ಯಾವುದೇ ಉದ್ಯೋಗ ಶಾಶ್ವತವಾಗಿರಲು ಸಾಧ್ಯವಿಲ್ಲ. ಅನೇಕ ಕಾರಣಕ್ಕೆ ನಾವು ಕಂಪನಿಯಿಂದ ಹೊರ ಬರಬೇಕಾಗುತ್ತದೆ. ಆದ್ರೆ ಕಂಪನಿಯೇ ನಮ್ಮನ್ನು ಹೊರಹಾಕಿದಾಗ ಕೋಪ ಬರೋದು ಸಹಜ. ಅನಾರೋಗ್ಯದ ಕಾರಣಕ್ಕೆ ಕೆಲಸದಿಂದ ವಜಾ ಮಾಡಿದ ಬಾಸ್ ಮೇಲೆ ಈ ಯುವತಿ ಸೇಡು ತೀರಿಸಿಕೊಂಡ ಬಗೆ ಭಯಂಕರವಾಗಿದೆ.
ಕೆಲಸದ ಸ್ಥಳದಲ್ಲಿ ಉದ್ಯೋಗಿ ಹಾಗೂ ಬಾಸ್ ಮಧ್ಯೆ ಗಲಾಟೆ ಸಾಮಾನ್ಯ. ರಜೆ ವಿಷ್ಯದಲ್ಲಿ ಆಗಾಗ ಗಲಾಟೆ ನಡೆಯುತ್ತಿರುತ್ತದೆ. ಮನಸ್ತಾಪಗಳಾಗುವುದಿದೆ. ಉದ್ಯೋಗಿ ಸರಿಯಾಗಿ ಕೆಲಸಕ್ಕೆ ಬರ್ತಿಲ್ಲ ಎನ್ನುವ ಕಾರಣಕ್ಕೆ ಅಥವಾ ಕೆಲಸ ಸರಿಯಾಗಿ ಮಾಡ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸುವ ಅನೇಕ ಕಂಪನಿಗಳಿವೆ. ಕೆಲಸದಿಂದ ವಜಾಗೊಂಡ ಕೆಲ ಉದ್ಯೋಗಿಗಳು ಬೇರೊಂದು ಕೆಲಸಕ್ಕೆ ಹುಡುಕಾಟ ನಡೆಸಿದ್ರೆ ಮತ್ತೆ ಕೆಲವರು ಹಳೆ ಬಾಸ್ ಮೇಲೆ ಕೋಪ ಮಾಡಿಕೊಂಡು ಅಲ್ಲಿ ಇಲ್ಲಿ ಅವರ ಬಗ್ಗೆ ಹೇಳ್ತಾ ಓಡಾಡ್ತಾರೆ. ಈ ಮಧ್ಯೆ ಈ ಯುವತಿಯೊಬ್ಬಳು ಬಾಸ್ ಕೆಲಸದಿಂದ ತೆಗೆದು ಹಾಕ್ತಿದ್ದಂತೆ ಅಚ್ಚರಿ ಕೆಲಸ ಮಾಡಿದ್ದಲ್ಲದೆ, ಆ ಕಂಪನಿ ಶಾಶ್ವತವಾಗಿ ಬಾಗಿಲು ಮುಚ್ಚುವಂತೆ ಮಾಡಿದ್ದಾಳೆ.
ಸಾಮಾಜಿಕ ಜಾಲತಾಣ ರೆಡ್ಡಿಟ್ (Reddit) ನಲ್ಲಿ ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ತಿರುತ್ತಾರೆ. ಈಗ ಯುವತಿಯೊಬ್ಬಳು ತನ್ನ ಕೆಲಸ ಹಾಗೂ ಕೆಲಸ ಹೋದ್ಮೇಲೆ ತಾನು ಸೇಡು ತೀರಿಸಿಕೊಂಡಿದ್ದು ಹೇಗೆ ಎಂಬುದನ್ನು ಹೇಳಿದ್ದಾಳೆ.
ಆಕೆ ಜಿಮ್ನಾಸ್ಟಿಕ್ (Gymnastics) ತರಬೇತುದಾರಳಾಗಿ ಕೆಲಸ ಮಾಡ್ತಿದ್ದಳು. ಎರಡು ತಿಂಗಳು ಆಕೆ ಕೆಲಸ ಮಾಡಿದ ನಂತ್ರ ಆಕೆ ಆರೋಗ್ಯ (health) ದಲ್ಲಿ ಏರುಪೇರಾಗಿತ್ತು. ತಲೆ ಸುತ್ತು ಬರ್ತಿತ್ತು. ಅನೇಕ ಬಾರಿ ಆಕೆ ತಲೆ ಸುತ್ತುತ್ತಿದ್ದ ಕಾರಣ ಆಕೆ ಸಮತೋಲನ ಕಳೆದುಕೊಳ್ತಿದ್ದಳು. ಮೆದುಳು ಕೆಲಸ ಮಾಡೋದನ್ನೇ ನಿಲ್ಲಿಸುತ್ತಿತ್ತು. ಒಂದು ದಿನ ಕಚೇರಿಯಲ್ಲಿ ತಲೆ ಸುತ್ತು ಬಂದ ಕಾರಣ ಯುವತಿ ಬಾತ್ ರೂಮಿಗೆ ಹೋಗಿದ್ದಾಳೆ. ಅಲ್ಲಿ ವಾಂತಿಯಾಗಿದೆ. ಆ ನಂತ್ರ ಸಹೋದ್ಯೋಗಿಗಳು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿರುವಾಗ್ಲೇ ಬಾಸ್ ಆಕೆಯನ್ನು ಕೆಲಸದಿಂದ ವಜಾ ಮಾಡಿದ್ದ. ಈ ವಿಷ್ಯ ತಿಳಿದ ಯುವತಿ ಕಂಗಾಲಾಗಿದ್ದಳು. ಆಕೆ ಸಹೋದ್ಯೋಗಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಅನೇಕರು ಬೆಂಬಲ ನೀಡಿದ್ದರು. ಇಂಥ ಬಾಸ್ ಕೆಳಗೆ ಕೆಲಸ ಮಾಡ್ಬಾರದಿತ್ತು, ಬಾಸ್ ಸ್ವಾರ್ಥಿ ಎಂದು ಕಮೆಂಟ್ ಮಾಡಿದ್ದರು.
ಯುವತಿ ಚೇತರಿಸಿಕೊಂಡ ನಂತ್ರ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ನಿರ್ಧಾರಕ್ಕೆ ಬಂದಳು. ಆಕೆ ಸ್ಲೋ ಪಾಯಿಸನ್ ನಂತೆ ಕೆಲಸ ಮಾಡಿದಳು. ಸಾಮಾಜಿಕ ಜಾಲತಾಣದಲ್ಲಿ ತನಗಾದ ಅನುಭವ ಹಂಚಿಕೊಂಡಿದ್ದಲ್ಲದೆ, ಕಂಪನಿ ಬಗ್ಗೆ ಬರೆಯಲು ಶುರು ಮಾಡಿದ್ದಳು. ಕಂಪನಿ ಒಳಗೆ ಏನೆಲ್ಲ ನಡೆಯುತ್ತದೆ ಎಂಬುದನ್ನು ಫೋಟೋ, ವಿಡಿಯೋ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಳು. ಈ ವಿಡಿಯೋ, ಫೋಟೋ ನೋಡಿದ ಜನರು ನಿಧಾನವಾಗಿ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ್ರು. ಒಬ್ಬರಾದ್ಮೇಲೆ ಒಬ್ಬರಂತೆ ಕ್ಲಾಸಿಗೆ ಹೋಗೋದನ್ನು ನಿಲ್ಲಿಸಿದ ಕಾರಣ ಕಂಪನಿ ಮುಚ್ಚುವ ಸ್ಥಿತಿಗೆ ಬಂತು ಎಂದು ಯುವತಿ ಹೇಳಿದ್ದಾಳೆ.
ಮಗು ಬೇಕೆಂದ ಪತಿಗೆ ನೋ ಎಂದ ಮಡದಿ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಸಲಿಂಗಿ ಸ್ನೇಹಿತನ ಕುಡಿ!
ರೆಡ್ಡಿಟ್ ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಹಿಳೆಗೆ ಸಿಕ್ಕ ಜಯ ಎಂದು ಕೆಲವರು ಬರೆದಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಉದ್ಯೋಗಿಯನ್ನು ಕೆಲಸದಿಂದ ತೆಗೆಯೋದು ಸೂಕ್ತವಲ್ಲ ಎಂದು ಮತ್ತೆ ಕೆಲ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಖಾಯಿಲೆ ಬಿದ್ದಾಗ ರಜೆ ಹಾಕೋದು ಎಲ್ಲರ ಹಕ್ಕು. ಈ ಕಾರಣಕ್ಕೆ ಕೆಲಸದಿಂದ ತೆಗೆಯೋದು ಕಾನೂನಿಗೆ ವಿರುದ್ಧ. ಅನಾರೋಗ್ಯದ ಕಾರಣಕ್ಕೆ ಜನರು ರಜೆ ಪಡೆಯುತ್ತಾರೆ. ರಜೆ ಮುಗಿದ ಕೂಡಲೆ ಕೆಲಸಕ್ಕೆ ವಾಪಸ್ ಆಗ್ಬೇಕು. ಒಂದ್ವೇಳೆ ಕೆಲಸಕ್ಕೆ ವಾಪಸ್ ಆಗದಿದ್ದಲ್ಲಿ ವಜಾ ಮಾಡುವ ಹಕ್ಕು ಕಂಪನಿಗಿದೆ ಎಂದು ಇನ್ನೊಬ್ಬರು ಮಾಹಿತಿ ನೀಡಿದ್ದಾರೆ. ಒಂದೇ ಕಂಪನಿಯಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ರೆ ಅವರನ್ನು ವಜಾ ಮಾಡುವ ಮೊದಲು ಕಂಪನಿ ನೊಟೀಸ್ ನೀಡಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ.