
ಬೆಂಗಳೂರು (ಏ.13): ಜಾಗತಿಕ ಮಟ್ಟದಲ್ಲಿ ಅಡಾಲ್ಫ್ ಹಿಟ್ಲರ್, ಸದ್ದಾಮ್ ಹುಸೇನ್ ಮೈನಾರಿಟಿ ಕಮ್ಯುನಿಟಿ ಮೇಲೆ ದೌರ್ಬಲ್ಯ ಮಾಡ್ತಿದ್ದರು. ಜನರನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಆಯುಧವೆಂದರೆ ಧಾರ್ಮಿಕ ವಿಚಾರವಾಗಿದೆ. ಭಾರತದಲ್ಲಿ ಕೂಡ ಮೋದಿ ಅದನ್ನ ಮಾಡ್ತಿದ್ದಾರೆ. ಆದರೆ, ಮೈನಾರಿಟಿ ದಮನ ಮಾಡುವುದು ಎಂದರೆ ಪ್ರಜಾಪ್ರಭುತ್ವ ದಮನ ಮಾಡಿದಂತೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಟ್ಲರ್, ಸದ್ದಾಮ್ ಹುಸೇನ್ ಮೈನಾರಿಟಿ ಕಮ್ಯುನಿಟಿ ಮೇಲೆ ದೌರ್ಬಲ್ಯ ಮಾಡುತ್ತಿದ್ದರು. ಸದ್ದಾಮ್ ಎಷ್ಟು ದೈವಭಕ್ತ ಅಂದ್ರೆ ದೊಡ್ಡ ದೊಡ್ಡ ಮಸೀದಿ ಕಟ್ಟುತ್ತಿದ್ದನು. ಜನರನ್ನ ತಮ್ಮ ಹತ್ತಿರ ಇಟ್ಟುಕೊಳ್ಳುವ ಆಯುಧ ಅಂದ್ರೆ ಧಾರ್ಮಿಕ ವಿಚಾರಗಳ ಪ್ರಚೋದನೆಯಾಗಿದೆ. ಜನರನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಆಯುಧ ಅಂದ್ರೆ ಧಾರ್ಮಿಕ ವಿಚಾರವಾಗಿದೆ. ಇಲ್ಲಿ ಕೂಡ ಮೋದಿ ಅದನ್ನ ಮಾಡ್ತಿದ್ದಾರೆ. ರಾಮ ಮಂದಿರ ಕೂಡ ಅದೇ ರೀತಿ ಕಟ್ಟಿದ್ದು. ಇನ್ನು ಪೂರ್ಣವಾಗಿ ರಾಮ ಮಂದಿರ ಕಟ್ಟಿಲ್ಲ. ಆದರೆ, ಅಲ್ಪಸಂಖ್ಯಾತರನ್ನು (ಮೈನಾರಿಟಿ) ದಮನ ಮಾಡುವುದು ಅಂದ್ರೆ ಪ್ರಜಾಪ್ರಭುತ್ವ ದಮನ ಮಾಡಿದಂತೆ ಎಂದು ತಿಳಿಸಿದ್ದಾರೆ.
'ಡಿಕೆಶಿ ಬ್ರದರ್ಸ್ ಮಮತಾ ಸಿಸ್ಟರ್ ಊರಲ್ಲಿ ಸಿಕ್ಕಿಬಿದ್ದಿದ್ದಾರೆ..' ಆರ್.ಅಶೋಕ್ ಟೀಕೆ
ದೇಶದಲ್ಲಿ ಭೇಟಿ ಬಚಾವೋ ಬೇಟಿ ಪಡಾವೋ ದೇಶದಲ್ಲಿ ಎಲ್ಲಿದೆ? ದೊಡ್ಡ ದೊಡ್ಡವರು ಮತ್ತು ರಾಜಕಾರಣಿಗಳು ಅತ್ಯಾಚಾರ ಮಾಡಿದ್ರು ಹೊರ ಬರುವುದಿಲ್ಲ ಅಲ್ವಾ? ದೊಡ್ಡ ದೊಡ್ಡವರು ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ್ರು ಹೊರಗಡೆ ಬರಲ್ಲ. ಆ ಸಂಧರ್ಭದಲ್ಲಿ ದೊಡ್ಡ ದೊಡ್ಡವರು ರಾಜಕಾರಣಿಗಳು ಒಟ್ಟಾಗುತ್ತಾರೆ ಅಲ್ವಾ? ನೀವು ನಾವು ಸೇರುತ್ತೇವೆ ಅದರಲ್ಲಿ. ಸತ್ಯ ಯಾರು ಹುಡುಕುವುದಿಲ್ಲ. ಅಂತಹ ಕೇಸ್ ಗಳೇ ವಿಚಾರಣೆ ಆಗದಿದ್ರೆ ಬೇರೆವು ಏನ್ ಆಗ್ತಾವೆ.? ಜಂಡರ್ ಸಮ ಅನ್ನುವುದು ಎಲ್ಲಿ ಬರುತ್ತೆ.? ದೇಶದಲ್ಲಿ ಕ್ರೈಮ್ ಕೇಸ್ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಮೋದಿ ಒಬ್ಬ ಪಿಆರ್ ಇದ್ದಂತೆ; ರಾಮಮಂದಿರ ನಿರ್ಮಾಣ ಎಲ್ಲೆಡೆ ಹೇಳ್ಕೊಂಡು ಬರ್ತಾರೆ: ಪ್ರಧಾನಿ ಮೋದಿ ಒಬ್ಬ ದೊಡ್ಡ PR ಇದ್ದಂತೆ. ಜಾತ್ಯಾತೀತ ದೇಶದಲ್ಲಿ ದೇವಸ್ಥಾನ ಕಟ್ಟಿದೆ, ದಾನ ಮಾಡಿದೆ ಅಂತಾ ಹೇಳಬಾರದು. ನಮ್ಮ ಊರಿನಲ್ಲೂ ದೇವಸ್ಥಾನ ಕಟ್ಟಿದ್ದೇವೆ. ನಮ್ಮ ಊರಿನಲ್ಲಿ ನಾವು ರಾಮಮಂದಿರ ಕಟ್ಟಿದ್ದೇವೆ. ರಾಮಾಯಣ ಮಹಾನ್ವೇಷಣಂ ಬರೆದವನು ನಾನು. ನಮ್ಮದು ಸೆಕ್ಯೂಲರ್ ಕಂಟ್ರಿಯಾಗಿದೆ. ನಾವು ಮಂದಿರ ಕಟ್ಟಿದ್ದೇವೆ ಅಂತ ರಾಜಕಾರಣ ಮಾಡಬಾರದು. ಅದರಿಂದ ಕ್ರೆಡಿಟ್ ಬರುತ್ತೆ ಅಂತ ಅವರು ಹೇಳಿಕೊಳ್ಳಲಿ. ನಮಗೇನೋ ತೊಂದರೆಯಿಲ್ಲ ಆದರೆ ರಾಜಧರ್ಮ ಅವರು ಪಾಲಿಸಿಲ್ಲ. ಹಾಗಾಗಿ ಜನರೇ ಅದರ ಬಗ್ಗೆ ನೋಡಿಕೊಳ್ತಾರೆ.
ಚುನಾವಣೆ ಬಳಿಕ ಬಿಜೆಪಿ ಜೊತೆ ಜೆಡಿಎಸ್ ವಿಲೀನ: ಡಿ.ಕೆ.ಶಿವಕುಮಾರ್
ದೇವೇಗೌಡರ ವಿರುದ್ಧವೂ ವಾಗ್ದಾಳಿ ಮಾಡಿದ ಮೊಯ್ಲಿ: ನಾವು ವಾರ್ಷಿಕ 1 ಲಕ್ಷ ರೂ. ಹಣವನ್ನು ಬಡ ಮಹಿಳೆಯರಿಗೆ ಕೊಡ್ತೇವೆ. ಈಗ ಮೋದಿ ರಾಜ್ಯಕ್ಕೆ ಬರ್ತಿದ್ದಾರೆ. ಮೋದಿ ಪ್ರಧಾನಿಯಾದರೆ, ದೇಶ ಬಿಡ್ತೇನೆ ಅಂತ ಗೌಡರು ಹೇಳಿದ್ದರು. ಯಾವ ದೇಶಕ್ಕೆ ಹೋಗ್ಬೇಕು ಅಂತ ಹುಡುಕುತ್ತಲೇ ಇದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಅವರಿಗೆ ಒಂದು ಸಿಗುತ್ತೋ ಇಲ್ವೋ ಗೊತ್ತಿಲ್ಲ ಎನ್ನುತ್ತಲೇ ದೇವೇಗೌಡರ ವಿರುದ್ಧವೂ ಮೊಯ್ಲಿ ಲೇವಡಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.