ಮಂಗಳೂರು ಗಲಭೆ ಪ್ರಕರಣದ 35 ವಿಡಿಯೋಗಳನ್ನು ಬಿಡಿಗಡೆಗೊಳಿಸಿ ಪೊಲೀಸರ ಮೇಲೆ ಗೂಬೆ ಕೂರಿಸಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಮನಸೋ ಇಚ್ಛೆ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ, [ಜ.12]: ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು ಅವರಿಗೆ ಹೇಗೆ ವಿಡಿಯೋ ಎಡಿಟ್ ಮಾಡೋದು, ಕಟ್ ಆಂಡ್ ಪೇಸ್ಟ್ ಮಾಡೋದು ಚೆನ್ನಾಗಿ ಗೊತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
ಮಂಗಳೂರು ಗೋಲಿಬಾರ್ ವಿಡಿಯೋಗಳನ್ನು ರಿಲೀಸ್ ಮಾಡಿರುವ ಕುಮಾರಸ್ವಾಮಿ ಬಗ್ಗೆ ಇಂದು [ಭಾನುವಾರ] ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಯತ್ನಾಳ್, ಕುಮಾರಸ್ವಾಮಿ ಏನು ಹರಿಶ್ಚಂದ್ರನ 16ನೇ ಸಂತತಿ ಅಲ್ಲ. ನಿಮ್ಮ ಮನೆಯಲ್ಲಿ ಏನಿದೆ ಅದನ್ನ ನೋಡಿಕೊಳ್ಳಿ. ಬಿಜೆಪಿಯವರದ್ದು ಏನು ಬದನೆಕಾಯಿ ನೋಡ್ತೀರಾ? ಎಂದು ಕುಮಾರಸ್ವಾಮಿ ವಿರುದ್ಧ ಮನಸೋ ಇಚ್ಛೆ ವಾಗ್ದಾಳಿ ನಡೆಸಿದರು.
'ಎಲ್ಲ CDಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ'
ಯಾವುದೋ ಗಲಭೆಯದ್ದು ತಂದು ಇಲ್ಲಿ ಜೋಡಿಸೋದು. ಹಾಡಿನ ಮಧ್ಯೆ ಸೇರಿಸೋದು ಗೊತ್ತಿರದ್ದವರು ಹೀಗೆ ಮಾಡ್ತಾರೆ. ಕುಮಾರಸ್ವಾಮಿಯದ್ದು ನಾಟಕ ಕಂಪನಿ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡ್ತೀನಿ ಎಂದು ಬೇಕಾಬಿಟ್ಟಿ ಬ್ಲಾಕ್ ಮೇಲ್ ತಂತ್ರ ಮಾಡ್ತಿದ್ದಾರೆ. ಅವರ ಸಿಡಿ ಬಿಡುಗಡೆ ಮಾಡ್ತೀನಿ, ಇವ್ರ ಸಿಡಿ ಬಿಡುಗಡೆ ಮಾಡ್ತೀನಿ ಅಂತಾರೇ. ಕುಮಾರಸ್ವಾಮಿ ಸಿಡಿ, ವಿಡಿಯೋಗಳು ಬಹಳ ಇವೆ ಎಂದು ಟಾಂಗ್ ಕೊಟ್ಟರು.
ಮಂಗಳೂರು ಗಲಭೆ ಹೊಸ ವಿಡಿಯೋ: ಸುವರ್ಣ ನ್ಯೂಸ್ ಜತೆ ಕುಮಾರಸ್ವಾಮಿ ಮಾತು
ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಬೇರೆಯವರ ತಟ್ಟೆಯಲ್ಲಿನ ನೋಣ ನೋಡ್ತಿದ್ದಾರೆ. ಇದು ಹತಾಶೆ ಮನೋಭಾವದ ಪರಮಾವಧಿ ಎಂದು ಕಿಡಿಕಾರಿದರು.