ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡ ವಿಧಿಸಿದ ಕಂಪನಿ!

By Suvarna NewsFirst Published Mar 31, 2023, 5:29 PM IST
Highlights

ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕಾರಣ ಧಮ್ ಎಳೆದು ನಿಟ್ಟುಸಿಬಿಟ್ಟ ಉದ್ಯೋಗಿಗೆ ಬರೋಬ್ಬರಿ 9 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇಷ್ಟೇ ಅಲ್ಲ 6 ತಿಂಗಳ ವೇತನದಲ್ಲಿ ಶೇಕಡಾ 10 ರಷ್ಟು ಕಡಿತ ಮಾಡಲಾಗಿದೆ. 
 

ಜಪಾನ್(ಮಾ.31): ಐಟಿ ಕಂಪನಿಯಿಂದ ಹಿಡಿದು ಚಿಕ್ಕ ಚಿಕ್ಕ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೆಲಸದ ಒತ್ತಡ, ಜವಾಬ್ದಾರಿ, ನಿರ್ವಹಣೆ ಸೇರಿದಂತೆ ಹಲವು ಸವಾಲುಗಳು ಇದ್ದೇ ಇದೆ. ಈ ಕಲಸದ ನಡುವೆ ಚಿಕ್ಕ ಚಿಕ್ರ್ ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಒತ್ತಡದ ನಡುವೆ ರಿಲ್ಯಾಕ್ಸ್ ಆಗಲು ಧಮ್ ಎಳೆಯುವುದು ಹೊಸವಿಚಾರವಲ್ಲ. ಹೀಗೆ ಉದ್ಯೋಗಿಯೊಬ್ಬ ಕೆಲಸದ ನಡುವೆ ಪದೇ ಪದೇ ಬ್ರೇಕ್ ತೆಗೆದುಕೊಂಡು ಧಮ್ ಎಳೆದು ನಿಟ್ಟುಸಿರುಬಿಡುತ್ತಿದ್ದ. ಆದರೆ ವರ್ಷಾಂತ್ಯದಲ್ಲಿ ಉದ್ಯೋಗಿಗೆ ವೇತನ ಹೆಚ್ಚಳ ಬದಲು ಆಘಾತ ಎದುರಾಗಿದೆ. ಕಾರಣ ಧಮ್ ಎಳೆಯಲು ಪದೇ ಪದೇ ಬ್ರೇಕ್ ತೆಗೆದುಕೊಂಡ ಉದ್ಯೋಗಿಗೆ 9 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಷ್ಟೇ ಅಲ್ಲ 6 ತಿಂಗಳ ವೇತನದಲ್ಲಿ ಶೇಕಡಾ 10 ರಷ್ಟು ಕಡಿತ ಮಾಡಲಾಗಿದೆ.

61 ವರ್ಷದ ಉದ್ಯೋಗಿ ತನ್ನ 14 ವರ್ಷದ ಸೇವೆಯಲ್ಲಿ 4,500 ಬಾರಿ ಧಮ್ ಎಳೆಯಲು ಬ್ರೇಕ್ ತೆಗೆದುಕೊಂಡಿದ್ದಾರೆ. ಪ್ರತಿ ದಿನ ಹಲವು ಬಾರಿ ಧಮ್ ಎಳೆಯಲು ಬ್ರೇಕ್ ತೆಗೆದುಕೊಂಡಿದ್ದಾರೆ ಎಂದು ಕಂಪನಿ ಅಂಕಿ ಅಂಶ ಸಮೇತೆ ದಂಡ ಹಾಕಿದೆ. 14 ವರ್ಷದಲ್ಲಿ ತೆಗೆದುಕೊಂಡ 4,500 ಸ್ಮೋಕ್ ಬ್ರೇಕ್‌ನಲ್ಲಿ 3,400 ಅನಧಿಕೃತವಾಗಿದೆ. ಅಂದರೆ ಪ್ರತಿ ದಿನ ಇಂತಿಷ್ಟು ಬ್ರೇಕ್ ಧಮ್ ಎಳೆಯಲು ಕಂಪನಿ ಅವಕಾಶ ನೀಡಿದೆ. ಆದರೆ ಈ ಉದ್ಯೋಗಿ ನಿಗದಿತ ಬ್ರೇಕ್‌ಗಿಂತ ಹೆಚ್ಚು ಬಾರಿ ಬ್ರೇಕ್ ತೆಗದುಕೊಂಡಿರುವುದು ಬೆಳಕಿಗೆ ಬಂದಿದೆ.

ವಿಮಾನದಲ್ಲಿ ಮಾಡಬಾರದ್ದನ್ನ ಮಾಡಿ ಜೈಲು ಸೇರಿದ ಭೂಪ..!

ಉದ್ಯೋಗಿಯ ಹೆಚ್ಚುವರಿ ಬ್ರೇಕ್‌ನಿಂದ ಕಂಪನಿ ಉತ್ಪಾದಕೆಯಲ್ಲಿ ಕುಸಿಕೊಂಡಿದೆ. ಇಷ್ಟೇ ಅಲ್ಲ 14 ವರ್ಷ ಓರ್ವ ಉದ್ಯೋಗಿ ಮಾಡುವ ಕೆಲಸ ಸಂಪೂರ್ಣ ಬ್ರೇಕ್‌ನಲ್ಲಿ ಕಳೆದುಹೋಗಿದೆ. ಹೀಗಾಗಿ 9 ಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು 6 ತಿಂಗಳು ವೇತನದಲ್ಲಿ ಶೇಕಡಾ 10 ರಷ್ಟು ಕಡಿತ ಮಾಡಲಾಗಿದೆ. ಇಷ್ಟೇ ಅಲ್ಲ ಮತ್ತೊಂದು ಎಚ್ಚರಿಕೆಯನ್ನು ನೀಡಲಾಗಿದೆ.

ಸಿಗರೇಟ್ ಸೇದಲು ಕೆಲಸದ ನಡುವೆ ಬ್ರೇಕ್ ತೆಗೆದುಕೊಳ್ಳುವುದು ಹೊಸದೇನಲ್ಲ. ಆದರೆ ಕಂಪನಿ ಓರ್ವ ಉದ್ಯೋಗಿ ಎಷ್ಟು ಬಾರಿ ಬ್ರೇಕ್ ತೆಗೆದುಕೊಂಡಿದ್ದಾನೆ. ಇದರಲ್ಲಿ ಎಷ್ಟು ಬಾರಿ ಸರಿಯಾದ ಕಾರಣಕ್ಕೆ ತೆಗೆದುಕೊಂಡಿದ್ದಾನೆ ಅನ್ನೋದನ್ನು ಗಮಿಸುತ್ತದೆ ಅನ್ನೋದು ಈ ವಿಚಾರದಲ್ಲಿ ಬಹಿರಂಗವಾಗಿದೆ. ಈ ಘಟನೆ ಬಳಿಕ ಜಪಾನ್ ಖಾಸಗಿ ಕಂಪನಿಯಲ್ಲಿ ಸ್ಮೋಕ್ ಬ್ರೇಕ್ ತೆಗೆದುಕೊಳ್ಳುವುದು, ಅನಗತ್ಯ ಕಾರಣಕ್ಕೆ ಬ್ರೇಕ್ ತೆಗೆದುಕೊಳ್ಳುವುದು ಕಡಿಮೆಯಾಗಿದೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿದೆ.

 

ಸ್ಮೋಕ್ ಮಾಡ್ಬೇಕಿಲ್ಲ, ಸಿಗರೇಟ್‌ ಸೇದೋರ ಬಳಿ ನಿಂತ್ರೂ ಹೊಗೆ ಹಾಕಿಸ್ಕೊಳ್ಳೋ ಚಾನ್ಸಸ್ ಹೆಚ್ಚು
 

click me!