
ಮಂಗಳೂರು (ಜು.24): ಯಾರಾದರೂ ಕಾಂಗ್ರೆಸ್ ಬರುವವರಿದ್ದರೆ ಅರ್ಜಿ ಸಲ್ಲಿಸಲಿ, ಆ ಮೇಲೆ ಕೂತು ಮಾತನಾಡೋಣ - ಹೀಗೆಂದು ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ವಲಸೆ ಬಂದ ಸಚವರನ್ನು ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾತ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಬರಲು ಇಷ್ಟಪಡುವವರು ಬಹಳಷ್ಟು ಜನ ಇದ್ದಾರೆ. ಅವರ ಹೆಸರು ಹೇಳುವುದಿಲ್ಲ ಎಂದರು.
ಸಿಎಂ ಕೂಗು ನಿಲ್ಲಿಸಿ: ಡಿಕೆಶಿ, ಸಿದ್ದುಗೆ ರಾಹುಲ್ ವಾರ್ನಿಂಗ್!
ನಾನು ಬಹಳ ಹಿಂದೆಯೇ ಈ ಬಗ್ಗೆ ಜು. 26 ರಂದು ಮಾತನಾಡುವ ಎಂದು ಹೇಳಿದ್ದೆ. ಬಿಜೆಪಿಗೆ ಈ ರಾಜ್ಯದಲ್ಲಿ ಒಳ್ಳೆ ಸರ್ಕಾರ ಕೊಡುವುದಕ್ಕೆ ಆಗುವುದಿಲ್ಲ ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ. ಡಬಲ್ ಎಂಜಿ ಸರ್ಕಾರ ಇದ್ದರೂ ಒಳ್ಳೆಯ ಆಡಳಿತ ನೀಡಲು ಆಗಿಲ್ಲ.
ಈ ಸರ್ಕಾರಕ್ಕೆ ಗೌರವ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು. ಬಿಜೆಪಿಯಲ್ಲಿ ಎಷ್ಟೇ ಮುಖ್ಯಮಂತ್ರಿ ಬದಲಾವಣೆ ಆದರೂ ಅವರ ಪಕ್ಷದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.