಸಬೇಕು ಮತ್ತು ಡಬ್ಲ್ಯುಎಫ್‌ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.