ಮತ್ತೆ ಕಾಣಿಸಿಕೊಂಡಿತು 7 ಹೆಡೆಯ ಸರ್ಪದ ಪೊರೆ : ಏನಿದು ಅಚ್ಚರಿ!

By Kannadaprabha News  |  First Published Oct 9, 2019, 11:45 AM IST

ರಾಮನಗರದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ 7 ಹೆಡೆಯ ಸರ್ಪದ ಪೊರೆ ಇದೀಗ ಮತ್ತೆ ಕಾಣಿಸಿಕೊಂಡಿದೆ. ಇದು ಇಲ್ಲಿನ ಜನರಲ್ಲಿ ಹೆಚ್ಚು ಅಚ್ಚರಿಯನ್ನುಂಟು ಮಾಡಿದೆ. 


ರಾಮನಗರ [ಅ.09]:  ಕಳೆದ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ 7 ಹೆಡೆ ಸರ್ಪದ ಪೊರೆ ಮತ್ತೆ ರಾಮನಗರದಲ್ಲಿ ಕಾಣಿಸಿಕೊಂಡಿದೆ. 

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಿಗೌಡನ ದೊಡ್ಡಿಯಲ್ಲಿ ಕಳೆದ ಬಾರಿ ಕಾಣಿಸಿಕೊಂಡ ಜಾಗದಲ್ಲಿಯೇ ಪೊರೆ ಕಾಣಿಸಿಕೊಂಡಿದೆ. 

Tap to resize

Latest Videos

ಕಳೆದ ಬಾರಿ ಸರ್ಪದ ಪೊರೆ ಸಿಕ್ಕ ಜಾಗದಲ್ಲಿ ದೇವಾಲಯವನ್ನು ಕಟ್ಟಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಇದೀಗ ಈ ದೇವಾಲಯದ ಪಕ್ಕದಲ್ಲಿಯೇ ಪೊರೆ ಕಂಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪುರೆಬಾಳಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಪೊರೆ ಕಂಡಿದ್ದು, ದೇವಾಲಯದ ಸುತ್ತ ಕಸ ಗುಡಿಸುತ್ತಿದ್ದ ವೇಳೆ ಪತ್ತೆಯಾಗಿದೆ. ಇದೀಗ 7 ಹೆಡೆ ಸರ್ಪ ಪತ್ತೆಯಾದ ಸ್ಥಳ ನೋಡಲು ಜನರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

click me!