
ಕರಾಚಿ(ಏ.058): ಇತ್ತೀಚೆಗಷ್ಟೇ ಕಾಶ್ಮೀರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹೌದು, ಕಾಶ್ಮೀರ ಕಣಿವೆಯನ್ನು ಭಾರತ ಆಕ್ರಮಿಸಿದ್ದು, ಈ ವಿಚಾರವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಭಾರತೀಯರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ನಾನು ಭಾರತೀಯ ಪ್ರಾಂಚೈಸಿಯ ಐಪಿಎಲ್'ನಲ್ಲಿ ಆಡಲು ಆಸಕ್ತಿಯೂ ಇಲ್ಲ ಹಾಗೆಯೇ ಐಪಿಎಲ್'ನಲ್ಲಿ ಆಡಲು ಬಯಸುವುದೂ ಇಲ್ಲ ಎಂದಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಿದ್ದ ಅಫ್ರಿದಿ, ಒಂದು ವೇಳೆ ಭಾರತದ ಪ್ರಾಂಚೈಸಿಗಳು ಐಪಿಎಲ್'ನಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. 'ಒಂದು ವೇಳೆ ಐಪಿಎಲ್ ಆಡಲು ಕರೆಬಂದರೂ ನಾನು ಹೋಗುವುದಿಲ್ಲ. ನಮ್ಮ ಪಿಎಸ್ಎಲ್ ಮುಂದೊಂದು ದಿನ ಐಪಿಎಲ್ ಟೂರ್ನಿಯನ್ನು ಹಿಂದಿಕ್ಕಲಿದೆ. ನಾನು ಪಿಎಲ್ಎಲ್ ಟೂರ್ನಿಯನ್ನು ಎಂಜಾಯ್ ಮಾಡುತ್ತಿದ್ದು, ನನಗೆ ಐಪಿಎಲ್ ಅವಶ್ಯಕತೆಯಿಲ್ಲ. ನನಗೆ ಐಪಿಎಲ್ ಬಗ್ಗೆ ಈ ಹಿಂದೆಯೂ ಆಸಕ್ತಿಯಿರಲಿಲ್ಲ ಹಾಗೆಯೇ ಈಗಲೂ ಇಲ್ಲ ಎಂದು ಅಫ್ರಿದಿ ಹೇಳಿದ್ದಾರೆ.
ಈ ಹಿಂದೆ 2012ರಲ್ಲಿ ಐಪಿಎಲ್ ಕುರಿತು, ಇದೊಂದು ಅತ್ಯುತ್ತಮ ವಿದೇಶಿ ಕ್ರಿಕೆಟ್ ಲೀಗ್ ಎಂದು ಅಫ್ರಿದಿ ಕೊಂಡಾಡಿದ್ದನ್ನು ಸ್ಮರಿಸಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.