ಸ್ಥಗಿತವಾಗಿದ್ದ ಪ್ರಸಿದ್ಧ HPC ಚಿತ್ರಮಂದಿರ ಪುನರಾರಂಭ

By Kannadaprabha NewsFirst Published Oct 18, 2019, 12:27 PM IST
Highlights

ಸ್ಥಗಿತವಾಗಿದ್ದ ಪ್ರಸಿದ್ಧ ಎಚ್ ಪಿ ಸಿ ಚಿತ್ರ ಮಂದಿರ ಮತ್ತೆ ತೆರೆಯಲಾಗುತ್ತಿದೆ.  ನವೀಕರಣದ ಕಾರಣಕ್ಕೆ ಸ್ಥಗಿತಗೊಂಡಿದ್ದ ನಗರದ ಮಧ್ಯ ಭಾಗದಲ್ಲಿ ಇರುವ ಚಿತ್ರ ಮಂದಿರ ಸಂಪೂರ್ಣ ಅಭಿವೃದ್ಧಿ ಪಡಿಸಲಾಗಿದೆ. 

ಶಿವಮೊಗ್ಗ [ಅ.18]:  ಕಳೆದ ಕೆಲ ಸಮಯದಿಂದ ನವೀಕರಣದ ಕಾರಣಕ್ಕೆ ಸ್ಥಗಿತಗೊಂಡಿದ್ದ ನಗರದ ಮಧ್ಯ ಭಾಗದಲ್ಲಿ ಇರುವ ಹೆಚ್‌ಪಿಸಿ ಚಿತ್ರಮಂದಿರ ಪುನಃ ಆರಂಭಗೊಳ್ಳಲಿದೆ.

ಸುಮಾರು 2 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನವೀಕರಣಗೊಂಡಿರುವ ಚಿತ್ರಮಂದಿರ ಅ. 18ರಿಂದ ಶುಭಾರಂಭಗೊಳ್ಳಲಿದೆ ಎಂದು ಚಿತ್ರಮಂದಿರದ ಮಾಲೀಕ ಪಂಚಾಕ್ಷರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ತಂದೆಯವರು 1965 ರಲ್ಲಿ ಚಿತ್ರಮಂದಿರವನ್ನು ನಿರ್ಮಿಸಿದ್ದರು. 55 ವರ್ಷಗಳಿಂದ ಉದ್ಯಮ ನಡೆಸುತ್ತಾ ಬಂದಿದ್ದೇವೆ. ಕೆಲ ತಿಂಗಳಿನಿಂದ ಚಿತ್ರಮಂದಿರದ ದುರಸ್ತಿ ಕಾರ್ಯಕ್ಕೆಂದು ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಅತ್ಯಾಧುನಿಕ ತಂತ್ರಜ್ಞಾನವನ್ನು ಚಿತ್ರಮಂದಿರ ಹೊಂದಿದ್ದು, ಸಾರ್ವಜನಿಕರ ಸೇವೆಗೆ ಸಜ್ಜಾಗಿದೆ ಎಂದರು.

ಚಿತ್ರಮಂದಿರದಲ್ಲಿ ಸುಮಾರು 610 ಆಸನಗಳಿವೆ. ಎಲ್ಲವು ಪುಷ್‌ಬ್ಯಾಕ್‌ ಆಸನಗಳಾಗಿವೆ. ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ. ಉತ್ತಮ ಧ್ವನಿವರ್ಧಕ, ಅತ್ಯಾಧುನಿಕ ಪರದೆ ಹೀಗೆ ಎಲ್ಲ ರೀತಿಯಲ್ಲೂ ಸಿನೆಮಾ ಮಂದಿರ ಆಕರ್ಷಕವಾಗಿ ನವೀಕರಣಗೊಂಡಿದೆ. ಅ.18ರ ಶುಕ್ರವಾರದಿಂದ ಪುನಃ ಪ್ರದರ್ಶನ ಆರಂಭವಾಗಲಿದ್ದು, ಶ್ರೀ ಮುರಳಿ ಹಾಗೂ ಶ್ರೀಲೀಲಾ ಅಭಿನಯದ ಭರಾಟೆ ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಧುನಿಕವಾಗಿ ನಿರ್ಮಾಣಗೊಂಡಿರುವ ಚಿತ್ರಮಂದಿರದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾ್ಯಕ್ಸ್‌ ಕೌಂಟರ್‌, ಕಾಫಿ-ಟೀ ಮುಂತಾದ ಪಾನಿಯಗಳು ನಿಗದಿತ ಬೆಲೆಯಲ್ಲಿ ಗ್ರಾಹಕರಿಗೆ ದೊರಕಲಿವೆ. ಜೊತೆಗೆ ಪೇಟಿಯಂ, ಬುಕ್‌ ಮೈಶೋ ಮೂಲಕ ಆನ್‌ಲೈನ್‌ ಬುಕ್ಕಿಂಗ್‌ ಮಾಡುವುದಕ್ಕೂ ಅವಕಾಶವಿದೆ. ಬಾಲ್ಕನಿ 150 ರು., ಫಸ್ಟ್‌ ಕ್ಲಾಸ್‌ಗೆ 100 ರು, ದರ ನಿಗದಿಪಡಿಸಲಾಗಿದೆ ಎಂದರು.

ಹೆಚ್‌ಪಿಸಿ ಚಿತ್ರಮಂದಿರ ಕಳೆದ 55 ವರ್ಷಗಳಲ್ಲಿ ನೂರಾರು ಕನ್ನಡ, ಹಿಂದಿ, ಇಂಗ್ಲಿಷ್‌ ಚಿತ್ರಗಳನ್ನು ಪ್ರದರ್ಶಿಸಿದೆ. ಮಯೂರ, ಸೂರ್ಯವಂಶ, ಓಂ, ಬಾಬಿ, ರಾಮು, ಹೆಬ್ಬುಲಿ, ಪುಟ್ನಂಜ ಸೇರಿದಂತೆ ಹಲವು ಚಿತ್ರಗಳು ಶತದಿನೋತ್ಸವ ಕಂಡಿವೆ. ವರನಟ ಡಾ.ರಾಜ್‌ಕುಮಾರ್‌, ಜಯಮಾಲ, ಪುನೀತ್‌ ರಾಜ್‌ ಕುಮಾರ್‌, ಸುದೀಪ್‌, ಗಣೇಶ್‌, ರಾಘವೇಂದ್ರ ರಾಜ್‌ಕುಮಾರ್‌, ರಿಷಿಕಪೂರ್‌, ದ್ವಾರಕೀಶ್‌ ಸೇರಿದಂತೆ ಹಲವು ನಟ ನಟಿಯರು, ನಿರ್ದೇಶಕರು ಚಿತ್ರಮಂದಿರದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದರು. 

click me!