
ದಾವಣಗೆರೆ (ಅ.09): ಎಸ್ಟಿಗೆ ಕುರುಬ ಸಮುದಾಯ ಸೇರ್ಪಡೆಗೆ ಸಿಎಂ ಕೂಡ ಎಸ್ಟಿ ಸಮಾಜದ ತಟ್ಟೆಗೆ ಕೈ ಹಾಕುವುದಿಲ್ಲ ಎಂದು ಹೇಳಿದ್ದಾರೆ. ಮೀಸಲಾತಿ ಯಾರ ಅಪ್ಪನ ಸ್ವತ್ತೂ ಅಲ್ಲ, 341,342 ಸೆಕ್ಷನ್ ಅಡಿಯಲ್ಲಿ ಬರುವವರು ಎಸ್ಸಿ, ಎಸ್ಟಿ ಆಗಲು ಅವಕಾಶ ಇದೆ. ಬುಡಕಟ್ಟಿನ ಯಾವ ಲಕ್ಷಣವಿಲ್ಲದ, ಎಸ್ಸಿ ಗುಣ ಇಲ್ಲದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಹೇಗೆ ಸಾಧ್ಯ ಎಂದು ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ನಮ್ಮ ಆಸ್ತಿಯಲ್ಲ. ಎಸ್ಟಿ ಸೇರ್ಪಡೆ ಮುನ್ನ ಕುಲಶಾಸ್ತ್ರ ಅಧ್ಯಯನ ಆಗಬೇಕು. ಎಸ್ಟಿಗೆ ಬರುವುದಾದರೆ ಸದ್ಯದ ಮೀಸಲಾತಿ ಸಮೇತ ಬರಬೇಕು.
ಇಲ್ಲವೇ ಈಗೀರುವ ಮೀಸಲಾತಿ ಹೆಚ್ಚಿಸಬೇಕು. ಇಲ್ಲಿಗೆ ಬರಬೇಕಾದರೆ ಅವರು ಹೊಂದಿರುವ ಒಬಿಸಿ ಮೀಸಲಾತಿ ಎಸ್ಟಿಗೆ ನೀಡಬೇಕು. ಆ ರೀತಿ ಇದ್ದರೆ ಮಾತ್ರ ಸಮ್ಮತಿ ಇದೆ ಎಂದರು. ರಾಷ್ಟ್ರಮಟ್ಟದಲ್ಲಿ ವಾಲ್ಮೀಕಿ ಸಮಾಜಕ್ಕೆ ಮಾನ್ಯತೆ ಸಿಗುತ್ತಿಲ್ಲ. ಪ್ರಧಾನಿ ಬಳಿ ರಾಮನ ಆದರ್ಶ ಇದ್ದರೆ ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಹಣದ ಅಲೋಕೇಷನ್ ಮಾಡಬೇಕು ಎಂದು ಕೇಂದ್ರದವರು ಎಸ್ಸಿ, ಎಸ್ಟಿ ಬಗ್ಗೆ ಕೇವಲ ಮೊಸಳೆ ಕಣ್ಣೀರು ಹಾಕುತ್ತಾರೆ. ವಾಲ್ಮೀಕಿ ಬಗ್ಗೆ ಬದ್ದತೆ ಇದ್ದರೆ, ಸಂಸತ್ ಭವನದ ಮುಂದೆ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಿಸಬೇಕು. ದೇಶದ ಯಾವುದಾದರೂ ಒಂದು ರೈಲಿಗೆ ವಾಲ್ಮೀಕಿ ಹೆಸರು ಇಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ವಾಲ್ಮೀಕಿ ಸಮಾಜವನ್ನು ಎಸ್.ಸಿ., ಎಸ್.ಟಿ.ಗೆ ಸೇರಲು ಕೇವಲ ಮೊಸಳೆ ಕಣ್ಣೀರು ಹಾಕುತ್ತದೆ. ವಾಲ್ಮೀಕಿ ಸಮಾಜಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ವಾಲ್ಮೀಕಿ ಬಗ್ಗೆ ಬದ್ಧತೆ ಇದ್ದರೆ ಸಂಸತ್ ಭವನ ಮುಂದೆ ಮಹರ್ಷಿ ವಾಲ್ಮೀಕಿ ಶ್ರೀಗಳ ಪುತ್ಥಳಿ ನಿರ್ಮಿಸಲಿ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳಿಗೆ ರಾಮನ ಆದರ್ಶ ಇದ್ದರೆ ಕೂಡಲೇ ವಾಲ್ಮೀಕಿ ಜನಸಂಖ್ಯೆಗೆ ಅನುಗುಣವಾಗಿ ಹಣದ ಅಲೋಕೇಷನ್ ಮಾಡಲಿ. ಜೊತೆಗೆ ದೇಶದ ಯಾವುದಾದರೂ ಒಂದು ರೈಲಿಗೆ ವಾಲ್ಮೀಕಿ ಹೆಸರು ಇಡಲಿ ಎಂದು ಆಗ್ರಹಿಸಿದರು.
ಮೀಸಲಾತಿ ಯಾರಪ್ಪನ ಸ್ವತ್ತಲ್ಲ. 341, 342 ಸೆಕ್ಷನ್ ಅಡಿಯಲ್ಲಿ ಬರುವವರು ಎಸ್ಸಿ, ಎಸ್ಟಿ ಆಗಲು ಅವಕಾಶ ಇದೆ. ಆದರೆ, ಬುಡಕಟ್ಟಿನ ಯಾವ ಲಕ್ಷಣ ಇಲ್ಲದ, ಎಸ್.ಸಿ. ಗುಣ ಇಲ್ಲದ ಕುರುಬರನ್ನು ಹೇಗೆ ಎಸ್.ಟಿ.ಗೆ ಸೇರಿಸಲು ಸಾಧ್ಯ ಎಂದು ಮಾಜಿ ಸಂಸದ ಉಗ್ರಪ್ಪ ಪ್ರಸ್ನಿಸಿದರು. ಎಸ್‌ಟಿ ಸೇರ್ಪಡೆ ಮುನ್ನ ಕುಲಶಾಸ್ತ್ರ ಅಧ್ಯಯನ ಆಗಬೇಕು. ಎಸ್ಟಿಗೆ ಬರುವುದಾದರೆ ಸದ್ಯದ ಮೀಸಲಾತಿ ಸಮೇತ ಬರಬೇಕು. ಇಲ್ಲವೇ ಈಗೀರುವ ಮೀಸಲಾತಿ ಹೆಚ್ಚಿಸಬೇಕು. ಇಲ್ಲಿಗೆ ಬರಬೇಕಾದರೆ ಅವರು ಹೊಂದಿರುವ ಒಬಿಸಿ ಮೀಸಲಾತಿ ಎಸ್ಟಿಗೆ ನೀಡಬೇಕು. ಆ ರೀತಿ ಇದ್ರೆ ಮಾತ್ರ ಸಮ್ಮತಿ. ಇದೇನು ಇಲ್ಲದೇ ನಮ್ಮ ತಟ್ಟೆಗೆ ಕೈ ಹಾಕಿದರೆ ನಾನು ಸುಮ್ಮನೆ ಇರಲ್ಲ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.