ದಟ್ಟ ಕಾಡಿನಲ್ಲಿ 1000 ವರ್ಷ ಪುರಾತನ ಮಾಯಾ ನಾಗರೀಕತೆಯ ನಿಗೂಢ ನಗರ ಪತ್ತೆ, ಭವ್ಯ ಅರಮನೆ ದರ್ಶನ

Published : Jun 26, 2026, 11:26 AM IST
Forgotten Maya City discovered

ಸಾರಾಂಶ

ದಟ್ಟ ಕಾಡಿನಲ್ಲಿ ಭವ್ಯ ಅರಮನೆ, ಸೈನಿಕರ ತಾಣ, ಬಂಡಾರ ಸೇರಿದಂತೆ ಹಲವು ವಸ್ತುಗಳ ಪುರಾತನ ಮಾಯಾ ನಾಗರೀಕತೆಯ ನಿಗೂಢ ನಗರ ಪತ್ತೆಯಾಗಿದೆ. ಬರೋಬ್ಬರಿ 1000 ವರ್ಷಗಳ ಹಿಂದೆ ಇದ್ದ ಮಾಯಾ ನಾಗರೀಕತೆಯ ಕುರುಹು ಪತ್ತೆಯಾಗಿದೆ.

ಬರೋಬ್ಬರಿ ಒಂದು ಸಾವಿರ ವರ್ಷಗಳ ಹಿಂದೆ ಇದ್ದ ಭವ್ಯ ಮಾಯಾ ನಾಗರೀಕತೆಯ ನಗರ ಪತ್ತೆಯಾಗಿದೆ. ದಟ್ಟ ಕಾಡಿನಲ್ಲಿ ನಗರ ಪತ್ತೆಯಾಗಿದೆ. ಅರಮನೆ ಸೇರಿದಂತೆ ಹಲವು ಪುರಾತನ ವಸ್ತುಗಳು ಪತ್ತೆಯಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳ ಸಂಶೋಧನೆಯಲ್ಲಿ ಈ ನಗರ ಪತ್ತೆಯಾಗಿದೆ. ಮೆಕ್ಸಿಕೋ ಕಾಡಿನಲ್ಲಿ ಮರೆಯಾಗಿ ಹೋಗಿದ್ದ ನಗರವನ್ನು ಅಧಿಕಾರಿಗಳು, ತಜ್ಞರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಅತೀ ದೊಡ್ಡ ಸಂಶೋಧನೆ ಹಾಗೂ ಪತ್ತೆ ಕಾರ್ ಎಂದು ಬಣ್ಣಿಸಲಾಗುತ್ತಿದೆ.

ದಟ್ಟ ಕಾಡಿನ ನಡುವಿನ ನಗರಕ್ಕೆ ಮಿನಾನ್ಬೆ ಹೆಸರು

ಮೆಕ್ಸಿಕೋದ ಕ್ಯಾಲಕ್‌ಮುಲ್ ಬಯೋಸ್ಪಿಯರ್ ಅರಣ್ಯದಲ್ಲಿ ಈ ಮಾಯಾ ನಾಗರೀಕತೆಯ ಭವ್ಯ ನಗರ ಪತ್ತೆಯಾಗಿದೆ. ಮೆಕ್ಸಿಕೋ ಮತ್ತು ಸ್ಲೊವೇನಿಯಾ ದೇಶದ ಪುರಾತತ್ವ ಅಧಿಕಾರಿಗಳು, ಸಂಶೋಧಕರ ತಂಡ ಈ ನಗರ ಪತ್ತೆ ಹಚ್ಚಿದೆ. ಪತ್ತೆಯಾದ ಈ ನಗರಕ್ಕೆ ಮಿನಾನ್ಬೆ ಎಂದು ಹೆಸರಿಡಲಾಗಿದೆ. ಈ ನಗರಕ್ಕೆ ತಲಪುಲು ಯಾವುದೇ ರಸ್ತೆ, ದಾರಿ ಇಲ್ಲದ ಕಾರಣ ಈ ಹೆಸರು ಇಡಲಾಗಿದೆ.

ಕಾಡಿನ ನಡುವಿನ ಅರಮನೆ ಪತ್ತೆ ಹಚ್ಚಿದ್ದು ಹೇಗೆ?

ದಟ್ಟ ಅರಣ್ಯದ ನಡುವೆ ಈ ನಗರವಿದೆ. ಭಾರಿ ಗಾತ್ರದ ನೂರಾರು ವರ್ಷಗಳ ಹಳೇ ಮರಗಳು ಈ ಕಾಡಿನಲ್ಲಿದೆ. ಆಗಸದೆತ್ತರಕ್ಕೆ ಬೆಳೆದು ನಿಂತ ಮರಗಳಿಂದ ಈ ನಗರ ಸ್ಯಾಟಲೈಟ್ ಕಣ್ಣಿಗೂ ಬೀಳದಂತೆ ಮುಚ್ಚಿಹೋಗಿತ್ತು. ಈ ನಗರ ಮಾಯಾ ನಾಗರೀಕತೆಯ ಅತೀ ದೊಡ್ಡ ಕುರುಹಾಗಿದೆ. ಜೊತೆಗೆ ಸಾವಿರ ವರ್ಷಗಳ ಹಿಂದೆ ಭವ್ಯ ನಗರ, ಅಲ್ಲಿನ ಜನ, ಆಡಳಿತ ಎಲ್ಲದರ ಕುರುಹು ಪತ್ತೆಯಾಗಿದೆ. ಮಾಯಾ ನಗರದ ಕುರಿತು ಸಂಶೋಧನೆ ನಡೆಸಿದ ಪುರಾತತ್ವ ಇಲಾಖೆ ಸಂಶೋಧಕರು ಲಿಡಾರ್ ತಂತ್ರಜ್ಞಾನದ ಮಶಿನ್ ಬಳಸಿ ಭೂಮಿಯ ಅಡಿಯಲ್ಲಿ ಹೂತು ಹೋಗಿರುವ ನಗರದ ನಕ್ಷೆ ಪತ್ತೆ ಹಚ್ಚಿದ್ದರು. ಆದರೆ ಭೂಮಿ ಮೇಲೆ ಇದರ ಕುರುಹು ಇದೆಯಾ ಅನ್ನೋ ಅನುಮಾನ ಸಂಶೋಧಕರ ಕಾಡಿತ್ತು. ಹೀಗಾಗಿ ಈ ಸ್ಥಳಕ್ಕೆ ಕಾಲ್ನಡಿಗೆ ಮೂಲಕ ಸಾಗಲು ನಿರ್ಧರಿಸಿದ್ದರು. ದಟ್ಟ ಕಾಡಿನ ಅರಣ್ಯದಲ್ಲಿ ಕಾಡು ಪ್ರಾಣಿಗಳು, ಹಾವು ಸೇರಿದಂತೆ ಹಲವು ಸವಾಲು ಎದುರಾಗಿತ್ತು. ಇದಕ್ಕಾಗಿ ಸರ್ಕಾರದ ಅನುಮತಿ ಪಡೆದು ಕಾಡಿನಲ್ಲಿ ದಾರಿ ಮಾಡುತ್ತಾ ದಾರಿ ನಡುವಿನ ಮರಗಳನ್ನು ಕತ್ತರಿಸುತ್ತಾ ತಂಡ ಸಾಗಿತ್ತು.

ಲೂಟಿಯಾಗದೆ ಭವ್ಯ ಸಂಪತ್ತಿನಿಂದ ಕೂಡಿರುವ ನಗರ

ಸಾವಿರ ವರ್ಷಗಳ ಹಿಂದಿನ ಮಾಯಾ ನಾಗರೀಕತೆ ಕಾಡಿನ ನಡುವೆ ಜೀವಿಸಿತ್ತು. ಮಾಯಾ ನಾಗೀರಕತೆ ನಶಿಸಿದ ಬಳಿಕ ಕಾಡುಗಳು ಆವರಿಸಿ ಹೊರಜಗತ್ತಿಗೆ ಈ ನಗರದ ಬಗ್ಗೆ ಗೊತ್ತೆ ಆಗಲಿಲ್ಲ. ಹೀಗಾಗಿ ಈ ನಗರ ಯಾರಿಂದಲೂ ಲೂಟಿಯಾಗಿಲ್ಲ.ಅಪಾರ ಸಂಪತ್ತು, ಅರಮನೆ, ಸ್ತೂಪಗಳು, ಕಲ್ಗುಗಳು ಹಾಗೇ ಇವೆ. ಐತಿಹಾಸಿಕ ಶಿಲಾಶಾಲನ, ಪಿರಮಿಡ್ ಶೈಲಿಯ ದೇವಾಲಯ, ಬಲಿಪೀಠ ಸೇರಿದಂತೆ ಹಲವು ಸ್ಮಾರಕಗಳು ಪತ್ತೆಯಾಗಿದೆ.

ಮಾಯಾ ನಾಗರೀಕತೆ, ಆಡಳಿತ ಕ್ರಿ.ಶ 600 ರಿಂದ 900ರ ಅವಧಿಯಲ್ಲಿ ಅತ್ಯಂತ ವೈಭವದಿಂದ ಕೂಡಿದ ನಾಗರೀಕತೆಯಾಗಿತ್ತು. ಲಕ್ಷಾಂತರ ಮಂದಿ ಇಲ್ಲಿ ವಾಸಿಸುತ್ತಿದ್ದರು. ಇಲ್ಲಿ ಸಿಕ್ಕಿರುವ ಶಿಲಾಶಾಸನಗಳ ಅಧ್ಯಯನ ನಡೆಯುತ್ತಿದೆ. ಈ ಶಿಲಾಶಾಸನದಿಂದ ನಾಗರೀಕತೆಯ ಮಹತ್ವದ ಮಾಹಿತಿ ಲಭ್ಯವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಪಪ್ಪಾಯ ಗಿಡಕ್ಕೆ ಮೊಳೆ ಹೊಡೆದರೆ ಬೇಗ ಫಲ ಕೊಡತ್ತಾ? ಭರಪೂರ ಹಣ್ಣು ಬರಲು ಏನು ಮಾಡಬೇಕು
Atlas Moth Kannada: "ಇದು ಪ್ರಳಯದ ಸೂಚನೆಯೇ?": ಪ್ರಕೃತಿಯ ಈ ವಿಸ್ಮಯ ನೋಡಿ ಜನ ಹೀಗೆ ಹೇಳಿದ್ದೇಕೆ?