
ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದ ಫೋಟೋ ಶೂಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರೂ, ಸ್ಪೀಕರ್ ಯು.ಟಿ. ಖಾದರ್ ನೀಡಿದ ಸ್ಪಷ್ಟನೆ ಈ ಗೊಂದಲಗಳಿಗೆ ಭಾಗಶಃ ತೆರೆ ಎಳೆದಿದೆ. ಆದರೆ ಯಾವುದಾದರು ಒಂದು ಭಾಗದಲ್ಲಿ ಬದಲಾವಣೆ ಆಗುವುದಂತೂ ಖಚಿತವಾದಂತಿದೆ.
ಬೆಳಿಗ್ಗೆ ವಿಧಾನಸೌಧದ ಮುಂಭಾಗದಲ್ಲಿ ಶಾಸಕರೊಂದಿಗೆ ಫೋಟೋ ಸೆಷನ್ ನಡೆದಿದ್ದು, ನಂತರ ಮಧ್ಯಾಹ್ನದ ಬಿಡುವಿನ ವೇಳೆ ವಿಧಾನಸೌಧದ ಮೊಗಸಾಲೆಯಲ್ಲಿ ನಡೆದು ಹೋಗುತ್ತಿದ್ದ ಸ್ಪೀಕರ್ ಖಾದರ್ ಅವರನ್ನು ಸುತ್ತುವರಿದ ಸಿಬ್ಬಂದಿ ಅವರೊಂದಿಗೆ ಫೋಟೋ ಹಾಗೂ ಸೆಲ್ಫಿಗಳನ್ನು ತೆಗೆದುಕೊಂಡರು. ಈ ದೃಶ್ಯಗಳು ಕಂಡುಬಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆ ಆಗಲಿದೆಯೇ ಎಂಬ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಸೇರಿಕೊಂಡಿದೆ.
“ಇದು ಯಾವುದಾದರೂ ಬದಲಾವಣೆಯ ಮುನ್ಸೂಚನೆಯೇ?” ಎಂಬ ಪ್ರಶ್ನೆಗೆ ಸ್ಪೀಕರ್ ಖಾದರ್ ನಗುತ್ತಲೇ ಪ್ರತಿಕ್ರಿಯಿಸಿದರು. “ಹಾಗೇನಿಲ್ಲಪ್ಪಾ,” ಎಂದು ಸರಳವಾಗಿ ಉತ್ತರಿಸಿ, ಈ ಫೋಟೋ ಶೂಟ್‌ಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ ಎಂಬಂತೆ ಮುಂದಕ್ಕೆ ಹೋದರು.
ಬಳಿಕ ಸ್ವೀಕರ್ ಪರಿಷತ್ತಿನ ಕೆಲವು ಸದಸ್ಯರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಅವರೊಂದಿಗೆ ನೆನಪಿಗಾಗಿ ಫೋಟೋ ಶೂಟ್ ಆಯೋಜಿಸಲಾಗಿತ್ತು. ಅದೇ ಸಂದರ್ಭದಲ್ಲಿ, ವಿಧಾನಸಭೆಯ ಸದಸ್ಯರ ಜೊತೆಯೂ ಒಂದು ಫೋಟೋ ಸೆಷನ್ ನಡೆಸೋಣ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಿತು ಎಂದು ತಿಳಿಸಿದ್ದಾರೆ.
ಸ್ಪೀಕರ್ ಸ್ಪಷ್ಟನೆ ನೀಡಿದರೂ, ವಿಧಾನಸೌಧದ ಪಡಸಾಲೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು ಇನ್ನೂ ಮುಂದುವರಿದಿವೆ. ಮೊದಲಿನಿಂದಲೇ ಸಿಎಂ ಬದಲಾವಣೆ, ಸಂಪುಟ ಪುನರ್‌ರಚನೆ ಅಥವಾ ಸ್ಪೀಕರ್ ಬದಲಾವಣೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಫೋಟೋ ಶೂಟ್ ಇನ್ನಷ್ಟು ಕುತೂಹಲ ಹುಟ್ಟಿಸಿತ್ತು.
ಒಟ್ಟಾರೆ, ಫೋಟೋ ಶೂಟ್ ಕುರಿತಾಗಿ ಹರಿದಾಡುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ಸ್ಪೀಕರ್ ಖಾದರ್ ನೀಡಿದ ಸ್ಪಷ್ಟನೆ ತಾತ್ಕಾಲಿಕ ತೆರೆ ಎಳೆದಂತಾಗಿದೆ. ಆದಾಗ್ಯೂ, ವಿಧಾನಸೌಧದ ಒಳಗಡೆ ಈ ವಿಚಾರ ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.