ಟೆಕ್ ದಿಗ್ಗಜ ಗೂಗಲ್ ಇದೀಗ ತನ್ನ ಉದ್ಯೋಗಿಗಳಿಗೆ ಬಂಪರ್ ಆಫರ್ ಘೋಷಿಸಿದೆ. ಶೇಕಡಾ 300 ರಷ್ಟು ವೇತನ ಹೆಚ್ಚಳ ಆಫರ್ ನೀಡಿದೆ. ಈ ಮೂಲಕ ಉದ್ಯೋಗಿಗಳನ್ನು ಬೇರೆ ಕಂಪನಿಗಳಿಗೆ ಸೇರದಂತೆ ತಡೆಯಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ನ್ಯೂಯಾರ್ಕ್(ಫೆ.19) ಉದ್ಯೋಗಿಗಳಿಗೆ ಕಂಪನಿ ಶೇ.30, ಶೇಕಡಾ 50 ರಷ್ಟು ವೇತನ ಹೆಚ್ಚಳ ಕೇಳಿದ್ದೇವೆ. ಆದರೆ ಬರೋಬ್ಬರಿ 300 ಶೇಕಡಾ ವೇತನ ಹೆಚ್ಚಳ ಇದೇ ಮೊದಲು. ಇದೀಗ ಗೂಗಲ್ ತನ್ನ ಉದ್ಯೋಗಿಗಳಿಗೆ ಶೇಕಡಾ 300 ರಷ್ಟು ವೇತನ ಹೆಚ್ಚಳ ಘೋಷಿಸಿದೆ. ಗೂಗಲ್‌ಗೆ ಇದೀಗ ತನ್ನ ಉದ್ಯೋಗಿಗಳನ್ನು ಕಂಪನಿಯಲ್ಲಿ ಹಿಡಿದಿಟ್ಟುಕೊಳ್ಳುವ ಅತೀ ದೊಡ್ಡ ಸವಾಲು ಎದುರಾಗಿದೆ. ಅಮೆರಿಕ ಮೂಲದ ಪರ್ಪ್ಲೆಕ್ಸಿಟಿ AI ಸ್ಟಾರ್ಟ್ಅಪ್ ಕಂಪನಿ ಇದೀಗ ಗೂಗಲ್ ಉದ್ಯೋಗಿಗಳನ್ನು ಉತ್ತಮ ವೇತನ ನೀಡಿ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಗೂಗಲ್ ತನ್ನ ಉದ್ಯೋಗಿಗಳಿಗೆ ಶೇಕಡಾ 300 ರಷ್ಟು ಸ್ಯಾಲರಿ ಹೈಕ್ ಘೋಷಿಸಿದೆ.
ಅಮೆರಿಕದ ಮೂಲದ ಪರ್ಪೆಕ್ಸಿಟಿ AI ಸ್ಟಾರ್ಟ್ ಅಪ್ ಕಂಪನಿ ಸಿಇಒ ಐಐಟಿ ಮದ್ರಾಸ್‌ನಿಂದ ಪದವಿ ಪಡೆದ ಭಾರತ ಮೂಲದ ಅರವಿಂದ್ ಶ್ರೀನಿವಾಸ್. ಅರವಿಂದ್ ತನ್ನ ಪರ್ಪೆಕ್ಸಿಟಿ AI ಸ್ಟಾರ್ಟ್ ಅಪ್ ಕಂಪನಿಗೆ ಗೂಗಲ್‌ನ ನುರಿತ ಉದ್ಯೋಗಿಗಳನ್ನು ನೇಮಕ ಮಾಡಲು ಮುಂದಾಗಿದೆ. ಇದಕ್ಕಾಗಿ ಕೆಲ ಗೂಗಲ್ ಉದ್ಯೋಗಿಗಳನ್ನು ಸಂಪರ್ಕಿಸಿ ಸಂದರ್ಶನ ನಡೆಸಿ ಉದ್ಯೋಗ ಆಫರ್ ನೀಡಿದೆ. ಗೂಗಲ್‌ಗಿಂತ ಉತ್ತಮ ವೇತನವನ್ನು ನಿಗದಿಪಡಿಸಿದೆ.
undefined
Good Habits : ದಿನದ ಆರಂಭವನ್ನು ಹೀಗೆ ಶುರು ಮಾಡ್ತಾರೆ ಗೂಗಲ್ ಸಿಇಒ!
ಪರ್ಪೆಕ್ಸಿಟಿ AI ಸ್ಟಾರ್ಟ್ ಅಪ್ ಸಿಇಒ ಅರವಿಂದ್ ಶ್ರೀನಿವಾಸ್ ಸಂಪರ್ಕಿಸಿ ಆಫರ್ ಲೆಟರ್ ನೀಡಿರುವ ಉದ್ಯೋಗಿಗಳ ಮಾಹಿತಿ ಪಡೆದಿರುವ ಗೂಗಲ್, ಇದೀಗ ತನ್ನ ಉದ್ಯೋಗಿಗಳನ್ನು ಕಂಪನಿಯಲ್ಲೇ ಉಳಿಸಿಕೊಳ್ಳಲು ಗೂಗಲ್ ಶೇಕಡಾ 300 ರಷ್ಟು ವೇತನ ಹೆಚ್ಚಳ ಘೋಷಣೆ ಮಾಡಿದೆ. ಟೆಕ್ ದಿಗ್ಗಜ ಕಂಪನಿಗಳಲ್ಲಿ ಉದ್ಯೋಗ ಕಡಿತ ಸೇರಿದಂತೆ ಹಲವು ಬೆಳವಣಿಗೆಗಳು ನಡೆಯುತ್ತಿದೆ. ಇದರ ನಡುವೆ ಗೂಗಲ್ ಘೋಷಣೆ ಹಲವರಲ್ಲಿ ಅಚ್ಚರಿ ತಂದಿದೆ.
ನಾವು ಸಂಪರ್ಕಿಸಿ ಸಂದರ್ಶನ ನಡೆಸಿದ ಉದ್ಯೋಗಿಗಳಿಗೆ ಆಫರ್ ಲೆಟರ್ ನೀಡಲಾಗಿದೆ. ಆದರೆ ಸದ್ಯ ಆ ಉದ್ಯೋಗಿಗಳು ಗೂಗಲ್ ಉದ್ಯೋಗಿಗಳಾಗಿದ್ದಾರೆ. ನೋಟಿಸ್ ಅವಧಿ, ರಿಲೀವಿಂಗ್ ಲೆಟರ್ ಸೇರಿದಂತೆ ಕೆಲ ಪ್ರಕ್ರಿಯೆಗಳು ಮುಗಿಸಿ ಕಂಪನಿಯಿಂದ ಹೊರಬರಬೇಕಾಗುತ್ತದೆ. ಆದರೆ ಪರ್ಪೆಕ್ಸಿಟಿ AI ಸ್ಟಾರ್ಟ್ ಅಪ್ ಕಂಪನಿಯ ಆಫರ್‌ನಿಂದ ಗೂಗಲ್ ಇದೀಗ ಎಚ್ಚೆತ್ತುಕೊಂಡಿದೆ. ಹೀಗಾಗಿ ಊಹಿಸಲಾಗದ ಆಫರ್ ನೀಡುತ್ತಿದೆ. ಇದರಿಂದ ಉದ್ಯೋಗಿಗಳು ಹಿಂಜರಿಯುತ್ತಿದ್ದಾರೆ ಎಂದು ಅರವಿಂದ್ ಶ್ರೀನಿವಾಸ್ ಹೇಳಿದ್ದಾರೆ.
ಪರ್ಪೆಕ್ಸಿಟಿ AI ಸ್ಟಾರ್ಟ್ ಅಪ್ ಕಂಪನಿ, ಗೂಗಲ್‌ನಿಂದ ಆರಿಸಿರುವ ಉದ್ಯೋಗಿಗಳಿಗೆ ಎಷ್ಟು ವೇತನ ಆಫರ್ ಮಾಡಲಾಗಿದೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇತ್ತ ಪರ್ಪೆಕ್ಸಿಟಿ AI ಸ್ಟಾರ್ಟ್ ಅಪ್ ಕಂಪನಿ ಭಾರಿ ಆಫರ್ ಮೂಲಕ ನುರಿತ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಯಾರಿ ನಡೆಸುತ್ತಿದೆ.
ಗೂಗಲ್ ಇತ್ತೀಚೆಗೆ ಭಾರಿ ಉದ್ಯೋಗ ಕಡಿತದ ಮೂಲಕ ಸುದ್ದಿಯಾಗಿತ್ತು. ಹಲವು ರಾಷ್ಟ್ರಗಳಲ್ಲಿರುವ ತನ್ನ ಶಾಖೆಗಳಲ್ಲಿ ಉದ್ಯೋಗ ಕಡಿತ ಮಮಾಡಿತ್ತು. ಗೂಗಲ್ ಅಸಿಸ್ಟೆನ್ಸ್, ಗೂಗಲ್ ಹಾರ್ಡ್‌ವೇರ್, ಗೂಗಲ್ ಎಂಜಿನೀಯರಿಂಗ್ ಸೇರಿದಂತೆ ಹಲವು ವಿಭಾಗದಿಂದ ಗೂಗಲ್ ಉದ್ಯೋಗ ಕಡಿತ ಮಾಡಿತ್ತು. ಇದೀಗ ಶೇಕಡಾ 300 ರಷ್ಟು ವೇತನ ಹೆಚ್ಚಳ ಮಾಡಿ ಸುದ್ದಿ ಮಾಡಿದೆ.