ಕನ್ನಡ ರಾಜ್ಯೋತ್ಸವ: ತಪ್ಪು ತಪ್ಪು ಕನ್ನಡ ಉಚ್ಛರಿಸಿದ ಶ್ರೀರಾಮುಲು

By Web DeskFirst Published Nov 2, 2019, 8:45 AM IST
Highlights

ರಾಜ್ಯೋತ್ಸವದ ಭಾಷಣದಲ್ಲಿ ಶ್ರೀರಾಮುಲು ಅಪಭ್ರಂಶ ಕನ್ನಡ ರಾಮುಲು ಬಾಯಲ್ಲಿ ಕುಯೆಂಪು ಆದ ಕುವೆಂಪು| ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲೇ ಕನ್ನಡ ಪದಗಳ ಉಚ್ಚಾರಣೆ ತಾಳ ತಪ್ಪಿರುವುದು ಸಾಮಾಜಿಕ ಜಾಲತಾಣದಲಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ|ಕನ್ನಡ ರಾಜ್ಯೋತ್ಸವದಲ್ಲೇ ಅವರು ಈ ರೀತಿ ಕನ್ನಡವನ್ನು ತಪ್ಪು ತಪ್ಪಾಗಿ ಉಚ್ಚರಿಸಿದ್ದು ಇದು ವೈರಲ್ ಆಗಿದೆ|
 

ರಾಯಚೂರು[ನ.2]: ನಗರದ ಡಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 64 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಶ್ರೀರಾಮುಲು ಮಾಡಿದ ಭಾಷಣದಲ್ಲಿ ಕನ್ನಡ ಅಪಭ್ರಂಶವಾಗಿ ನಗೆಪಾಟಲಿಗೀಡಾದ ಪ್ರಸಂಗ ಶುಕ್ರವಾರ ನಡೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲೇ ಕನ್ನಡ ಪದಗಳ ಉಚ್ಚಾರಣೆ ತಾಳ ತಪ್ಪಿರುವುದು ಸಾಮಾಜಿಕ ಜಾಲತಾಣದಲಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುದೀರ್ಘ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಬೇಂದ್ರೆ ಅವರನ್ನು ಬೇರೆಂದ್ರ, ಸಂಘ-ಸಂಸ್ಥೆಗಳನ್ನು ಸಂಘ-ಸಮಸ್ಯೆಗಳು, ಅಂದರೆ ಎನ್ನುವ ಪದವನ್ನು ಅಂದ್ರಗೀನ, ದೇವನಾಂಪ್ರಿಯ ಅಶೋಕ ಎಂಬುದನ್ನು ದೇವಪ್ರಾಣಿಯ ಅಶೋಕವೆಂದು, ಪ್ರಗತಿ ಪಥದಲ್ಲಿ ಎನ್ನುವುದನ್ನು ಪ್ರಗತಿ ಪದಕದಲ್ಲಿ, ಸ್ವಾತಂತ್ರ್ಯವನ್ನು ಸ್ವತಂತ್ರ ಹಾಗೂ ಕುವೆಂಪು ಅವರನ್ನು ಕುಯೆಂಪು ಎಂದು ಉಚ್ಚರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಯಿತು. ತೆಲುಗು ಪ್ರಭಾವ ಹೆಚ್ಚಿರುವ ಬಳ್ಳಾರಿಯವರಾದ ಶ್ರೀರಾಮುಲು ಹಿಂದೆಯೂ ಇದೇ ರೀತಿ ಅನೇಕ ಪದಗಳನ್ನು ತಪ್ಪಾಗಿ ಉಚ್ಚರಿಸಿದ್ದರು. ಆದರೆ, ಈ ಬಾರಿ ಕನ್ನಡ ರಾಜ್ಯೋತ್ಸವದಲ್ಲೇ ಅವರು ಈ ರೀತಿ ಕನ್ನಡವನ್ನು ತಪ್ಪು ತಪ್ಪಾಗಿ ಉಚ್ಚರಿಸಿದ್ದು ಇದು ವೈರಲ್ ಆಗಿದೆ.

click me!