ಭಾರತದ ಗೆಲುವಿಗೆ 253 ರನ್ ಟಾರ್ಗೆಟ್ ನೀಡಿದ ಅಫ್ಘಾನಿಸ್ತಾನ

By Web DeskFirst Published Sep 25, 2018, 8:40 PM IST
Highlights

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ಟಾಸ್ ಪ್ರಕ್ರಿಯೆಯಿಂದಲೇ ಕುತೂಹಲ ಕೆರಳಿಸಿದೆ. ಒಂದೆಡೆ ಎಂ.ಎಸ್ ಧೋನಿ ಮತ್ತೆ ನಾಯಕನಾಗಿದ್ದರೆ, ಇತ್ತ ಅಫ್ಘಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್

ದುಬೈ(ಸೆ.25):  ಭಾರತ ವಿರುದ್ದದ ಏಷ್ಯಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಮೊಹಮ್ಮದ್ ಶೆಹಜಾದ್ ಶತಕದ ನೆರವಿನಿಂದ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 252 ರನ್ ಸಿಡಿಸಿದೆ. ಈ ಮೂಲಕ ಭಾರತದ ಗೆಲುವಿಗೆ 253 ರನ್ ಟಾರ್ಗೆಟ್ ನೀಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ  ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕ ಮೊಹಮ್ಮದ್ ಶೆಹಝಾದ್ ಆರ್ಭಟಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಮತ್ತೊರ್ವ ಆರಂಭಿಕ ಜಾವೆದ್ ಅಹಮದಿ 5 ರನ್ ಸಿಡಿಸಿ ಸ್ಟಂಪ್ ಔಟಾದರು.  ಹಶ್ಮತುಲ್ಹಾ ಶಾಹಿದಿ ಹಾಗೂ ನಾಯಕ ಅಸ್ಗರ್ ಅಫ್ಘಾನ್ ಶೂನ್ಯ ಸುತ್ತಿದರು. ವಿಕೆಟ್ ಪತನದ ನಡುವೆಯೂ ಅದ್ಬುತ ಪ್ರದರ್ಶನ ನೀಡಿದ ಮೊಹಮ್ಮದ್ ಏಕದಿನ ಕ್ರಿಕೆಟ್‌ನಲ್ಲಿ 5ನೇ ಶತಕ ಪೂರೈಸಿದರು.

ಗುಲ್ಬಾದಿನ್ ನೈಬ್ 15 ರನ್ ಸಿಡಿಸಿ ಔಟಾದರೆ, ಮೊಹಮ್ಮದ್ ಶೆಹಜಾದ್ 124 ರನ್ ಕಾಣಿಕೆ ನೀಡಿದರು. ನಜಿಬುಲ್ಲ ಜದ್ರಾನ್ 20 ರನ್ ಸಿಡಿಸಿ ಔಟಾದರು. ಆದರೆ ಮೊಹಮ್ಮದ್ ನಬಿ 64 ರನ್ ಸಿಡಿಸಿದರು.  

ರಶೀದ್ ಖಾನ್ ಅಜೇಯ 12 ರನ್ ಸಿಡಿಸಿದರು. ಅಂತಿವಾಗಿ ಅಫ್ಘಾನಿಸ್ತಾನ  8 ವಿಕೆಟ್ ನಷ್ಟಕ್ಕೆ 252 ರನ್ ಸಿಡಿಸಿತು. ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಮಿಂಚಿದರು.
 

click me!