
ಕೊಲ್ಕತ್ತಾ(ಅ.02): ಆರ್. ಅಶ್ವಿನ್ ಟೆಸ್ಟ್ನಲ್ಲಿ ಕಮಾಲ್ ಮಾಡ್ತಿದ್ದಾರೆ. ಒಂದರ ಹಿಂದೆ ಒಂದು ದಾಖಲೆಯನ್ನು ನಿರ್ಮಿಸ್ತಿದ್ದಾರೆ. ಮೊದಲ ಟೆಸ್ಟ್ನಲ್ಲಿ ವಿಶ್ವದಾಖಲೆಯ 2ನೇ ವೇಗದ 200 ವಿಕೆಟ್ ಟೇಕರ್ ಎನಿಸಿಕೊಂಡಿದರು. ಇದೀಗ ಮತ್ತೊಂದು ಅಪರೂಪದ ದಾಖಲೆಗೆ ಭಾಜನರಾಗಿದ್ದಾರೆ.
ಆರ್. ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡ್ತಿದ್ದಾರೆ. ಈತನ ಸ್ಪಿನ್ ಮೋಡಿಗೆ ಇಡೀ ವಿಶ್ವ ಕ್ರಿಕೆಟ್ ಲೋಕವೇ ನಿಬ್ಬೆರಗಾಗಿದೆ. ಇಂತಹ ಆಟಗಾರ ಇದೀಗ 2ನೇ ಟೆಸ್ಟ್ನಲ್ಲಿ ಮತ್ತೊಂದು ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
200 ವಿಕೆಟ್.. 1500 ರನ್..
ಟೆಸ್ಟ್ ಕ್ರಿಕೆಟ್ನಲ್ಲಿ ಆಲ್ರೌಂಡರ್ಗಳು ಮಿಂಚಿರೋದು ತುಂಬಾನೇ ಅಪರೂಪ. ಅದರಲ್ಲೂ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಅಂಕಿ ಅಂಶಗಳನ್ನು ಹೊಂದಿರೋ ಆಟಗಾರರು ಇಲ್ಲವೇ ಇಲ್ಲ ಅಂತಾನೇ ಹೇಳಬಹುದು. ಹೀಗಿರುವಾಗ ಅಶ್ವಿನ್ ಮಾತ್ರ ಎರಡರಲ್ಲಿಯೂ ಮಿಂಚ್ತಿದ್ದಾರೆ. ಆ ಮೂಲಕ ವಿಶ್ವದ ನಂಬರ್ 1 ಆಲ್ರೌಂಡರ್ ಅನ್ನೋದನ್ನು ಪ್ರೂವ್ ಮಾಡ್ತಿದ್ದಾರೆ.
ಮೊದಲ ಟೆಸ್ಟ್ನಲ್ಲಿ 200 ವಿಕೆಟ್ ಸಾಧನೆ ಮಾಡಿದ್ದ ಅವರು, ಇದೀಗ ಕಿವೀಸ್ ವಿರುದ್ಧದ 2ನೇ ಟೆಸ್ಟ್ನಲ್ಲಿ 1500 ರನ್ ಪೂರೈಸಿದ್ದಾರೆ. ಹೌದು, ಅಶ್ವಿನ್ ಮೊದಲ ಇನ್ನಿಂಗ್ಸ್ನಲ್ಲಿ 21 ರನ್ ಮಾಡ್ತಿದ್ದಾಗಿಯೇ ಟೆಸ್ಟ್ ಮಾದರಿಯಲ್ಲಿ 1500 ರನ್ ಹಾಗೂ 200 ವಿಕೆಟ್ ಪೂರೈಸಿದ ಕೆಲವೇ ಕೆಲ ಆಲ್ರೌಂಡರ್ಗಳ ಪಟ್ಟಿಗೆ ಸೇರಿಕೊಂಡರು.
ವಿಶ್ವದಾಖಲೆಯ ವೇಗದ ಸಾಧನೆ
ಇನ್ನು ಅಶ್ವಿನ್ 200 ವಿಕೆಟ್ ಹಾಗೂ 1500 ರನ್ ಸಾಧನೆ ವಿಶ್ವದಾಖಲೆಯ ವೇಗದ ಹಾದಿಯಾಗಿದೆ. ಹೌದು, ಅಶ್ವಿನ್ ಇದಕ್ಕಾಗಿ ತೆಗೆದ್ಕೊಂಡಿರೋದು ಕೇವಲ 38 ಟೆಸ್ಟ್ಗಳನ್ನು ಮಾತ್ರ. ಇದಕ್ಕೂ ಮೊದಲು ಈ ದಾಖಲೆ ಇಯಾನ್ ಬೋಥಮ್ ಹೆಸರಲ್ಲಿತ್ತು. 41 ಟೆಸ್ಟ್ಗಳಲ್ಲಿ ಭೋಥಮ್ 200 ವಿಕೆಟ್ ಜೊತೆಗೆ 1500ರನ್ ಪೂರೈಸಿದ್ರು. ಆದ್ರೀಗ ಅಶ್ವಿನ್ ಕೇವಲ 38 ಟೆಸ್ಟ್ಗಳಲ್ಲಿಯೇ ಈ ಸಾಧನೆ ಮಾಡಿದ್ದು, ಅಪರೂಪದ ದಾಖಲೆಯೊಂದನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಟೆಸ್ಟ್ ವೃತ್ತಿ ಬದುಕಿನಲ್ಲಿ ಅಶ್ವಿನ್ ಸಾಧನೆ ಹೀಗಿದೆ. 38 ಟೆಸ್ಟ್ಗಳಿಂದ 203 ವಿಕೆಟ್ ಪಡೆದಿರೋ ಅವರು, 1505 ರನ್ ಮಾಡಿದ್ದಾರೆ. 19 ಸಲ 5 ವಿಕೆಟ್ ಸಾಧನೆ ಜೊತೆಗೆ 5 ಸಲ 10 ವಿಕೆಟ್ ಪಡ್ಕೊಂಡಿದ್ದಾರೆ.
ಅಶ್ವಿನ್ ಇದೇ ಲಯದಲ್ಲಿ ಪ್ರದರ್ಶನ ನೀಡ್ತಿದ್ರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಮುರಿಯುವುದರಲ್ಲಿ ಡೌಟಿಲ್ಲ. ಅಲ್ದೆ, ವಿಶ್ವ ಕಂಡ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ತಾವೂ ಒಬ್ಬರಾಗಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.