ನಾನೀಗ ಬಿಜೇಪಿಲಿ ಇದ್ದೇನೆ, ಮುಂದೇನು ಗೊತ್ತಿಲ್ಲ: ಕುತೂಹಲ ಮೂಡಿಸಿದ ಕಮಲ ನಾಯಕನ ಹೇಳಿಕೆ..!

By Kannadaprabha News  |  First Published Aug 29, 2023, 5:39 AM IST

ಹೊರಗೆ ಜನ ಏನೇ ಮಾತನಾಡಿದರೂ ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ. ನನ್ನ ವಿವೇಚನೆಗೆ ಸಂಬಂಧಿಸಿದ್ದಕ್ಕೆ ಮಾತ್ರ ಉತ್ತರ ನೀಡುತ್ತೇನೆ ಎಂದ ಶಾಸಕ ಶಿವರಾಮ ಹೆಬ್ಬಾರ್‌ 


ಮುಂಡಗೋಡ(ಆ.29):  ಮುಂದೆ ನಡೆಯುವುದನ್ನು ಈಗಲೇ ಹೇಳಲು ನಾನು ಜ್ಯೋತಿಷಿಯಲ್ಲ. ಸದ್ಯ ನಾನು ಬಿಜೆಪಿ ಪಕ್ಷದ ಶಾಸಕ, ಇಲ್ಲಿಯೇ ಇದ್ದೇನೆ. ಮುಂದೆ ಏನು ಬೇಕಾದರೂ ಆಗಬಹುದು ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ.  ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ಕುರಿತು ಎದ್ದಿರುವ ಪುಕಾರುಗಳ ನಡುವೆ ಹೆಬ್ಬಾರ್‌ ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಸೇರ್ಪಡೆ ಕುರಿತು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೊರಗೆ ಜನ ಏನೇ ಮಾತನಾಡಿದರೂ ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ. ನನ್ನ ವಿವೇಚನೆಗೆ ಸಂಬಂಧಿಸಿದ್ದಕ್ಕೆ ಮಾತ್ರ ಉತ್ತರ ನೀಡುತ್ತೇನೆ ಎಂದರು.

Tap to resize

Latest Videos

undefined

ಕಾಂಗ್ರೆಸ್‌ ಸೇರೊಲ್ಲವೆಂದು ಹೇಳುತ್ತಲೇ ಸಿಎಂ ಸಿದ್ದರಾಮಯ್ಯ ಭೇಟಿಯಾದ ಶಾಸಕ ಶಿವರಾಂ ಹೆಬ್ಬಾರ್

ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಆಪರೇಷನ್‌ ಹಸ್ತ ನಡೆಯಲಿದ್ದು, ಹೆಬ್ಬಾರ್‌ ಸೇರಿ ಬಿಜೆಪಿಯ ಹಲವು ಶಾಸಕರು, ಮಾಜಿ ಶಾಸಕರು, ಮುಖಂಡರು ಕಾಂಗ್ರೆಸ್‌ ಸೇರಲಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. 
 

click me!