‘ಡಿಕೆ​ಶಿ ಎಂತಹ ಸನ್ನಿ​ವೇಶ, ಸವಾ​ಲು​ಗ​ಳನ್ನು ಎದು​ರಿ​ಸಲೂ ಸದೃ​ಢ’

By Kannadaprabha News  |  First Published Oct 19, 2019, 11:16 AM IST

ಮಾಜಿ ಸಚಿವ ಡಿಕೆ ಶಿವಕುಮಾರ್ ಎಲ್ಲಾ ರೀತಿಯ ಸನ್ನಿವೇಶಗಳನ್ನೂ ಎದುರಿಸಲು ಸದೃಢವಾಗಿದ್ದಾರೆ. ಎಲ್ಲವನ್ನು ಧೈರ್ಯದಿಂದ ಎದುರಿಸುತ್ತಾರೆ ಎಂದು ಮುಖಂಡರರ್ವರು ಹೇಳಿದ್ದಾರೆ. 


ರಾಮ​ನ​ಗರ [ಅ.19]:  ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣ​ದಲ್ಲಿ ತಿಹಾರ್‌ ಜೈಲಿ​ನ​ಲ್ಲಿ​ರುವ ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಅವರು ಎಲ್ಲಾ ಸನ್ನಿ​ವೇ​ಶ​ ಹಾಗೂ ಸವಾ​ಲು​ಗ​ಳನ್ನು ಧೈರ್ಯ​ವಾಗಿ ಎದುರಿ​ಸಲು ಮಾನ​ಸಿ​ಕ​ವಾಗಿ ಸದೃ​ಢರಾಗಿ​ದ್ದಾರೆ ಎಂದು ಡಿ.ಕೆ.​ಶಿ​ವ​ಕು​ಮಾರ್‌ ಸಂಬಂಧಿ​ಯಾದ ವಿಧಾನ ಪರಿ​ಷತ್‌ ಸದಸ್ಯ ಎಸ್‌ .ರವಿ ಪ್ರತಿ​ಕ್ರಿಯೆ ನೀಡಿ​ದರು.

ಶುಕ್ರ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸದ್ಯಕ್ಕೆ ನಾನು ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಭೇಟಿ ಮಾಡಲು ಸಾಧ್ಯ​ವಾ​ಗಿಲ್ಲ. ಆದರೆ, ಮಾನ​ಸಿ​ಕ​ವಾ​ಗಿ ಸದೃ​ಢ​ರಾ​ಗಿ​ರುವ ಅವರು ಎಲ್ಲಾ ಸನ್ನಿ​ವೇ​ಶ​ಗ​ಳನ್ನು ಎದು​ರಿ​ಸುವ ಧೈರ್ಯವಿದೆ ಎಂದ​ರು.

Tap to resize

Latest Videos

ಆಕ್ಷೇಪ ಇಲ್ಲ:  ಡಿ.ಕೆ.​ಶಿ​ವ​ಕು​ಮಾರ್‌ ರವರ ಪ್ರಕ​ರಣದ ವಿಚಾ​ರ​ಣೆ ತಡ​ವಾ​ಗು​ತ್ತಿದೆ ಎಂದು ನ್ಯಾಯಾ​ಲ​ಯದ ಕಾರ್ಯ​ವೈ​ಖರಿ ಬಗ್ಗೆ ನಾನು ಆಕ್ಷೇಪ ವ್ಯಕ್ತ​ಪ​ಡಿ​ಸಿಲ್ಲ. ನ್ಯಾಯಾ​ಲಯ ಅದರ ಕರ್ತ​ವ್ಯ​ವನ್ನು ಸರಿ​ಯಾಗಿ ನಡೆ​ಸಿ​ಕೊಂಡು ಹೋಗು​ತ್ತಿದೆ. ಮುಂದಿನ ದಿನ​ಗ​ಳಲ್ಲಿ ನಮಗೆ ನ್ಯಾಯ ಸಿಗು​ತ್ತದೆ ಎಂಬ ವಿಶ್ವಾ​ಸ​ವಿದೆ ಎಂದು ಹೇಳಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿ.ಕೆ.​ಶಿ​ವ​ಕು​ಮಾರ್‌ ಬಿಜೆಪಿ ಸೇರು​ತ್ತಾ​ರೆಂಬ ವದಂತಿ ಇದೆ​ಯಲ್ಲ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ರವಿರವರು, ಡಿ.ಕೆ.​ಶಿ​ವ​ಕು​ಮಾರ್‌ ಅವರು ರಾಜ್ಯ​ದಲ್ಲಿ ತಮ್ಮದೇ ಆದ ವ್ಯಕ್ತಿ​ತ್ವ​ವನ್ನು ಹೊಂದಿ​ದ್ದಾರೆ. ಆದರೆ, ಹಲ​ವಾರು ಜನ ಹಲವು ರೀತಿಯ ಅಭಿ​ಪ್ರಾ​ಯ​ಗ​ಳನ್ನು ಹೊಂದಿ​ರು​ತ್ತಾರೆ. ಅದ​ಕ್ಕೆಲ್ಲ ನಾವು ಪ್ರತಿ​ಕ್ರಿಯೆ ನೀಡು​ವುದು ಸರಿ​ಯಲ್ಲ ಎಂದರು.

ಇಡಿ ಅಧಿ​ಕಾ​ರಿ​ಗಳು ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಕಿರು​ಕುಳ ನೀಡು​ತ್ತಿ​ದ್ದಾ​ರೆಂದು ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪ ಮಾನವ ಹಕ್ಕು​ಗಳ ಆಯೋ​ಗಕ್ಕೆ ದೂರು ನೀಡಿ​ದ್ದಾ​ರಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ಅವ​ರನ್ನೇ ಕೇಳ​ಬೇಕು. ಲಿಂಗ​ಪ್ಪ​ರ​ವರು ಯಾವ ರೀತಿ ಹೇಳಿ​ದ್ದಾರೊ ಗೊತ್ತಿಲ್ಲ ಎಂದು ಉತ್ತ​ರಿ​ಸಿ​ದರು.

ನೋಟಿಸ್‌, ಸ​ಮನ್ಸ್‌ ಬಂದಿ​ಲ್ಲ:  ಕನಕಪುರ ಹಾಗೂ ಸಾತ​ನೂ​ರು ಅರಣ್ಯ ಪ್ರದೇ​ಶ​ದಲ್ಲಿ ನಡೆ​ದಿದೆ ಎನ್ನ​ಲಾದ ಅಕ್ರಮ ಗಣಿ​ಗಾ​ರಿಕೆ ಮತ್ತು ಅರಣ್ಯ ಒತ್ತು​ವರಿ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಹೈಕೋರ್ಟ್‌ ಸಮ​ಗ್ರ ವರದಿ ಸಲ್ಲಿ​ಸು​ವಂತೆ ರಾಜ್ಯ ಸರ್ಕಾ​ರಕ್ಕೆ ನಿರ್ದೇ​ಶನ ನೀಡಿದೆ. ಈ ವಿಚಾ​ರ​ವಾಗಿ ನನಗೆ ಈವ​ರೆಗೂ ಯಾವುದೇ ನೋಟಿಸ್‌, ಸ​ಮನ್ಸ್‌ ಬಂದಿ​ಲ್ಲ ಎಂದು ರವಿ ಹೇಳಿ​ದ​ರು.

click me!