ವಿಂಬಲ್ಡನ್ ಕದನ: ಮುಗಿದ ಮರ್ರೆ ಹೋರಾಟ..!

By Suvarna Web DeskFirst Published Jul 12, 2017, 10:28 PM IST
Highlights

ಅಚ್ಚರಿಯ ಗೆಲುವಿನೊಂದಿಗೆ ಕ್ವೆರ್ರಿ 2009ರ ಬಳಿಕ ವಿಂಬಲ್ಡನ್ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ಅಮೆರಿಕ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಲಂಡನ್(ಜು.12): ಪ್ರಸಕ್ತ ಸಾಲಿನ ವಿಂಬಲ್ಡನ್ ಟೂರ್ನಿಯಲ್ಲಿನ ಕ್ವಾರ್ಟರ್ ಪೈನಲ್ ಪಂದ್ಯವು ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ವಿಶ್ವ ನಂಬರ್ 1 ಶ್ರೇಯಾಂಕಿತ, ಹಾಲಿ ಚಾಂಪಿಯನ್ ಬ್ರಿಟನ್'ನ ಆ್ಯಂಡಿ ಮರ್ರೆ ವಿಂಬಲ್ಡನ್ ಕ್ವಾರ್ಟರ್ ಫೈನಲ್'ನಲ್ಲಿ ಆಘಾತ ಅನುಭವಿಸುವ ಮೂಲಕ ತಮ್ಮ ಹೋರಾಟ ಮುಗಿಸಿದ್ದಾರೆ.

ಅಮೆರಿಕದ ಸ್ಯಾಮ್ ಕ್ವೆರ್ರಿ ವಿರುದ್ಧ ನಡೆದ ಪಂದ್ಯದಲ್ಲಿ ಮರ್ರೆ 6-3, 4-6, 7-6(7-4),1-6,1-6 ಸೆಟ್‌'ಗಳಲ್ಲಿ ಸೋಲು ಅನುಭವಿಸಿದರು.

ಅಚ್ಚರಿಯ ಗೆಲುವಿನೊಂದಿಗೆ ಕ್ವೆರ್ರಿ 2009ರ ಬಳಿಕ ವಿಂಬಲ್ಡನ್ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ಅಮೆರಿಕ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಸೆಮೀಸ್‌'ಗೇರಿದ ಸಿಲಿಚ್ :

ರಾಫೆಲ್ ನಡಾಲ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿ ಮಿಂಚಿದ್ದ ಲಕ್ಸೆಂಬರ್ಗ್‌'ನ ಜೈಲ್ಸ್ ಮುಲ್ಲರ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚು ನೂರಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಲ್ಲರ್, ಮಾಜಿ ಯುಎಸ್ ಓಪನ್ ಚಾಂಪಿಯನ್ ಕ್ರೊಯೆಷಿಯಾದ ಮರಿನ್ ಸಿಲಿಚ್ ವಿರುದ್ಧ ಸೋಲು ಕಂಡರು.

ಸತತ 4ನೇ ಬಾರಿಗೆ ವಿಂಬಲ್ಡನ್ ಕ್ವಾರ್ಟರ್ ಫೈನಲ್‌'ಗೇರಿದ್ದ ಸಿಲಿಚ್ ಸುಮಾರು 4 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ 3-6, 7-6(6), 7-5, 5-7, 6-1 ಸೆಟ್‌'ಗಳಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶ ಮಾಡಿದರು.

2014ರ ಯುಎಸ್ ಓಪನ್ ಸೆಮೀಸ್‌'ನಲ್ಲಿ ಜೋಕೋವಿಚ್ ಸೋಲಿಸಿ ಫೈನಲ್‌'ಗೇರಿದ್ದ ಸಿಲಿಚ್, ಕೇ ನಿಶಿಕೋರಿ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು

click me!