ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ನಾನು ಚಿತ್ರಕತೆ ಬರೀತಿಲ್ಲ: ಅಶ್ವತ್ಥ್ ನಾರಾಯಣ ಸ್ಪಷ್ಟನೆ

By Kannadaprabha News  |  First Published Mar 20, 2023, 12:58 PM IST

ಸಚಿವ ಸಂಪುಟದ ಸಹೋದ್ಯೋಗಿ ಮುನಿರತ್ನ ಅವರು ನಿರ್ಮಿಸುತ್ತಿರುವ ‘ಉರಿಗೌಡ- ನಂಜೇಗೌಡ’ ಸಿನಿಮಾದಲ್ಲಿ ನನ್ನ ಪಾತ್ರವೇನೂ ಇಲ್ಲ. ಅದಕ್ಕೆ ನಾನು ಚಿತ್ರಕತೆ ಬರೆಯುತ್ತಿಲ್ಲ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.


ಬೆಂಗಳೂರು (ಮಾ.20) : ಸಚಿವ ಸಂಪುಟದ ಸಹೋದ್ಯೋಗಿ ಮುನಿರತ್ನ ಅವರು ನಿರ್ಮಿಸುತ್ತಿರುವ ‘ಉರಿಗೌಡ- ನಂಜೇಗೌಡ’ ಸಿನಿಮಾದಲ್ಲಿ ನನ್ನ ಪಾತ್ರವೇನೂ ಇಲ್ಲ. ಅದಕ್ಕೆ ನಾನು ಚಿತ್ರಕತೆ ಬರೆಯುತ್ತಿಲ್ಲ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(Dr CN Ashwath Narayan) ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಟಿಪ್ಪುವನ್ನು ಕೊಂದ ವೀರ ಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡ(Urigowda-Nanjegowda)ರ ಬಗ್ಗೆ ನನಗೆ ನೈಜ ಅಭಿಮಾನವಿದೆ. ಅವರ ಬಗ್ಗೆ ನಾನು ಇದುವರೆಗೂ ಆಡಿರುವ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ ನಾನು ಈ ಸಿನಿಮಾದ ಭಾಗವಾಗುತ್ತಿಲ್ಲ ಎಂದು ಹೇಳಿದ್ದಾರೆ.

Tap to resize

Latest Videos

ಉರಿಗೌಡ ಉಲ್ಲೇಖದ ಪುಸ್ತಕ ಬಿಡುಗಡೆ ಮಾಡಿದ್ದು ನಾವಲ್ಲ ದೇವೇಗೌಡರು: ಸಿಟಿ ರವಿ

ಸಚಿವ ಮುನಿರತ್ನ(Muniratna) ಅವರು ಉರಿಗೌಡ-ನಂಜೇಗೌಡ ಶೀರ್ಷಿಕೆಯಲ್ಲಿ ಸಿನಿಮಾ ನಿರ್ಮಿಸುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್‌ನಿಂದ ಈ ಸಿನಿಮಾ ಮಾಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ.

undefined

ಮೇ 18ರಂದು ಬೆಳಗ್ಗೆ 10 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಈ ಸಿನಿಮಾ ಚಿತ್ರೀಕರಣಕ್ಕೆ ಮುಹೂರ್ತ ನಡೆಯಲಿದೆ. ಆರ್‌.ಅಶೋಕ್‌-ಸಿ.ಟಿ.ರವಿ ಈ ಸಿನಿಮಾವನ್ನು ಅರ್ಪಿಸಲಿದ್ದಾರೆ. ಈ ಸಿನಿಮಾಗೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಚಿತ್ರಕಥೆ ಹಾಗೂ ಆರ್‌.ಎಸ್‌.ಗೌಡ ಅವರ ನಿರ್ದೇಶನ ಇರಲಿದೆ ಎಂದು ಜಾಹೀರಾತು ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಚಿವ ಅಶ್ವತ್ಥನಾರಾಯಣ ಅವರು ಈ ಸಿನಿಮಾಗೆ ನಾನು ಚಿತ್ರಕಥೆ ಬರೆಯುತ್ತಿಲ್ಲ. ನಾನು ಈ ಸಿನಿಮಾದ ಭಾಗವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ ಡಿಸಿ ಕಚೇರಿ ಎದುರು ನಿಂತು ಅಜಾನ್‌ ಕೂಗಿದ ಯುವಕ: ವಿಡಿಯೋ ವೈರಲ್‌

click me!