ಚಿನ್ನ ಗೆದ್ದ ಸ್ವಪ್ನಾ ಬರ್ಮನ್ ತಾಯಿಯ ಸರ ಕದ್ದ ಕಳ್ಳರು..!

By Web DeskFirst Published Sep 10, 2018, 4:44 PM IST
Highlights

ಇತ್ತೀಚೆಗಷ್ಟೇ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್’ನ ಹೆಪಥ್ಲಾನ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಸ್ವಪ್ನಾ ಬರ್ಮನ್ ಹೊಸ ಇತಿಹಾಸ ಬರೆದಿದ್ದರು.

ಜಲ್ಪೈಗುರಿ (ಪ.ಬಂಗಾಳ): ಇತ್ತೀಚೆಗಷ್ಟೇ ಮುಕ್ತಾಯ ವಾದ ಏಷ್ಯಾಡ್ ಗೇಮ್ಸ್‌ನಲ್ಲಿ ದಾಖಲೆಯ ಚಿನ್ನದ ಪದಕ ಗೆದ್ದಿದ್ದ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್ ಅವರ ತಾಯಿ ಮೇಲೆ ದಾಳಿ ನಡೆಸಿದ ಕಳ್ಳರು, ಸರ ಕಸಿದು ಪರಾರಿ ಆಗಿದ್ದಾರೆ. 

ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

ಸ್ವಪ್ನಾ ಅವರ ತಾಯಿ ಬಸಾನಾ ಬರ್ಮನ್ ಶನಿವಾರ ಮಾರುಕಟ್ಟೆಗೆ ತೆರಳಿದ್ದರು. ಸಂಜೆ 7.30ರ ವೇಳೆ ಸಂಬಂಧಿಕರ ಜತೆ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುವಾಗ ನಂಬರ್ ಪ್ಲೇಟ್ ಇಲ್ಲದ 2 ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬಸಾನಾ ಅವರ ಸ್ಕೂಟರ್‌ನ್ನು ಅಡ್ಡಗಟ್ಟಿ, ಅವರ ಕುತ್ತಿಗೆಯಲ್ಲಿದ್ದ ಸರ ಕಸಿದು ಪರಾರಿಯಾಗಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಸಾರ್ವಜನಿಕರು ಉಪಚರಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಇದನ್ನು ಓದಿ: ರಾಹುಲ್ ದ್ರಾವಿಡ್ ಸಹಾಯದಿಂದ ಚಿನ್ನಕ್ಕೆ ಮುತ್ತಿಕ್ಕಿದ ಸ್ಪಪ್ನ ಬರ್ಮನ್

ಇತ್ತೀಚೆಗಷ್ಟೇ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್’ನ ಹೆಪಥ್ಲಾನ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಸ್ವಪ್ನಾ ಬರ್ಮನ್ ಹೊಸ ಇತಿಹಾಸ ಬರೆದಿದ್ದರು.

ಇದನ್ನು ಓದಿ: ಟೀಕಿಸಿದವರಿಗೆ ಪದಕದ ಉತ್ತರ - ಸ್ಪಪ್ನ ಬರ್ಮನ್ ಚಿನ್ನದ ಹಿಂದಿನ ಕಹಾನಿ

click me!