ಕೊಪ್ಪಳದಲ್ಲಿ ಆಪರೇಷನ್ ಹಸ್ತ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಜಮೀರ್

By Suvarna News  |  First Published Jun 22, 2021, 7:05 PM IST

* ಮಾಜಿ ಸಚಿವ ಜಮೀರ್‌ ಅಹಮ್ಮದ್ ಪ್ಲಾನ್ ಸಕ್ಸಸ್
* ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟ ಜಮೀರ್ ಅಹ್ಮದ್ ಖಾನ್
* ಕೊಪ್ಪಳದಲ್ಲಿ ಜೆಡಿಎಸ್ ಪ್ರಭಾವಿ ಮುಖಂಡ ಕಾಂಗ್ರೆಸ್ ಸೇರ್ಪಡೆ


ಕೊಪ್ಪಳ, (ಜೂನ್.22): ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಕೊಪ್ಪಳ ಪ್ರವಾಸದಲ್ಲಿದ್ದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಹೌದು...ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಜೆಡಿಎಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರನ್ನ ಕಾಂಗ್ರೆಸ್​ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Tap to resize

Latest Videos

ಬಿಜೆಪಿ ಅಯ್ತು ಈಗ ಕಾಂಗ್ರೆಸ್‌ ಸರದಿ: 'ಕೈ' ಪಾಳಯದಲ್ಲಿ ‘ಸಿದ್ದು ಮುಂದಿನ ಸಿಎಂ’ ವಿವಾದ..! 

ಮಾಜಿ ಸಚಿವ ಜಮೀರ್‌ ಅಹಮ್ಮದ್ ಮೂಲಕ ಶಾಸಕ‌ ರಾಘವೇಂದ್ರ ಹಿಟ್ನಾಳ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂಬರುವ ಚುನಾವಣೆಗೆ ಗ್ರೌಂಡ್ ವರ್ಕ್ ಮಾಡಲು ಸೈಯದ್​​ರನ್ನ ಹಿಟ್ನಾಳ್ ಪಕ್ಷಕ್ಕೆ ಬರಮಾಡಿಕೊಂಡಿರು.

 ಸ್ಥಳೀಯವಾಗಿ ಜೆಡಿಎಸ್​ನಲ್ಲಿ ಕೆ.ಎಂ.ಸೈಯದ್ ನಿರ್ಲಕ್ಷ್ಯಕ್ಕೊಳಪಟ್ಟಿದ್ದರು. ಹಾಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೊಪ್ಪಳ ಕ್ಷೇತ್ರದಿಂದ ಸೈಯದ್ ಸ್ಪರ್ಧಿಸಿದ್ದರು. ಇದೀಗ ಸೈಯದ್ ಕಾಂಗ್ರೆಸ್ ಪಾಲಾಗಿರುವುದು ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ಮತ್ತಷ್ಟು ಬಲಬಂದಂತಾಗಿದೆ. 

click me!