
ಪ್ರಕೃತಿನಗರ, ಸೇಡಂ(ಫೆ.05): ಸನಾತನ ಧರ್ಮಕ್ಕೆ ಭಾರತೀಯ ಸಂಸ್ಕೃತಿಗೆ ಅಪ ಮಾನ ಮಾಡಲು ವಿಕೃತ ಶಕ್ತಿಗಳು ವಿಕೃತಿ ಎಸಗುತ್ತಿ ರುವುದು ಅಪಾಯಕಾರಿ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆತಂಕ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪ್ರಕೃತಿ ಮತ್ತು ನಾವು ಸಮಾವೇಶದಲ್ಲಿ ಮಾತನಾಡಿ, ವಿಕೃತ ಮನಸ್ಸು ಗಳು ಗೋವುಗಳ ಕೆಚ್ಚಲು ಕೊಯ್ಯುವುದು, ಗರ್ಭಧರಿಸಿದ ಗೋವುಗಳ ತಲೆ ಕಡಿಯುವುದು, ಕುಂಭಮೇಳಕ್ಕೆ ಅಪಮಾನ ಮಾಡುವ ಹೀನ ಕೃತ್ಯಗಳನ್ನು ಮಾಡಿ ಸನಾತನ ಸಂಪ್ರದಾಯ, ಭಾರತೀಯ ಸಂಸ್ಕೃತಿಯನ್ನು ಬುಡಮೇಲು ಮಾಡಲು ಹವಣಿಸುತ್ತಿ ರುವುದು ಖೇದಕರ. ಇಂತಹ ಉತ್ಸವಗಳಲ್ಲಿ ಸೇರಿದ ಜನ, ದೇಶ ಪ್ರೀತಿ ಮತ್ತು ನಿಸರ್ಗ ಪ್ರೀತಿಯನ್ನು ಸಂಸ್ಕಾರ ಪ್ರೀತಿಯನ್ನು ಉಳಿಸಿಕೊಂಡವರಿಂದ ವಿಕೃತ ಶಕ್ತಿಗಳಿಗೆ ಮಣಿಯದೆ ಭಾರತೀಯ ಸಂಸ್ಕೃತಿ ಯನ್ನು ಉಳಿಸಲು ಸಾಧ್ಯವೆಂದರು.
ಹೈಕಮಾಂಡ್ ಮುಂದೆ ಅಪ್ಪ, ಮಗನ ಕರ್ಮಕಾಂಡ ಬಿಚ್ಚಿಡುತ್ತೇವೆ: ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದ ಯತ್ನಾಳ!
ನಿಸರ್ಗದ ಮೇಲಿನ ಅತ್ಯಾಚಾರ ನಿಲ್ಲಬೇಕಾದರೆ ಮನೆಯಿಂದಲೇ ಬದಲಾವಣೆಯನ್ನು ತರಬೇಕಾ ಗಿದೆ. ನಿಸರ್ಗ ಪ್ರೀತಿ ಮಾಡಿದಾಗ ಭಾರತೀಯ ಸಂಸ್ಕೃತಿ ಉತ್ಸವದ ಆಶಯ ಈಡೇರುತ್ತದೆ. ಫಲಾ ಪೇಕ್ಷೆ ಇಲ್ಲದೆ ಯಾವುದೇ ರಾಜಕೀಯ ಸ್ನಾನ ಮಾನಗಳಿಗೆ ಆಸೆಪಡದೆ ಮಾಡುವ ಉತ್ಸವದ ಸಂಘ ಟಕರಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದರು.
ದೇಶದ ಸನಾತನ ಸಂಸ್ಕೃತಿ ಹಾಗೂ ನಮ್ಮತನ ಉಳಿಸುವ ಈ ಮಹಾಯಜ್ಞದಲ್ಲಿ ಯಾವುದೇ ರೀತಿಯ ನಿರೀಕ್ಷೆಯಿಲ್ಲದೆ ಬಿಜೆಪಿಯ ಜ್ಞಾನ ಕಂಪ್ಯೂಟರ್ ಕೆ.ಎನ್ ಗೋವಿಂದಾಚಾರ್ಯ ಹಾಗೂ ನನ್ನ ರಾಜಕೀಯ ಗುರು ಬಸವರಾಜ ಪಾಟೀಲ್ ಸೇಡಂ ಪ್ರಾಮಾಣಿಕವಾಗಿ ದುಡಿಯುತ್ತಿದ್ದರೂಇಂತಹ ಉತ್ಸವಗಳಿಗೆ ತಡೆಯೊಡ್ಡುವ ನಾಚಿಕೆಗೇಡಿನ ಕೆಲಸ ಮಾಡುವುದರಿಂದ ಇದು ಭಾರತೀಯ ಸಂಸ್ಕೃತಿಗೆ ಮಾಡುವ ಅಪಚಾರ ಎಂದು ಗುಡುಗಿದರು.
ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ತೆರೆದು ರೈತರಿಗೆ ಮತ್ತು ಪ್ರಕೃತಿಗೆ ಪೂರಕವಾದ ಕೆಲಸ ಕಾರ್ಯ ಮಾಡಿದಾಗ ಅದನ್ನು ಪರಿಸರದ ನೆಪದಲ್ಲಿ ಅಡ್ಡಿಪಡಿಸಲಾಯಿತು ಮಾತ್ರವಲ್ಲ ಮುಚ್ಚುವಂತೆ ಆದೇಶ ನೀಡಲಾಯಿತು. ಫ್ಯಾಕ್ಟರಿ ಪ್ರದೇಶದಲ್ಲಿ ಗಿಡ ನೆಡಲಿಲ್ಲ ಎಂಬ ಕಾರಣವೊಡ್ಡಿ ಮುಚ್ಚುವಂತೆ ಪರಿಸರ ಇಲಾಖೆಯು ಆದೇಶ ನೀಡಿತ್ತಾದರೂ ಕೋರ್ಟ್‌ನಲ್ಲಿ ನಮಗೇ ನ್ಯಾಯ ಸಿಕ್ಕಿದೆ ಎಂದರು.
ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿ: ಪರಿಸರ ನಾಶಕ್ಕೆ ಪ್ಲಾಸ್ಟಿಕ್ ಮಾರಕವಾಗಿದ್ದು ಅದನ್ನು ತಡೆಯಲು ನಾವೆಲ್ಲರೂ ಸಿದ್ದರಾಗಬೇಕಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಕಿ, ನೀರಾವರಿ ಕಾಲುವೆಗಳನ್ನು ತ್ಯಾಜ್ಯಗಳಿಂದ ಮಲೀನಗೊಳಿಸಿ ಪರಿಸರಕ್ಕೆ ದೊಡ್ಡ ಹಾನಿ ಮಾಡುತ್ತಿರುವುದು ಕಂಡು ಬರುತ್ತದೆ. ಈ ಬಗ್ಗೆ ಎಚ್ಚರಗೊಳ್ಳದಿದ್ದರೆ ಭವಿಷ್ಯದಲ್ಲಿ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆಂದರು.
ಅಂಚೆ ಲಕೋಟೆ ಬಿಡುಗಡೆ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಸುವರ್ಣ ಮಹೋ ತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಅಂಚೆ ಇಲಾ ಖೆಯು ಬಿಡುಗಡೆ ಮಾಡಿದ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
'ರಾಮಕಥಾ ವಿಸ್ಮಯ'ನೃತ್ಯ ರೂಪಕ ಇಂದು
ಇಂದು ಬೆಳಿಗ್ಗೆ 9ಕ್ಕೆ ಮಂಗಳವಾದ್ಯ 10.15ಕ್ಕೆ ವಿದ್ಯಾರ್ಥಿಗಳಿಂದ ಸಮೂಹ ಗಾಯನ, 10.25ಕ್ಕೆ ಬಳ್ಳಾರಿಯ ಶ್ರೀ ಲಕ್ಷ್ಮಿ ಕಲಾ ಟ್ರಸ್ಟ್ ಕಲಾವಿದರಿಂದ ಶಾಸ್ತ್ರೀಯ ನೃತ್ಯ, 10.30ಕ್ಕೆ 'ಸೇವಾ ಶಕ್ತಿ' ಸಮಾವೇಶ ಬಹುಜನ ಹಿತಾಯ ಬಹುಜನ ಸುಖಾಯ ಆಶಯದ ಉದ್ಘಾಟನಾ ಸಮಾರಂಭ, ಮಧ್ಯಾಹ್ನ 3ಕ್ಕೆ ದಿಶಾ ನಿರ್ದೇಶನ ಸಾಯಂಕಾಲ 5.30ಕ್ಕೆ ರಾಷ್ಟ್ರೀಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ. ಭಾರತೀಯ ಸಂಸ್ಕೃತಿ ಉತ್ಸವ ದಲ್ಲಿ ಸಂಜೆ 7.30ಕ್ಕೆ ಬೆಂಗಳೂರಿನ ಅಭಿನವ ನೃತ್ಯ ಕಂಪನಿ ಹಾಗೂ ತಂಡದ ನಿರ್ದೇಶಕ ನಿರೂಪಮಾ ರಾಜೇಂದ್ರ ಬಳಗದವರಿಂದ ರಾಮಕಥಾ ವಿಸ್ಮಯ ನೃತ್ಯ ರೂಪಕ ನಡೆಯಲಿದೆ. ಸಿದ್ದರಾಮಯ್ಯ ಜಂಬಲದಿನ್ನಿ ಸಭಾಮಂಟಪದಲ್ಲಿ ಸಂಜೆ 7ರಿಂದ 9ರವರೆಗೆ ವಿದೂಷಿ ಗೌರಿ ಪಠಾರೆ ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಎಲ್ಲ ಗೊಂದಲಗಳಿಗೂ ವಾರದಲ್ಲಿ ತೆರೆ, ಪಕ್ಷಕ್ಕೆ ಎಷ್ಟು ಡ್ಯಾಮೇಜ್ ಆಗಬೇಕೋ ಅಷ್ಟೂ ಆಗಿದೆ: ವಿಜಯೇಂದ್ರ
ನಮ್ಮಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ, ನಾವೇ ಆಶಾಕಿರಣ: ಯತ್ನಾಳ್
ಕಲಬುರಗಿ: ಬಿಜೆಪಿಗೆ ನಮ್ಮಿಂದ ಡ್ಯಾಮೇಜ್ ಆಗಿಲ್ಲ. ಯತ್ನಾಳ್‌ರಿಂದಾಗಿಯೇ ಬಿಜೆಪಿ ಕಾರ್ಯಕರ್ತರು ಜೀವಂತವಾಗಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ದ ತೊಡೆತಟ್ಟಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಇಲ್ಲಿ ಭಾರೀ ಟೀಕಾಪ್ರಹಾರ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯತ್ನಾಳ್‌ರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿರುವ ಹೇಳಿ ಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು. ಹಾಗೆ ನೋಡಿದರೆ ನಮ್ಮ ಪಕ್ಷಕ್ಕೆ ನಾವೇ ಆಶಾಕಿರಣ ಎಂದು ಸಮರ್ಥಿಸಿಕೊಂ ಡರು. ಚುನಾವಣೆ ನಡೆದು ವಿಜಯೇಂದ್ರ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾದ್ರೆ ಆಗ್ಲಿ ಯಾತ್ನಾಳ್ ರಾಜ್ಯಾಧ್ಯಕ್ಷರಾ ಗಲಿ ಅನ್ನೋರೂ ಅನೇಕರು ಪಕ್ಷದಲ್ಲಿ ಇದ್ದಾರೆ. ನಾನೂ ದಶಕಗಳಿಂದ ರಾಜಕೀಯದ ಲ್ಲಿದ್ದೇನೆ. ಯಡಿಯೂಪ್ಪನವರ ಸಮಕಾ ಲೀನ. ಒಂದು ವೇಳೆ ವಿಜಯೇಂದ್ರ ಅವರನ್ನೇ ಮತ್ತೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ನಮ್ಮ ಬಣದ ನಿರ್ಣಯ ಆಗ ತಿಳಿಸುತ್ತೇವೆ ಎಂದು ಎಚ್ಚರಿಸಿ, ಹೋರಾಟವಂತೂ ಮುಂದುವರಿಯುತ್ತೆದೆ ಎಂದು ಯಾತ್ನಾಳ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.