
ಕಾನ್ಪುರ(ಸೆ.24): ಕಾನ್ಪುರದಲ್ಲಿ ನಡೆಯುತ್ತಿರುವ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಉತ್ತಮ ಸ್ಥಿತಿಯಲ್ಲಿದೆ. ನಿನ್ನೆ ಒಂದೇ ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್ ತಂಡವನ್ನ ಕೇವಲ 262 ರನ್`ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ತಂಡ ಕಮ್ ಬ್ಯಾಕ್ ಮಾಡುವ ಮೂಲಕ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ನಿನ್ನೆ ತಲಾ ಅರ್ಧಶತಕ ಸಿಡಿಸಿ ಕ್ರೀಸ್`ಗೆ ಅಂಟಿ ಕುಳಿತಿದ್ದ ಲಾಥಮ್ ಮತ್ತು ವಿಲಿಯಮ್ ಸನ್`ಗೆ ಅಶ್ವಿನ್ ಮತ್ತು ಜಡೇಜಾ ಪೆಲಿವಿಯನ್ ದಾರಿ ತೋರಿಸಿದರು. ಇದಾದ ಬಳಿಕ ಯಾರೊಬ್ಬರನ್ನೂ ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲು ಬಿಡಲಿಲ್ಲ ಈ ಸ್ಪಿನ್ ಮಾಂತ್ರಿಕರು. ಬಳಿಕ ಬಂದವರೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು. 262 ರನ್`ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್ 55 ರನ್`ಗಳ ಹಿನ್ನಡೆ ಅನುಭವಿಸಿತು. ಮೂವರು ಬ್ಯಾಟ್ಸ್`ಮನ್`ಗಳು ಶೂನ್ಯ ಸುತ್ತಿದ್ದರು. ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಜಡೇಜಾ 5 ಮತ್ತು ಅಶ್ವಿನ್ 4 ವಿಕೆಟ್ ಕಬಳಿಸಿದರು.
55 ರನ್`ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಕೆ.ಎಲ್. ರಾಹುಲ್ 38 ರನ್`ಗಳಿಗೆ ನಿರ್ಗಮಿಸಿದ ಬಳಿಕ ಕ್ರೀಸ್`ಗೆ ಕಚ್ಚಿ ನಿಂತಿರುವ ಮುರಳಿ ವಿಜಯ್(64), ಚೆತೇಶ್ವರ್ ಪೂಜಾರ(50) ತಲಾ ಅರ್ಧಶತಕ ಸಿಡಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 3ನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 159/1 ರನ್ ಗಳಿಸಿದ್ದು, ಒಟ್ಟಾರೆ 215 ರನ್`ಗಳ ಲೀಡ್ ಪಡೆದಿದೆ.
ಸಂಕ್ಷಿಪ್ತ ಸ್ಕೋರ್:
ಮೊದಲ ಇನ್ನಿಂಗ್ಸ್
ಭಾರತ - 318 ರನ್`ಗೆ ಆಲೌಟ್
ನ್ಯೂಜಿಲೆಂಡ್ - 262ಕ್ಕೆ ಆಲೌಟ್
ಬೌಲಿಂಗ್:
ರವೀಂದ್ರ ಜಡೇಜಾ - 73/5
ಆರ್. ಅಶ್ವಿನ್ - 93/4
2ನೇ ಇನ್ನಿಂಗ್ಸ್ - 3ನೇ ದಿನದಾಟದಂತ್ಯಕ್ಕೆ
ಭಾರತ - 159/1
ಮುರಳಿ ವಿಜಯ್ - 64 ರನ್
ಚೆತೇಶ್ವರ್ ಪೂಜಾರ - 50 ರನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.