ಐತಿಹಾಸಿಕ ಕೋಟೆಗಳ ಮತ್ತು ಮತ್ತು ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಜಲಪಾತ ಅಭಿವೃದ್ಧಿಪಡಿಸಲು ಸಚಿವ ಸಿ ಟಿ ರವಿಗೆ ಮನವಿ|ಜಿಲ್ಲೆಯಲ್ಲಿರುವ ಪ್ರವಾಸಿತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ| ಜಿಲ್ಲೆಯಲ್ಲಿ ಅನೇಕ ಕೋಟೆ ಮತ್ತು ಪ್ರವಾಸಿ ಸ್ಥಳಗಳಿದ್ದು, ಅಭಿವೃದ್ಧಿಪಡಿಸಬೇಕಾಗಿದೆ| ರಾಯಚೂರು ಮತ್ತು ಲಿಂಗಸುಗೂರು ತಾಲೂಕಿನ ಮುದಗಲ್ ಮತ್ತು ಜಲದುರ್ಗ ಕೋಟೆ ಮತ್ತು ಗೋಲಪಲ್ಲಿ ಜಲಪಾತಕ್ಕೆ ಪ್ರವಾಸಿಗರ ಭೇಟಿ |
ರಾಯಚೂರು[ನ.8]: ಐತಿಹಾಸಿಕ ಕೋಟೆಗಳ ಮತ್ತು ಮತ್ತು ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಜಲಪಾತವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಬೇಕೆಂದು ಗಂಡುಗಲಿ ಕುಮಾರರಾಮ ಜನಕಲ್ಯಾಣ ಸಮಿತಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿರುವ ಪ್ರವಾಸಿತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಜಿಲ್ಲೆಯಲ್ಲಿ ಅನೇಕ ಕೋಟೆ ಮತ್ತು ಪ್ರವಾಸಿ ಸ್ಥಳಗಳಿದ್ದು, ಅಭಿವೃದ್ಧಿಪಡಿಸಬೇಕಾಗಿದೆ. ರಾಯಚೂರು ಮತ್ತು ಲಿಂಗಸುಗೂರು ತಾಲೂಕಿನ ಮುದಗಲ್ ಮತ್ತು ಜಲದುರ್ಗ ಕೋಟೆ ಮತ್ತು ಗೋಲಪಲ್ಲಿ ಜಲಪಾತ ಜನಾಕರ್ಷ ಣೆಯಾಗಿದ್ದು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು ಎಂದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರವಾಸೋದ್ಯಮ ಇಲಾಖೆಯಲ್ಲಿ ಸಿಬ್ಬಂದಿ ನೇಮಕ ಮಾಡಬೇಕು. ಕಳೆದ ಮೂರು ವರ್ಷಗಳಿಂದ ನಿರುದ್ಯೋಗ ಯುವಕರಿಗೆ ವಿತರಣೆಯಾಗಬೇಕಾಗಿದ್ದ ಪ್ರವಾಸಿ ಟ್ಯಾಕ್ಸಿಗಳು ಇಲ್ಲಿಯವರೆಗೆ ವಿತರಣೆಯಾಗಿಲ್ಲ. ಆಯ್ಕೆ ಮಾಡುವಲ್ಲಿ ಅಧಿಕಾರಿಗಳ ಬೇಜವ್ದಾರಿ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಸಾಸಿ ತಾಣಗಳು ಅಭಿವೃದ್ಧಿಪಡಿಸಿಲ್ಲ. ಕೂಡಲೇ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಚುರುಕು ಮುಟ್ಟಿಸಿ ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ಸಿ ಟಿ ರವಿ ಅವರು, ಕೂಡಲೇ ಸಮಸ್ಯೆ ಬಗೆಹರಿಸಿ ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರಘುವೀರ, ಮಲ್ಲಿಕಾರ್ಜುನ ನಾಯಕ, ರಮೇಶ ನಾಯಕ, ಪ್ರವೀಣ ಕುಮಾರ್, ರಾಮಕೃಷ್ಣ, ಕರಿಯಪ್ಪ, ತಿಮ್ಮಪ್ಪ ನಾಯಕ, ಮಹೇಶ ನಾಯಕ್ ಇದ್ದರು.