ಕೋಲಾರಕ್ಕೆ ಸಿಎಂ ನೀಡಿದ್ದ ಭರವಸೆ ಈಡೇರಿಸಲು ಶ್ರಮಿಸುವೆ: ಸಚಿವ ಬೈರತಿ ಸುರೇಶ್‌

By Kannadaprabha News  |  First Published Jun 12, 2023, 1:39 PM IST

ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಬಯಸಿ ಕೋಲಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಮ್ಮ ಬೇಡಿಕೆಗಳ ಕುರಿತು ಏನೇನು ಭರವಸೆ ನೀಡಿದ್ದರೂ ಅವೆಲ್ಲವನ್ನು ಈಡೇರಿಸಲು ಶ್ರಮಿಸುತ್ತೇನೆಂದು ಸಚಿವ ಬೈರತಿ ಬಿ.ಎಸ್‌.ಸುರೇಶ್‌ ಆಶ್ವಾಸನೆ ನೀಡಿದರು. 


ಕೋಲಾರ (ಜೂ.12): ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಬಯಸಿ ಕೋಲಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಮ್ಮ ಬೇಡಿಕೆಗಳ ಕುರಿತು ಏನೇನು ಭರವಸೆ ನೀಡಿದ್ದರೂ ಅವೆಲ್ಲವನ್ನು ಈಡೇರಿಸಲು ಶ್ರಮಿಸುತ್ತೇನೆಂದು ರಾಜ್ಯ ನಗರಾಭಿವೃದ್ದಿ ಮತ್ತು ಪಟ್ಟಣ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಿ.ಎಸ್‌.ಸುರೇಶ್‌ ಆಶ್ವಾಸನೆ ನೀಡಿದರು. ನಗರದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಮಹಿಳೆಯರ ಉಚಿತ ಬಸ್‌ ಪ್ರಯಾಣ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಮ್ಮೆಲ್ಲಾರ ಆಶೀರ್ವಾದದಿಂದ ಇಂದು ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ ಎಂದರು.

ಐದು ಗ್ಯಾರಂಟಿ ಜಾರಿ ಆಶ್ವಾಸನೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮಹಿಳೆಯರ ಶಕ್ತಿ ಯೋಜನೆಯನ್ನು ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷವು ರಾಜ್ಯದ ಜನತೆ 5 ಪ್ರಮುಖ ಆಶ್ವಾಸನೆಗಳನ್ನು ನೀಡಿತ್ತು. ಅದರಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯದ ಶಕ್ತಿ ಯೋಜನೆ, ಮನೆಯ ಯಜಮಾನಿ ಬ್ಯಾಂಕ್‌ ಖಾತೆಗೆ ಗೃಹ ಲಕ್ಷ್ಮೀ ಯೋಜನೆಯಲ್ಲಿ ಮಾಸಿಕ 2 ಸಾವಿರ ರು., ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಪದವಿಧರ ನಿರುದ್ಯೋಗಿಗೆ ಮಾಸಿಕ 3 ಸಾವಿರ ರು., ಡಿಪೊ್ಲೕಮಾ ಮಾಡಿದವರಿಗೆ 1500 ರೂ. ನೀಡಲಾಗುವುದು ಎಂದರು. ಮಹಿಳೆಯರು ಇಂದಿನಿಂದ ತಮ್ಮ ಗುರುತಿನ ಚೀಟಿ ತೋರಿಸಿ ರಾಜ್ಯದ 30 ಜಿಲ್ಲೆಗಳಿಗೂ ಎಷ್ಟುಬಾರಿಯಾದರೂ ಉಚಿತವಾಗಿ ಸಂಚರಿಸ ಬಹುದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಮೊದಲನೆ ಹಂತವಾಗಿ ಸರ್ಕಾರ ರಚನೆಯಾದ 20 ದಿನದಲ್ಲಿ ಏಕಕಾಲದಲ್ಲಿ ಚಾಲನೆ ನೀಡಲಾಗುತ್ತಿದೆ. ಮಹಿಳೆಯರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

Latest Videos

undefined

ಪಿಯು ಫೇಲ್‌ ಅಲ್ಲ, ನ್ಯಾಷನಲ್‌ ಲಾ ಸ್ಕೂಲಲ್ಲಿ ಓದಿದವನು: ಸಚಿವ ಪ್ರಿಯಾಂಕ್‌ ಖರ್ಗೆ

ಆ.15ರಂದು ‘ಗೃಹಲಕ್ಷ್ಮೀ’ ಜಾರಿ: ಆ.15 ರಿಂದ ಪ್ರತಿ ತಿಂಗಳು ಮನೆ ಯಾಜಮಾನಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ 2 ಸಾವಿರ ರು., ಜು.1ರಿಂದ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು, ಪ್ರತಿಯೊಬ್ಬ ಪಡಿತರ ಚೀಟಿ ಹೊಂದಿರುವ ವ್ಯಕ್ತಿಗೆ 10 ಕೆ.ಜಿ. ಉಚಿತ ಅಕ್ಕಿ ನೀಡಲಾಗುವುದು ಎಂದರು. ಮುಖ್ಯಮಂತ್ರಿ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಮಾತನಾಡಿ, ಜಿಲ್ಲೆಯಿಂದ ಪ್ರತಿ ದಿನ 1,72 ಲಕ್ಷ ಜನರು ಕೆ.ಎಸ್‌.ಆರ್‌.ಟಿ.ಸಿ. ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಕೋಲಾರ ವಿಭಾಗವೊಂದರಿಂದಲೇ 75 ಸಾವಿರ ಮಹಿಳೆಯರು ವಿವಿಧ ಕಡೆ ಪ್ರಯಾಣಿಸುತ್ತಾರೆ. ಇನ್ನು ಮಂದೆ ಮಹಿಳೆಯರು ಉಚಿತ ಬಸ್‌ ಸೌಲಭ್ಯ ಸದ್ಬಳಿಸಿಕೊಳ್ಳಬೇಕೆಂದು ತಿಳಿಸಿದರು.

ಅಭಿಮಾನಿಗಳು ಹಚ್ಚಿದ ಪಟಾಕಿ ಸಿಡಿದು ಸಚಿವ ರಾಜಣ್ಣ ಕಣ್ಣಿಗೆ ಗಾಯ

ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸದಕಾಲ ಅಭಿವೃದ್ದಿ ಹಾಗೂ ಬಡವರ ಪರ ಇರುತ್ತಾರೆ. ಸಿದ್ದರಾಮಯ್ಯ ಬಡವರ ಶಕ್ತಿಯಾಗಿದ್ದಾರೆ. ಕಳೆದ ಅವರ ಆಡಳಿತದಲ್ಲಿ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್‌ ಮಾತನಾಡಿ, ಸಿದ್ದರಾಮಯ್ಯ ಕೊಟ್ಟಮಾತಿಗೆ ಎಂದೂ ತಪ್ಪುವವರಲ್ಲ ನಮ್ಮೆಲ್ಲರ ಗುರಿ ಕೋಲಾರ ಅಭಿವೃದ್ದಿಯಾಗಿದೆ. ಬೆಂಗಳೂರಿಗೆ ಹತ್ತಿರವಾಗಿರುವ ಕೋಲಾರವು ಅಭಿವೃದ್ದಿ ಹೊಂದಬೇಕಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮೇನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಪಂ ಸಿಇಒ ಯುಕೇಶ್‌ ಕುಮಾರ್‌, ಕೆ.ಜಿ.ಎಫ್‌ ಎಸ್ಪಿ ಧರಣಿದೇವಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಾಣಾಧಿಕಾರಿ ವಿ.ಬಸವರಾಜ್‌, ನಗರ ಬ್ಲಾಕ್‌ ಅಧ್ಯಕ್ಷ ಪ್ರಸಾದ್‌ ಬಾಬು, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಉದಯಶಂಕರ್‌, ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ, ಮತ್ತಿತರರು ಇದ್ದರು.

click me!