ಫಿಫಾ ವಿಶ್ವಕಪ್: ಆಸ್ಟ್ರೇಲಿಯಾ-ಡೆನ್ಮಾರ್ಕ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

First Published Jun 21, 2018, 9:00 PM IST
Highlights

ಇದಾದ ಬಳಿಕ ಪಂದ್ಯದ 38ನೇ ನಿಮಿಷದಲ್ಲಿ ಆಸೀಸ್ ನಾಯಕ ಜೆಡಿನಾಕ್ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡು ಭರ್ಜರಿ ಗೋಲು ದಾಖಲಿಸಿದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿದ್ದವು.

ರಷ್ಯಾ[ಜೂ.21]: ಆಸೀಸ್ ನಾಯಕ ಜೆಡಿನಾಕ್ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಡೆನ್ಮಾರ್ಕ್ ವಿರುದ್ಧದ ಪಂದ್ಯದಲ್ಲಿ 1-1 ಗೋಲುಗಳ ರೋಚಕ ಡ್ರಾ ಸಾಧಿಸಿದೆ.

'ಸಿ' ಗುಂಪಿನ ಪಂದ್ಯದಲ್ಲಿ ಆರಂಭದಲ್ಲೇ ಡೆನ್ಮಾರ್ಕ್ ಗೋಲಿನ ಖಾತೆ ತೆರೆಯಿತು. ಪಂದ್ಯದ 7ನೇ ನಿಮಿಷದಲ್ಲೇ ಕ್ರಿಸ್ಟಿಯಾನ್ ಎರಿಕ್ಸನ್ ಆಸೀಸ್ ಗೋಲ್ ಕೀಪರ್ ವಂಚಿಸಿ ಮೊದಲು ಗೋಲು ದಾಖಲಿಸಿದರು. ಕ್ರಿಸ್ಟಿಯಾನೋ ಎರಿಕ್ಸನ್ ಗೋಲು ಬಾರಿದ ಪಂದ್ಯದಲ್ಲಿ ಇದುವರೆಗೂ ಡೆನ್ಮಾರ್ಕ್ ಸೋತಿಲ್ಲ.

ಇದಾದ ಬಳಿಕ ಪಂದ್ಯದ 38ನೇ ನಿಮಿಷದಲ್ಲಿ ಆಸೀಸ್ ನಾಯಕ ಜೆಡಿನಾಕ್ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡು ಭರ್ಜರಿ ಗೋಲು ದಾಖಲಿಸಿದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿದ್ದವು.

ಇನ್ನು ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಗೋಲು ದಾಖಲಿಸಲು ಸಾಕಷ್ಟು ಪ್ರಯತ್ನಿಸಿದವಾದರೂ ಫಲಕಾರಿಯಾಗಲಿಲ್ಲ. ಪಂದ್ಯದ 89ನೇ ನಿಮಿಷದಲ್ಲಿ ಎರಿಕ್ಸನ್’ಗೆ ಗೋಲು ಬಾರಿಸಲು ಅವಕಾಶ ದೊರೆಯಿತಾದರೂ ಇದರಿಂದ ಯಶಸ್ವಿಯಾಗಲಿಲ್ಲ. ಹೆಚ್ಚುವರಿ ಮೂರು ನಿಮಿಷದಲ್ಲೂ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾಗಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ಇದೀಗ ಆಡಿದ 2 ಪಂದ್ಯಗಳಲ್ಲಿ 1 ಗೆಲುವು ಒಂದು ಡ್ರಾನೊಂದಿಗೆ ಡೆನ್ಮಾರ್ಕ್ ಸಿ ಗುಂಪಿನಲ್ಲಿ ಮೊದಲ ಸ್ಥಾನಕ್ಕೇರಿದರೆ, ಆಸ್ಟ್ರೇಲಿಯಾ 1 ಸೋಲು ಹಾಗೂ ಒಂದು ಡ್ರಾನೊಂದಿಗೆ ಮೂರನೇ ಸ್ಥಾನದಲ್ಲೇ ಉಳಿದಿದೆ.

click me!