ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

By Suvarna News  |  First Published Apr 20, 2023, 2:42 PM IST

ಟೆಲಿಒಎಸ್-2 ಉಪಗ್ರಹ 741 ಕೆಜಿ ತೂಕವಿದ್ದರೆ, ಲ್ಯೂಮ್‌ಲೈಟ್-4 ಉಪಗ್ರಹ 16 ಕೆಜಿ ತೂಕವಿದೆ. ಇವೆರಡೂ ಸಿಂಗಾಪುರದ ಉಪಗ್ರಹಗಳಾಗಿದ್ದು, ಅವುಗಳನ್ನು ಪೂರ್ವಕ್ಕೆ ಕನಿಷ್ಟ ಬಾಗಿರುವಂತೆ ಕಕ್ಷೆಗೆ ಅಳವಡಿಸಲಾಗುತ್ತದೆ.


(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪಿಎಸ್ಎಲ್‌ವಿ - ಸಿ55 / ಟೆಲಿಒಎಸ್-02ಗಳು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಪ್ರಿಲ್ 22ರಂದು ಮಧ್ಯಾಹ್ನ 02:19ಕ್ಕೆ ಉಡಾವಣೆಗೊಳ್ಳಲಿವೆ. ಇದೊಂದು ಎನ್ಎಸ್ಐಎಲ್‌ನ ವಾಣಿಜ್ಯಿಕ ಯೋಜನೆಯಾಗಿದ್ದು, ಇದರಲ್ಲಿ ಟೆಲಿಒಎಸ್-2 ಪ್ರಾಥಮಿಕ ಉಪಗ್ರಹವಾಗಿರಲಿದ್ದು, ಲ್ಯೂಮ್‌ಲೈಟ್-4 ಸಹ ಪ್ರಯಾಣಿಕ ಉಪಗ್ರಹವಾಗಿದೆ. ಟೆಲಿಒಎಸ್-2 ಉಪಗ್ರಹ 741 ಕೆಜಿ ತೂಕವಿದ್ದರೆ, ಲ್ಯೂಮ್‌ಲೈಟ್-4 ಉಪಗ್ರಹ 16 ಕೆಜಿ ತೂಕವಿದೆ. ಇವೆರಡೂ ಸಿಂಗಾಪುರದ ಉಪಗ್ರಹಗಳಾಗಿದ್ದು, ಅವುಗಳನ್ನು ಪೂರ್ವಕ್ಕೆ ಕನಿಷ್ಟ ಬಾಗಿರುವಂತೆ ಕಕ್ಷೆಗೆ ಅಳವಡಿಸಲಾಗುತ್ತದೆ.

Tap to resize

Latest Videos

undefined

ಉಡಾವಣಾ ವಾಹನ: ಪಿಎಸ್ಎಲ್‌ವಿ-ಸಿಎ

ಇಸ್ರೋ ಅಭಿವೃದ್ಧಿ ಪಡಿಸಿರುವ ಉಡಾವಣಾ ವಾಹನ ಪಿಎಸ್ಎಲ್‌ವಿ-ಸಿಎ ಯನ್ನು ಮೊದಲ ಬಾರಿಗೆ ಏಪ್ರಿಲ್ 23, 2007ರಂದು ಉಡಾವಣೆಗೊಳಿಸಲಾಯಿತು. ಸಿಎ ಎಂದರೆ ಕೋರ್ ಅಲೋನ್ ಎಂದಾಗಿದೆ. ಇಲ್ಲಿಯ ತನಕ ಪಿಎಸ್ಎಲ್‌ವಿ-ಸಿಎ ಯನ್ನು 15 ಬಾರಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದ್ದು, ಒಂದೂ ವೈಫಲ್ಯ ಅನುಭವಿಸಿಲ್ಲ. ಪಿಎಸ್ಎಲ್‌ವಿ ಸ್ಟ್ಯಾಂಡರ್ಡ್ ಉಡಾವಣಾ ವಾಹನದಲ್ಲಿ ಬಳಸುವ ಆರು ಸ್ಟ್ರಾಪ್ - ಆನ್ ಬೂಸ್ಟರ್‌ಗಳನ್ನು ಸಿಎ ಆವೃತ್ತಿಯಲ್ಲಿ ಬಳಸುವುದಿಲ್ಲ. ಸಾಮಾನ್ಯ ಆವೃತ್ತಿಗೆ ಹೋಲಿಸಿ ನೋಡಿದರೆ, ಸಿಎ ಆವೃತ್ತಿಯ ನಾಲ್ಕನೇ ಹಂತ 400 ಕೆಜಿಯಷ್ಟು ಕಡಿಮೆ ಇಂಧನವನ್ನು ಬಳಸುತ್ತದೆ.

ಇದನ್ನು ಓದಿ: ಇಸ್ರೋ ವಿಕ್ರಮ: ಚಿತ್ರದುರ್ಗದಲ್ಲಿ ಗಗನನೌಕೆ ರನ್‌ವೇ ಲ್ಯಾಂಡಿಂಗ್‌ ಯಶಸ್ವಿ

ಈ ರಾಕೆಟ್ ಪ್ರಸ್ತುತ 1,100 ಕೆಜಿಯಷ್ಟು ಭಾರವನ್ನು 622 ಕಿಲೋಮೀಟರ್ ಎತ್ತರದ ಸನ್ ಸಿಂಕ್ರೋನಸ್‌ ಕಕ್ಷೆಗೆ ಒಯ್ಯಬಲ್ಲದು.

ಟೆಲಿಒಎಸ್-2

ಟೆಲಿಒಎಸ್-2 ಉಪಗ್ರಹವನ್ನು ಡಿಎಸ್‌ಟಿಎ (ಸಿಂಗಾಪುರ ಸರ್ಕಾರದ ಪ್ರತಿನಿಧಿ) ಹಾಗೂ ಎಸ್‌ಟಿ ಎಂಜಿನಿಯರಿಂಗ್ (ಸ್ಯಾಟಲೈಟ್ ಸಿಸ್ಟಮ್ಸ್) ಸಹಯೋಗದಿಂದ ಅಭಿವೃದ್ಧಿ ಪಡಿಸಲಾಗಿದೆ. ಒಂದು ಬಾರಿ ಇದನ್ನು ಕಕ್ಷೆಗೆ ಅಳವಡಿಸಿ, ಕಾರ್ಯಾಚರಣೆ ಆರಂಭಿಸಿದ ಬಳಿಕ, ಈ ಉಪಗ್ರಹವನ್ನು ಸಿಂಗಾಪುರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ಅಗತ್ಯವಿರುವ ಸ್ಯಾಟಲೈಟ್ ಇಮೇಜರಿಗಳನ್ನು ಒದಗಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

ಟೆಲಿಒಎಸ್-2 ನಲ್ಲಿ ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಪೇಲೋಡ್ ಅಳವಡಿಸಲಾಗಿದೆ. ಇದು 1ಎಂ ಫುಲ್ ಪೋಲಾರಿಮೆಟ್ರಿಕ್ ಗುಣಮಟ್ಟದ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದ್ದು, ಎಲ್ಲಾ ಹವಾಮಾನದಲ್ಲೂ, ಹಗಲು ಮತ್ತು ರಾತ್ರಿಗಳಲ್ಲೂ ಕಾರ್ಯಾಚರಿಸಬಲ್ಲದು. ಇದರಲ್ಲಿ 500 ಜಿಬಿಗಳಷ್ಟು ಸಂಗ್ರಹ ಸಾಮರ್ಥ್ಯವಿದ್ದು, ಅತ್ಯಂತ ವೇಗದ, 800 ಎಂಬಿಪಿಎಸ್ ಅಂತರ್ಜಾಲ ವ್ಯವಸ್ಥೆಯಿದೆ.

ಇಸ್ರೋ ಸಿಂಗಾಪುರದ ಪ್ರಥಮ ವಾಣಿಜ್ಯಿಕ ಭೂ ವೀಕ್ಷಣಾ ಉಪಗ್ರಹವಾದ ಟೆಲಿಒಎಸ್-1 ಅನ್ನು 2015ರಲ್ಲಿ ಉಡಾವಣೆಗೊಳಿಸಿತು. ಅದನ್ನು ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳಿಗೆ ಬಳಸಿಕೊಳ್ಳಲಾಗಿದೆ. ಇಲ್ಲಿಯ ತನಕ ಇಸ್ರೋ ಸಿಂಗಾಪುರದ 9 ಉಪಗ್ರಹಗಳನ್ನು ಉಡಾವಣೆಗೊಳಿಸಿದೆ.

ಇದನ್ನೂ ಓದಿ: ಒನ್‌ವೆಬ್‌ ಇಂಟರ್ನೆಟ್‌ ಸೇವೆ ಭಾರತದಲ್ಲಿ ದುಬಾರಿ: ಏರ್‌ಟೆಲ್‌ ಮುಖ್ಯಸ್ಥ ಮಿತ್ತಲ್‌

ಲ್ಯೂಮ್‌ಲೈಟ್-4

ಲ್ಯೂಮ್‌ಲೈಟ್-4 ಉಪಗ್ರಹವನ್ನು  ಎ ಸ್ಟಾರ್ಸ್ ಇನ್ಸ್ಟಿಟ್ಯೂಟ್ ಫಾರ್ ಇನ್‌ಫೋಕಾಮ್ ರಿಸರ್ಚ್ (ಐ2ಆರ್) ಹಾಗೂ ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರದ ಸ್ಯಾಟಲೈಟ್ ಟೆಕ್ನಾಲಜಿ ಮತ್ತು ರಿಸರ್ಚ್ ಸೆಂಟರ್ (ಸ್ಟಾರ್) ಜಂಟಿ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಲ್ಯೂಮ್‌ಲೈಟ್-4 ಒಂದು ಸಮರ್ಥ 12ಯು ಉಪಗ್ರಹವಾಗಿದ್ದು, ಹೆಚ್ಚಿನ ಪ್ರದರ್ಶನದ, ಸ್ಪೇಸ್ - ಬಾರ್ನ್ ವಿಎಚ್ಎಫ್ ಡೇಟಾ ಎಕ್ಸ್‌ಚೇಂಜ್ ಸಿಸ್ಟಮ್ (ವಿಡಿಇಎಸ್) ನಡೆಸಲು ಅಭಿವೃದ್ಧಿ ಪಡಿಸಲಾಗಿದೆ. ಇದು ಸಿಂಗಾಪುರದ ಇ-ನ್ಯಾವಿಗೇಶನ್ ಸಾಗರ ಸುರಕ್ಷತೆಯನ್ನು ಅಭಿವೃದ್ಧಿಪಡಿಸಿ, ಜಾಗತಿಕ ಹಡಗು ಸಂಚಾರ ವ್ಯವಸ್ಥೆಗೆ ನೆರವು ನೀಡುವ ಉದ್ದೇಶ ಹೊಂದಿದೆ.

ಪಿಒಇಎಂ-2

ಈ‌ ಯೋಜನೆ ಪಿಎಸ್ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್ (ಪಿಒಇಎಂ) ಅನ್ನು ಒಳಗೊಂಡಿದ್ದು, ಇದು ಉಡಾವಣಾ ವಾಹನದ ತಿರಸ್ಕರಿಸಿದ ಪಿಎಸ್4 ಹಂತವನ್ನು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಬೇರ್ಪಡದ ಪೇಲೋಡ್‌ಗಳ ಮೂಲಕ ಆರ್ಬಿಟಲ್ ಪ್ಲಾಟ್‌ಫಾರಂ ಆಗಿ ಬಳಸಿಕೊಳ್ಳುತ್ತದೆ. ಇಸ್ರೋ / ಬಾಹ್ಯಾಕಾಶ ಇಲಾಖೆ, ಬೆಲ್ಲಾಟ್ರಿಕ್ಸ್, ಧ್ರುವ ಸ್ಪೇಸ್, ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್ ಇದರ ಪೇಲೋಡ್‌ಗಳ ಮಾಲಿಕತ್ವ ಹೊಂದಿವೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ

ಇಸ್ರೋ ಯೋಜನೆಗಳು

ಇದು ಈ ವರ್ಷದಲ್ಲಿ ಇಸ್ರೋದ ಮೂರನೇ ಉಡಾವಣೆಯಾಗಿದ್ದು, ಮೂರು ಉಡಾವಣೆಗಳೂ ಬೇರೆ ಬೇರೆ ಉಡಾವಣಾ ವಾಹನಗಳನ್ನು ಬಳಸಿಕೊಂಡಿವೆ. ನೂತನ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್ಎಸ್ಎಲ್‌ವಿ) ಫೆಬ್ರವರಿಯ ಆರಂಭಿಕ ಉಡಾವಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಮಾರ್ಚ್ ತಿಂಗಳಲ್ಲಿ ಎರಡನೆಯ ಉಡಾವಣೆ ನಡೆದಿದ್ದು, ಇದು ಭಾರತದ ಅತಿ ಭಾರದ ರಾಕೆಟ್ ಆದ ಎಲ್ಎಂವಿ3ಯನ್ನು ಬಳಸಿಕೊಂಡಿತ್ತು. ಸಂಪೂರ್ಣ ವಾಣಿಜ್ಯಿಕ ಉಡಾವಣೆಯಾಗಿದ್ದ ಅದರಲ್ಲಿ 36 ವನ್‌ವೆಬ್ ಉಪಗ್ರಹಗಳನ್ನು ಕಕ್ಷೆಗೆ ಜೋಡಿಸಲಾಯಿತು.

ಇದನ್ನೂ ಓದಿ: ಇಂದು ಉಪಗ್ರಹ ಬೀಳಿಸುವ ಕಸರತ್ತು: ಫೆಸಿಫಿಕ್‌ ಸಾಗರದಲ್ಲಿ ಪತನಕ್ಕೆ ಇಸ್ರೋ ಭಾರಿ ಸಾಹಸ

click me!