ಕೋಚ್ ಸಿಟ್ಟಿಗೆ ತಜೀಂದರ್‌ಪಾಲ್ ಗೆದ್ದೇ ಬಿಟ್ಟರು ಚಿನ್ನ!

Published : Aug 27, 2018, 03:03 PM ISTUpdated : Sep 09, 2018, 09:01 PM IST
ಕೋಚ್ ಸಿಟ್ಟಿಗೆ ತಜೀಂದರ್‌ಪಾಲ್ ಗೆದ್ದೇ ಬಿಟ್ಟರು ಚಿನ್ನ!

ಸಾರಾಂಶ

ಶಾಟ್‌ಪುಟ್ ಎಸೆತದಲ್ಲಿ ಭಾರತದ ತಜೀಂದರ್‌ಪಾಲ್ ಚಿನ್ನ ಗೆದ್ದು ದಾಖಲೆ ಬರೆದಿದ್ದಾರೆ. ಈ ತಜೀಂದರ್‌ಪಾಲ್ ಚಿನ್ನದ ಗೆಲುವಿನ ಹಿಂದೆ ರೋಚಕ ಕತೆ ಇದೆ. ಪಾಲ್ ಚಿನ್ನದ ಗೆಲುವಿಗೆ ಕೋಚ್ ಹೇಗೆ ಸಹಾಯ ಮಾಡಿದ್ದಾರೆ? ಇಲ್ಲಿದೆ.

ಜಕರ್ತಾ(ಆ.27): 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಹಲವು ಕ್ರೀಡೆಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ಪದಕ ಗೆದ್ದ ಸಾಧನೆ ಮಾಡಿದಿ. ಶಾಟ್‌ಪುಟ್‌ನಲ್ಲಿ ಭಾರತ ತಜೀಂದರ್‌ಪಾಲ್ ಚಿನ್ನ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ತಜೀಂದರ್‌ಪಾಲ್ ಫೈನಲ್ ಸುತ್ತಿನ ಹೋರಾಟದಲ್ಲಿ ಕೋಚ್ ಬೈಗುಳವೇ ಚಿನ್ನಕ್ಕೆ ಕಾರಣವಾಯಿತು. ಅಂತಿಮ ಸುತ್ತಿನಲ್ಲಿ ತಜೀಂದರ್‌ಪಾಲ್ ಇನ್ನೇನು ಶಾಟ್‌ಪುಟ್ ಎಸೆಯಬೇಕು ಎನ್ನುವಷ್ಟರಲ್ಲಿ ಕೋಚ್ ಬೈಗುಳ ಶುರುಮಾಡಿದ್ದರು. 

ತಜೀಂದರ್‌ಪಾಲ್‌ನಲ್ಲಿ ಆಕ್ರೋಶ ಬರಿಸೋ  ಮೂಲಕ ಆತನಲ್ಲಿ ಮತ್ತಷ್ಟು ಶಕ್ತಿ ತುಂಬುವ ಪ್ಲಾನ್ ಚೆನ್ನಾಗಿ ವರ್ಕೌಟ್ ಆಯಿತು ಎಂದು ಕೋಚ್ ಹೇಳಿದ್ದಾರೆ.  ಅಂತಿಮ ಸುತ್ತಿಗೆ ಸಜ್ಜಾಗುತ್ತಿದ್ದ ತಜೀಂದರ್‌ಪಾಲ್ ಕಡೆ ತಿರುಗಿದ ಕೋಚ್, ನಾನು ನಿನಗೋಸ್ಕರ ಮನೆ ಬಿಟ್ಟು ಬಂದಿದ್ದೇನೆ. ನಿನ್ನ ತಂದೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಇವೆಲ್ಲ ನಿನಗೆ ನೆನಪಿದೆಯಾ ಎಂದು ಕೂಗಿ ಹೇಳಿದ್ದೆ. 

21 ಮೀಟರ್ ಎಸೆಯುವ ಗುರಿ ಹೊಂದಿದ್ದ ತಜೀಂದರ್‌ಪಾಲ್ ಅಂತಿಮ ಸುತ್ತಿನಲ್ಲಿ 20.75ಮೀಟರ್ ಎಸೆದು ಏಷ್ಯನ್ ಗೇಮ್ಸ್ ಕೂಟದಲ್ಲಿ ದಾಖಲೆ ಬರೆದರು. ಜೊತೆಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಗೆಲುವಿನ ಬಳಿಕ ತಜೀಂದರ್‌ಪಾಲ್ ತನ್ನೆಲ್ಲಾ ಶ್ರೇಯಸ್ಸನ್ನ ಕೋಚ್‌ಗೆ ಅರ್ಪಿಸಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಆಯೋಜಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್; ಅಭಿಮಾನಿಗಳು ಹೇಳಿದ್ದೇನು?
ಇನ್ನು ಆರು ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಔಟ್! ಈ ಸರಣಿಯಲ್ಲಿ ರೋ-ಕೋ ಜೋಡಿ ಕಮ್‌ಬ್ಯಾಕ್