
ಶಾಂಘೈ(ಅ.16): ಸ್ಟಾರ್ ಟೆನಿಸಿಗ ಬ್ರಿಟನ್ನಿನ ಆ್ಯಂಡಿ ಮರ‌್ರೆ, ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕೆಲ ವಾರಗಳಲ್ಲಿ ಎರಡು ಪ್ರಶಸ್ತಿ ಮತ್ತು ಪ್ರಸಕ್ತ ವರ್ಷದಲ್ಲಿ 6ನೇ ಟ್ರೋಫಿ ಜಯಿಸಿದ ಹೆಗ್ಗಳಿಕೆಗೆ ಮರ‌್ರೆ ಪಾತ್ರರಾಗಿದ್ದಾರೆ.
ಇಲ್ಲಿನ ಟೆನಿಸ್ ಕೋರ್ಟ್‌ನಲ್ಲಿ ಇಂದು ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬ್ರಿಟನ್ನಿನ ಆ್ಯಂಡಿ ಮರ‌್ರೆ 7-6(1), 6-1 ಸೆಟ್‌ಗಳಿಂದ ಸ್ಪೇನ್‌ನ ರಾಬೆರ್ಟೊ ಬೌಟಿಸ್ಟಾ ಎದುರು ಗೆಲುವು ಸಾಸಿದರು. ಫೈನಲ್ ಹಣಾಹಣಿಯ ಆರಂಭದಲ್ಲಿ ಉಭಯ ಆಟಗಾರರ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಆದರೂ ಮರ‌್ರೆ 5-4ರಿಂದ ಮುನ್ನಡೆ ಸಾಸಿದ್ದರು. ನಂತರದ ಆಟದಲ್ಲಿ ಬೌಟಿಸ್ಟಾ ಸಮಬಲ ಸಾಸುವಲ್ಲಿ ಯಶಸ್ವಿಯಾದರು. ಟೈಬ್ರೇಕರ್ ಅವಕಾಶ ಪಡೆದ ಪಂದ್ಯದಲ್ಲಿ 1 ಅಂಕಗಳಿಂದ ಮರ‌್ರೆ ಮುನ್ನಡೆ ಪಡೆದರು. ಎರಡನೇ ಸೆಟ್‌ನಲ್ಲಿ ನೀರಸ ಪ್ರದರ್ಶನ ತೋರಿದ ಬೌಟಿಸ್ಟಾ ಎದುರು ಮರ‌್ರೆ ಸುಲಭವಾಗಿ ಅಂಕಗಳಿಸಿದರು. 5 ಅಂಕಗಳ ಮುನ್ನಡೆಯಲ್ಲಿ ಮರ‌್ರೆ ಪಂದ್ಯ ಜಯಿಸಿದರು.
ಶನಿವಾರ ನಡೆದಿದ್ದ ಸೆಮೀಸ್‌ನಲ್ಲಿ ಬೌಟಿಸ್ಟಾ, ವಿಶ್ವದ ಅಗ್ರ ಕ್ರಮಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. ವಿಂಬಲ್ಡನ್ ಮತ್ತು ರಿಯೊ ಒಲಿಂಪಿಕ್ಸ್ ಕೂಟದಲ್ಲಿ ಪ್ರಶಸ್ತಿ ಜಯಿಸಿದ ನಂತರ ಮರ‌್ರೆ ಏಷ್ಯಾದಲ್ಲಿ ನಡೆದ 10 ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಚೀನಾ ಓಪನ್ ಜಯಿಸಿದ್ದ ಮರ‌್ರೆ ಇದೀಗ ಶಾಂಘೈ ಓಪನ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಅಲ್ಲದೇ ಮರ‌್ರೆ ವೃತ್ತಿ ಜೀವನದ 65ನೇ ಪ್ರವಾಸದ ಟೂರ್ನಿಯಲ್ಲಿ ಯಶಸ್ಸು ಸಾಸಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.