
ವಾರಣಾಸಿ, (ಜ.11) : ಬಾಲಕಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮಾಜಿ ಬಿಜೆಪಿ ಶಾಸಕನ ಹಿಗ್ಗಾಮುಗ್ಗಾ ಒದೆ ತಿಂದಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ಚಿರಾಗಾಂವ್‌ನ ಮಾಜಿ ಬಿಜೆಪಿ ಶಾಸಕ ಮಾಯಾ ಶಂಕರ್ ಪಠಕ್ ಅವರ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಪಠಕ್ ಅವರು ಇಲ್ಲಿನ ಎಂಪಿ ಗ್ರೂಪ್‌ಗೆ ಸೇರಿದ ಕಾಲೇಜೊಂದರಲ್ಲಿ ಮುಖ್ಯಸ್ಥರಾಗಿದ್ದು, ಇದೇ ಸಂಸ್ಥೆಯಲ್ಲಿ 9ನೇ ತರಗತಿ ಓದುತ್ತಿರುವ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆನ್ಲೈನ್ ಕ್ಲಾಸ್ ವೇಳೆ ಪ್ಲೇ ಆಯ್ತು ಸೆಕ್ಸ್ ವಿಡಿಯೋ:ನೋಡಿ ದಂಗಾದ ವಿದ್ಯಾರ್ಥಿನಿಯರು
ಈ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರು ನೇರವಾಗಿ ಮಾಜಿ ಶಾಸಕರ ಬಳಿ ಈ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಏಕಾಏಕಿ ಕುಟುಂಬದವರು ಮತ್ತು ಸ್ಥಳೀಯರು ಸೇರಿಕೊಂಡು ಥಳಿಸಿದ್ದಾರೆ. ನಂತರ ಮಾಯಾ ಶಂಕರ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.
ಈ ಪ್ರಕರಣದ ಕುರಿತಾಗಿ ಬಾಲಕಿಯ ಪೋಷಕರು ಪೊಲೀಸರ ಬಳಿ ದೂರು ದಾಖಲಿಸಿಲ್ಲ. ಹಲ್ಲೆ ಕುರಿತಾಗಿಯೂ ಮಾಜಿ ಶಾಸಕರೂ ಕೂಡಾ ಯಾವುದೇ ದೂರು ದಾಖಲಿಸಿಲ್ಲ. ಇದೀಗ ವಿಡಿಯೋ ಆಧಾರದ ಮೇಲೆ ಪೊಲೀಸರೇ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿಸುರವ ಮಾಯಾ ಶಂಕರ್ ಪಠಕ್, ಈ ಕೃತ್ಯದ ಹಿಂದೆ ರಾಜಕೀಯ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ಧಾರೆ. ಬಾಲಕಿಗೆ ಬೈದು ಮನೆಗೆ ಕಳಿಸಲಾಗಿತ್ತು. ಆದ್ರೆ, ಪ್ರಕರಣವನ್ನು ಇದೀಗ ಸಂಪೂರ್ಣವಾಗಿ ತಿರುಚಲಾಗಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.