ಭೂಮಿಯಲ್ಲಿ ಪ್ರಾಣಿ ಹುಟ್ಟು ಹೇಗಾಯ್ತು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ 460 ಕೋಟಿ ವರ್ಷ ಹಳೇ ಉಲ್ಕೆ

Published : Feb 02, 2026, 01:41 PM IST
meteorite

ಸಾರಾಂಶ

ಭೂಮಿಯಲ್ಲಿ ಪ್ರಾಣಿ ಹುಟ್ಟು ಹೇಗಾಯ್ತು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ 460 ಕೋಟಿ ವರ್ಷ ಹಳೇ ಉಲ್ಕೆ, ಈ ಉಲ್ಕೆ ಸೌರಮಂಡಲ ಹಲವು ಕುತೂಹಲಕ್ಕೆ ಉತ್ತರ ನೀಡಲಿದೆ. ಇದೀಗ ಈ ಉಲ್ಕೆ ಬರೋಬ್ಬರಿ 460 ಕೋಟಿ ವರ್ಷ ಹಳೇದು ಅನ್ನೋದು ಪತ್ತೆಯಾಗಿದೆ.

ವಿಕ್ಟೋರಿಯಾ (ಫೆ.02) ಭೂಮಿ, ಆಕಾಶ, ಸೌರಮಂಡಲ, ಗ್ರಹಗಳು, ನಕ್ಷತ್ರಗಳ ಕುರಿತು ಎಷ್ಟೇ ತಿಳಿದುಕೊಂಡರೂ ಕುತೂಹಲ, ಕೌತುಕ ಇದ್ದೆಇರುತ್ತದೆ. ಕಾರಣ ಪ್ರತಿ ದಿನದ ಅಧ್ಯಯನದಲ್ಲಿ ಹೊಸ ವಿಚಾರಗಳು ಬೆಳೆಕಿಗೆ ಬರುತ್ತದೆ. ಇತ್ತ ವಿಜ್ಞಾನಿಗಳು, ಸಂಶೋಧಕರು ಈ ಕುರಿತು ಸತತ ಅಧ್ಯಯನ ನಡೆಸುತ್ತಿದ್ದಾರೆ. ಈ ಪೈಕಿ ಮರ್ಚಿಸನ್ ಉಲ್ಕೆ ಕುರಿತು ವಿಜ್ಞಾನಿಗಳು ನಡೆಸಿದ ಸತತ ಅಧ್ಯಯನದಿಂದ ಇದರ ಇತಿಹಾಸ ಪತ್ತೆಯಾಗಿದೆ. ವಿಶೇಷ ಅಂದರೆ ಈ ದಾಖಲೆಗಳು ಇಡೀ ಭೂಮಂಡಲವನ್ನೇ ಮರು ವ್ಯಾಖ್ಯಾನಿಸುವ ರೀತಿಯಲ್ಲಿದೆ. ಕಾರಣ ಈ ಉಲ್ಕಾಶಿಲೆ ಭೂಮಿಗಿಂತ ಹಳೇಯದ್ದು ಎಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಈ ಮರ್ಚಿಸಿನ್ ಉಲ್ಕಾಶಿಲೆ ಬರೋಬ್ಬರಿ 460 ಕೋಟಿ ವರ್ಷಗಳಷ್ಟು ಹಳೆಯದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿ, ಸೂರ್ಯ ಅಸ್ತಿತ್ವಕ್ಕೆ ಬರುವ ಮೊದಲೇ ಉಲ್ಕಾಶಿಲೆಗಳು ರೂಪುಗೊಂಡಿತ್ತು. ಸಣ್ಣ ಹರುಗಳ ರೀತಿ ಇದ್ದ ಈ ಉಲ್ಕಾಶಿಲೆಗಳು ರೂಪಾಂತರಗೊಂಡಿದೆ. ಇದೀಗ ಈ ಮರ್ಚಿಸ್ ಉಲ್ಕಾಶಿಲೆಗಳು ಇತಿಹಾಸ , ಬೆಳವಣಿಗೆ, ಭೂಮಿ, ಸೂರ್ಯ ಸೇರಿದಂತೆ ಭೂಮಂಡಲ , ಸೌರಮಂಡಲದ ಅಸ್ತಿತ್ವಗಳ ಕುರಿತು ಉಲ್ಕಾಶಿಲೆ ಅಧ್ಯಯನ ಹೊಸ ವಿಚಾರಗಳನ್ನು ಬಯಲಿಗೆಳೆಯಲಿದೆ. ಈ ನಿಟ್ಟಿನಲ್ಲಿ ಮರ್ಚಿಸಿನ್ ಉಲ್ಕೆ ಅಧ್ಯಯನ ಅತ್ಯಂತ ಪ್ರಮುಖವಾಗಿದೆ.

ಮರ್ಚಿಸಿನ್ ಉಲ್ಕೆಯಲ್ಲಿ ಜೀವ ಉಗಮದ ಅಂಶಗಳು

ಮರ್ಚಿಸಿನ್ ಉಲ್ಕೆಯಲ್ಲಿ ಮತ್ತೊಂದು ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ. ಈ ಮರ್ಚಿಸಿನ್ ಉಲ್ಕೆಯಲ್ಲಿ ಅಮೈನೋ ಆ್ಯಸಿಡ್ ಸಾವಯ ಸಂಯುಕ್ತ ಪತ್ತೆಯಾಗಿದೆ. ಇದು ಜೀವ ಉಗಮಕ್ಕೆ ನೆರವು ನೀಡುವ ಅಂಶಗಳಾಗಿದೆ. ಬಾಹ್ಯಾಕಾಶದಲ್ಲಿ ಈ ಉಲ್ಕೆ ರೂಪುಗೊಂಡಿದ್ದು ಹೇಗೆ? ಇದೇ ಉಲ್ಕೆಗಳು ಭೂಮಿಯ ಮೇಲಿನ ಜೀವಗಳ ಉಗಮಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಉಲ್ಕೆಗಳು ಬಾಹ್ಯಾಕಾಶದಿಂದ ಪತನಗೊಂಡು ಚೂರು ಚೂರುಗಳಾಗಿ ಭೂಮಿಗೆ ಬಿದ್ದಿದೆ. ಆದರೆ ಭೂಮಿ ರೂಪುಗೊಳ್ಳುವ ಮೊದಲೇ ಈ ಉಲ್ಕೆಗಳು ಇತ್ತು. ಹೀಗಾಗಿ ಭೂಮಿಯ ಮೇಲಿನ ಜೀವ ಉಗಮದಲ್ಲಿ ಈ ಉಲ್ಕೆಗಳ ಪಾತ್ರ ಏನು ಅನ್ನೋ ಕುರಿತು ಸಂಶೋಧನೆ ನಡೆಯುತ್ತಿದೆ.

ಮರ್ಚಿಸಿನ್ ಹೆಸರು ಬಂದಿದ್ದು ಹೇಗೆ?

ಈ ಉಲ್ಕಾಶಿಲೆ 1969ರಲ್ಲಿ ಆಸ್ಟ್ರೇಲಿಯಾದಲ್ಲಿ ಬಾಹ್ಯಾಕಾಶದಿಂದ ಬಿದ್ದಿತ್ತು. ದೊಡ್ಡ ಗಾತ್ರದಲ್ಲಿದ್ದ ಉಲ್ಕಾಶಿಲೆ ಭೂಮಿಯ ವಾತಾವರಣ ಪ್ರವೇಶಿಸುವಾಗ ಚೂರು ಚೂರಾಗಿ ಬಿದ್ದಿದೆ. ವಿಜ್ಞಾನಿಗಳು ಪತ್ತೆ ಹಚ್ಚಿದ ಈ ಮರ್ಚಿಸಿನ್ ಉಲ್ಕಾಶಿಲೆ ತೂಕ 100 ಕೆಜಿಗೂ ಅಧಿಕವಾಗಿದೆ. ಈ ಉಲ್ಕಾಶಿಲೆ ಆಸ್ಟ್ರೇಲಿಯಾ ಮರ್ಚಿಸಿನ್ ಪ್ರಾಂತ್ಯದಲ್ಲಿ ಬಿದ್ದ ಕಾರಣ ಇದಕ್ಕೆ ಮರ್ಚಿಸಿನ್ ಉಲ್ಕೆ ಎಂದು ಹೆಸರಿಡಲಾಗಿದೆ. 1969ರಿಂದ ಈ ಉಲ್ಕೆಯ ಅಧ್ಯಯನ ನಡೆಯುತ್ತಿದೆ. ಆದರೆ 2025ರಲ್ಲಿ ಇದರ ಇತಿಹಾಸ ಸೇರಿದಂತೆ ಹಲವು ಮಾಹಿತಿಗಳನ್ನು ವಿಜ್ಞಾನಿಗಳು ನಿಖರವಾಗಿ ಊಹಿಸಿ ಅಧ್ಯಯನ ನೆಡೆಸಿದ್ದರು.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸಾವಿನ ಮೊದಲು ಕಾಣಿಸಿಕೊಳ್ಳುವ ಈ ನಿಗೂಢ ವ್ಯಕ್ತಿ ಯಾರು?, ವಿಜ್ಞಾನವೂ ಸಂಪೂರ್ಣ ತೀರ್ಮಾನಕ್ಕೆ ಬಂದಿಲ್ಲ
ಚಂದಿರನ ಮೇಲೆ ಮನೆ ಕಟ್ಟಲು ಬೆಂಗಳೂರಿನ ಮಣ್ಣೇ ಚೆಂದ: ಗಗನಯಾತ್ರಿ ಶುಭಾಂಶು ಶುಕ್ಲಾ