ಇತ್ತೀಚೆಗೆ ಪುರುಷರಲ್ಲಿ ಸಂಗಾತಿಯ ಜೊತೆ ಮಿಲನ ನಡೆಸೋಕೆ ಬೇಕಾದ ಆ ಶಕ್ತಿಯೇ ಕಡಿಮೆಯಾಗುತ್ತಿದೆಯಂತೆ. ಯಾಕೆ ಗೊತ್ತಾ?
ಇತ್ತೀಚೆಗೆ ಪುರುಷರಲ್ಲಿ ಸಂಗಾತಿಯ ಜೊತೆ ಮಿಲನ ನಡೆಸೋಕೆ ಬೇಕಾದ ಆ ಶಕ್ತಿಯೇ ಕಡಿಮೆಯಾಗುತ್ತಿದೆಯಂತೆ. ಯಾಕೆ ಗೊತ್ತಾ?
ಇಪ್ಪತ್ತೈದು ವರ್ಷದ ಸುಧೀರ್‌ಗೆ ಹೊಸದೊಂದು ಸಮಸ್ಯೆ ಶುರುವಾಗಿದೆ. ಕೊಲೀಗ್ ಜೊತೆಗಿನ ಐದು ವರ್ಷಗಳ ಲಿವ್ ಇನ್ ಮತ್ತು ಸೆಕ್ಸ್ ಜೀವನ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಅವಳು ಸುಮ್ಮನೆ ಹತ್ತಿರ ಬಂದರೂ ಸಾಕು ಅವನ ಕಾಮಾಸಕ್ತಿ ಕೆರಳುತ್ತಿತ್ತು. ಆದರೆ ಈಗ ಮೊದಲಿನಂತೆ ಪ್ರಚೋದನೆ ಸಾಕಾಗುತ್ತಿಲ್ಲ. ಅವನ ಪುರುಷತ್ವ ಮಿಲನ ನಡೆಸೋಕೆ ಬೇಕಾದ ಗಡಸುತನ ಪಡೆಯುವುದೇ ಇಲ್ಲ.
undefined
ಹೀಗೇಕೆ ಅಂತ ಥೆರಪಿಸ್ಟ್ ಮೊರೆ ಹೋದಾಗ ಅರ್ಥವಾದದ್ದು. ಆತ ಕಳೆದ ಒಂದೆರಡು ವರ್ಷಗಳಿಂದ ಪೋರ್ನ್ ಹೆಚ್ಚಾಗಿ ನೋಡ್ತಿದಾನೆ. ಸಂಗಾತಿಯ ಜೊತೆಗಿನ ಲೈಂಗಿಕ ಕ್ರಿಯೆಗಿಂತಲೂ ಪೋರ್ನೇ ಅವನಿಗೆ ಹೆಚ್ಚು ಆಕರ್ಷಕವಾಗಿ, ವರ್ಣಮಯವಾಗಿ ಕಾಣಿಸ್ತಿದೆ. ಹೀಗಾಗಿ ಗರ್ಲ್‌ಫ್ರೆಂಡ್ ಜೊತೆಗೆ ಏನೂ ಮಾಡೋಕೆ ಅವನಿಗೆ ಸಾಧ್ಯವಾಗ್ತಿಲ್ಲ.
ಇದನ್ನು ವೈದ್ಯಕೀಯ ಭಾಷೆಯಲ್ಲಿ ಎರೆಕ್ಟೈಲ್ ಡಿಸ್‌ಫಂಕ್ಷನ್ (ಇಡಿ) ಅಥವಾ ನಿಮಿರು ದೌರ್ಬಲ್ಯ ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಕಾರಣಗಳು ದುರ್ಬಲ ದೇಹಾರೋಗ್ಯ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹಿಸ್ಟರಿ, ಒತ್ತಡ, ಆತಂಕ, ಖಿನ್ನತೆ ಮುಂತಾದ ಮಾನಸಿಕ ಸಮಸ್ಯೆಗಳು ಇತ್ಯಾದಿ. ತಜ್ಞರು ಇತ್ತೀಚೆಗೆ ಗುರುತಿಸ್ತಾ ಇರುವ ಇನ್ನೊಂದು ಪ್ರಮುಖ ಕಾರಣವೇ ಅಧಿಕ ಪೋರ್ನೋಗ್ರಫಿ ವೀಕ್ಷಣೆ. ಇತ್ತೀಚಿಗೆ ಪೋರ್ನ್ ಬೇಕು ಬೇಕಾದಂತೆ ಲಭ್ಯ ಆಗ್ತಿರುವುದು ಈ ಸಮಸ್ಯೆಯನ್ನು ಹೆಚ್ಚು ಮಾಡ್ತಿದೆಯಂತೆ.
ಸ್ಮಾರ್ಟ್‌ಫೋನಲ್ಲೇ ಈಗ ರೆಡ್‌ಲೈಟ್ ಸೆಕ್ಸ್ ಕಾರುಬಾರು!
ಪೋರ್ನ್ ನೋಡುವಾಗ ಹಾಗೂ ಹಸ್ತಮೈಥುನ ಮಾಡಿಕೊಳ್ಳುವಾಗ ವ್ಯಕ್ತಿ ತಾನೇ ಅಧಿಕಾರ ಸ್ಥಾಪಿಸಿದ, ಸ್ವಾಮ್ಯ ಹೊಂದಿದ ಭಾವನೆಯಲ್ಲಿರುತ್ತಾನೆ. ಆದರೆ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಮೇಲುಗೈ ಆಗುವುದಕ್ಕಿಂತಲೂ ಹೊಂದಾಣಿಕೆ ಮುಖ್ಯವಾಗಿರುತ್ತದೆ. ಪೋರ್ನ್ ವೀಕ್ಷಣೆ ಅಥವಾ ಹಸ್ತಮೈಥುನದ ವೇಳೆ ಸಂವಾದ ಅಗತ್ಯವಿಲ್ಲ. ಆದ್ರೆ ಸಂಗಾತಿ ಜೊತೆಗಿದ್ದಾಗ ಸಂವಾದ ಅಗತ್ಯವಾಗುತ್ತೆ. ಸಂಗಾತಿಯ ಭಾವನೆ, ಲೈಂಗಿಕ ಅಪೇಕ್ಷೆಗಳಿಗೆ ಸ್ಪಂದಿಸುವುದು ಮುಖ್ಯವಾಗುತ್ತೆ. ಇದೆಲ್ಲವೂ ಪೋರ್ನ್ ಅಡಿಕ್ಟ್ ಆಗಿರೋರಿಗೆ ಸಾಧ್ಯ ಆಗೋಲ್ಲ.
ಇನ್ನು ಪೋರ್ನ್ ಫಿಲಂಗಳಲ್ಲಿ ಕಂಡುಬರುವ ದೃಶ್ಯಗಳು ನಿಜವೆಂದೇ ತಿಳಿಯುವವರು ಬಹಳ. ಅಂದರೆ ಪುರುಷನೊಬ್ಬ ಗಂಟೆಗಟ್ಟಲೆ ತನ್ನ ಗಡಸುತನವನ್ನು ನಿಮಿರಿದಿಕೊಂಡೇ ಇದ್ದು ವಿಜೃಂಭಿಸಬಲ್ಲ ಎಂದು ತಿಳಿಯುತ್ತಾರೆ. ಆದರೆ ನಿಜದಲ್ಲಿ ಹಾಗಿರೋಲ್ಲ. ತನ್ನಿಂದ ಅಷ್ಟೆಲ್ಲ ಸಾಧ್ಯವಾಗ್ತಿಲ್ಲವಲ್ಲ ಅನ್ನುವ ಆತಂಕ ನಿರಾಶೆಯೇ ನಿಮಿರು ದೌರ್ಬಲ್ಯಕ್ಕೆ ಕಾರಣವಾಗುತ್ತೆ. ಹಾಗೇ ಫಿಲಂಗಳಲ್ಲಿ ಕಂಡುಬರುವ ಅನೇಕ ಉದ್ರೇಕಕಾರಿ ಭಂಗಿಗಳು ಎಲ್ಲರಿಂದ ಸಾಧ್ಯವಾಗೋಲ್ಲ. ಸಂಗಾತಿಗಳಿಂದ ಅದನ್ನೆಲ್ಲ ನಿರೀಕ್ಷಿಸೋದೂ ತಪ್ಪು. ಆದರೆ ಈ ನಿರೀಕ್ಷೆ ಭಂಗವಾದಾಗ ಉಂಟಾಗುವ ನಿರಾಶೆಯಿಂದಾಗಿ ನೈಜ ಕ್ರಿಯೆಯಲ್ಲಿ ನಿರುತ್ಸಾಹ ಉಂಟಾಗುತ್ತೆ.
ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವ ಉಳಿಸಿಕೊಂಡ ಹೆಣ್ಣಿವಳು!
ಪೋರ್ನ್ ನೋಡುವಾಗ ವ್ಯಕ್ತಿಯಲ್ಲಿ ಡೋಪಮೈನ್ ಹಾರ್ಮೋನ್ ಸ್ರಾವ ಹೆಚ್ಚಾಗುತ್ತೆ. ಇದು ಒಂದು ಬಗೆಯ ಸುಖ ಉಂಟುಮಾಡುತ್ತೆ. ಇದು ಆ ಅನುಭವವನ್ನು ಮತ್ತೆ ಮತ್ತೆ ಬಯಸುವಂತೆ ಮಾಡುತ್ತೆ. ಅದು ಚಟವಾಗುತ್ತದೆ. ಮೆದುಳು ಅದಕ್ಕೆ ಕಂಡಿಷನ್ ಆಗಿಬಿಡುತ್ತೆ. ನಿಜ ಜೀವನದಲ್ಲಿ ಆ ಬಗೆಯ ಸುಖ ದೊರೆಯುವುದಿಲ್ಲ. ಹೀಗಾಗಿ ಗಂಡಸರು ಅದರಿಂದ ವಿಮುಖರಾಗ್ತಾರೆ ಅಂತಾರೆ ಥೆರಪಿಸ್ಟರು.
ಕೆಲವೊಮ್ಮೆ ಪೋರ್ನ್‌ಗೆ ತೀರಾ ಅಡಿಕ್ಟ್ ಆದ ಪುರುಷರು ಸಂಗಾತಿಯ ಜೊತೆಗೆ ಸೆಕ್ಸ್ ಮಾಡುವಾಗಲೂ ಪೋರ್ನ್‌ನ ಸಹಾಯ ಪಡೆಯುತ್ತಾರಂತೆ. ಇದರಿಂದ ಅವರ ಸಂಗಾತಿಗಳು ಅತೀವ ರೇಜಿಗೆ, ಅವಮಾನಕ್ಕೆ ತುತ್ತಾಗುತ್ತಾರೆ. ಇದು ಅವರ ಸಂಬಂಧಕ್ಕೇ ಕೊನೆ ಹಾಡಬಹುದು.
ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!
ಇಂಥ ಪೋರ್ನ್ ಗೀಳಿನಿಂದ ನಿಮಿರು ದೌರ್ಬಲ್ಯ ಅನುಭವಿಸುತ್ತಿರುವವರು ಅದರಿಂದ ಹೊರಬರಲೇ ಬೇಕು. ಪೋರ್ನ್ ವೀಕ್ಷಣೆ ನಿಲ್ಲಿಸುವುದರ ಜೊತೆಗೆ, ದೈಹಿಕ ವ್ಯಾಯಾಮ ಹೆಚ್ಚಿಸಬೇಕು. ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು. ಸ್ಕ್ರೀನ್ ಮುಂದೆ ಕಳೆಯುವ ಸಮಯ ಕಡಿಮೆ ಮಾಡಿ, ಹೊರಾವರಣದ ಸುತ್ತಾಟ ಅಧಿಕಗೊಳಿಸಬೇಕು. ಸಂಗಾತಿಯೊಂದಿಗೆ ಜಾಸ್ತಿ ಹೊತ್ತು ಕಳೆಯಬೇಕು. ಇದರಿಂದ ನಿಮಿರು ದೌರ್ಬಲ್ಯ ಸರಿಪಡಿಸಬಹುದು ಅಂತಾರೆ ವೈದ್ಯರು.