ಹಾಕಿ ವಿಶ್ವಕಪ್ 2018: ಒಡಿಸ್ಸಾದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ!

Published : Nov 27, 2018, 08:48 PM IST
ಹಾಕಿ ವಿಶ್ವಕಪ್ 2018: ಒಡಿಸ್ಸಾದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ!

ಸಾರಾಂಶ

14ನೇ ಹಾಕಿ ವಿಶ್ವಕಪ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭ ಅಚ್ಚುಕಟ್ಟಾಗಿ ಆಯೋಜನೆಯಾಗಿದೆ. ಬಾಲಿವುಡ್ ನಟ ಶಾರುಖ್ ಖಾನ್, ಮಾಧುರಿ ದೀಕ್ಷಿತ್, ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸೇರಿದಂತೆ ಸೆಲೆಬ್ರೆಟಿಗಳ ದಂಡು ಉದ್ಘಾಟನ ಸಮಾರಂಭದ ಕಳೆ ಹೆಚ್ಚಿಸಿತು.  

ಒಡಿಸ್ಸಾ(ನ.27): ಬಹುನಿರೀಕ್ಷಿತ ಹಾಕಿ ವಿಶ್ವಕಪ್ ಟೂರ್ನಿ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಒಡಿಶಾದ ಕಳಿಂಗ ಮೈದಾನದಲ್ಲಿ ಆಯೋಜಿಸಲಾದ ವರ್ಣರಂಜಿತ ಸಮಾರಂಭದಲ್ಲಿ 14ನೇ ಹಾಕಿ ವಿಶ್ವಕಪ್ ಟೂರ್ನಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

 

 

ಬಾಲಿವುಡ್ ನಟಿ ಮಾಧುರಿ ಧೀಕ್ಷಿತ್ ಅದ್ಬುತ ಪರ್ಪಾಮೆನ್ಸ್ ನೆರೆದಿದ್ದ ಕ್ರೀಡಾಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿತು. ಜೊತೆಗೆ ಒಡಿಸ್ಸಾದ ಸಾಂಸ್ಕೃತಿ ನೃತ್ಯಗಳು, ಸುಂದರ ಸಂಜೆಯ ಮನರಂಜನಾ ಕಾರ್ಯಕ್ರಮದ ಮೆರಗು ಹೆಚ್ಚಿಸಿತು. 

ಮಾಧುರಿ ದೀಕ್ಷಿತ್ ಬಳಿಕ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಮ್ಯೂಸಿಕ್ ಮೋಡಿ ಮಾಡಿದರು. ಬಾಲಿವುಡ್ ಗೀತೆಗಳ ಜೊತೆಗೆ ಹಾಕಿ ವಿಶ್ವಕಪಪ್ ಆ್ಯಂಥಮ್ ಹಾಡಿನ ಮೂಲಕ ಎಲ್ಲರನ್ನ ರಂಜಿಸಿದರು.

ಇದೇ ಕಾರ್ಯಕ್ರಮದಲ್ಲಿ 1975ರಲ್ಲಿ ಹಾಕಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರನ್ನ ಗೌರವಿಸಲಾಯಿತು. ಇಷ್ಟೇ ಅಲ್ಲ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಕಿ ವಿಶ್ವಕಪ್ ಟೂರ್ನಿಗೆ ಚಾಲನೆ ನೀಡಿದರು. 

 

 

ಅದ್ಧೂರಿ ಸಮಾರಂಭ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟ ಬಾಲಿವುಡ್ ನಟ ಶಾರೂಖ್ ಖಾನ್ ಸ್ಪೂರ್ತಿಯುತ ಮಾತುಗಳು ಟೂರ್ನಿಯ ಕಳೆ ಹೆಚ್ಚಿಸಿತು. ಇಷ್ಟೇ ಅಲ್ಲ ಭಾರತ ಸೇರಿದಂತೆ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವು 16 ತಂಡದ ನಾಯಕರು ಹಾಗೂ ತಂಡವನ್ನ ಆತ್ಮೀಯವಾಗಿ ಬರಮಾಡಿಕೊಂಡರು.  ಇದೇ ವೇಳೆ ಎಲ್ಲಾ ತಂಡಗಳಿಗೆ ಶುಭಕೋರಿದ ಶಾರೂಖ್, ಟೀಂ ಇಂಡಿಯಾ ಗೆಲುವು ಸಾಧಿಸಲಿ ಎಂದು ಹಾರೈಸಿದರು.

 

 

ನವೆಂಬರ್ 28 ರಿಂದ ಡಿಸೆಂಬರ್ 16ರ ವರೆಗೆ ಹಾಕಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಆತಿಥೇಯ ಭಾರತ ಸೇರಿದಂತೆ 16 ತಂಡಗಳು ಪಾಲ್ಗೊಳ್ಳುತ್ತಿದೆ. ಒಟ್ಟು 5 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಲಾಗಿದೆ. ಭಾರತ ಸಿ ಗುಂಪಿನಲ್ಲಿದೆ.

ಭಾರತ ತಂಡ:
ಗೋಲ್‌ಕೀಪ​ರ್ಸ್: ಪಿ.ಆರ್‌.ಶ್ರೀಜೇಶ್‌, ಕೃಷನ್‌ ಬಹುದ್ದೂರ್‌. 
ಡಿಫೆಂಡ​ರ್ಸ್: ಹರ್ಮನ್‌ಪ್ರೀತ್‌ ಸಿಂಗ್‌, ಬೀರೇಂದ್ರ ಲಾಕ್ರಾ, ವರುಣ್‌ ಕುಮಾರ್‌, ಕೊತಾಜಿತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಅಮಿತ್‌ ರೋಹಿದಾಸ್‌. 
ಮಿಡ್‌ಫೀಲ್ಡ​ರ್ಸ್: ಮನ್‌ಪ್ರೀತ್‌ ಸಿಂಗ್‌ (ನಾಯಕ), ಚಿಂಗ್ಲೆನ್ಸಾನ ಸಿಂಗ್‌, ನೀಲಕಂಠ ಶರ್ಮಾ, ಹಾರ್ದಿಕ್‌ ಸಿಂಗ್‌, ಸುಮಿತ್‌. 
ಫಾರ್ವರ್ಡ್ಸ್: ಆಕಾಶ್‌ದೀಪ್‌ ಸಿಂಗ್‌, ಮನ್‌ದೀಪ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಲಲಿತ್‌ ಉಪಾಧ್ಯಾಯ, ಸಿಮ್ರನ್‌ಜೀತ್‌ ಸಿಂಗ್‌.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!