ಇನ್ನು 3 ತಿಂಗಳು ತಡ್ಕೊಳ್ಳಿ, ಸರ್ಕಾರದ ಬಗ್ಗೆ ತಿಳಿಯುತ್ತೆ: ಕೇಂದ್ರ ಸಚಿವ ವಿ.ಸೋಮಣ್ಣ

By Kannadaprabha News  |  First Published Jan 15, 2025, 6:38 PM IST

ಇನ್ನು 3 ತಿಂಗಳು ತಡ್ಕೊಳ್ರಯ್ಯೋ, ಸರ್ಕಾರದ ಬಗ್ಗೆ ನಿಮಗೆ ತಿಳಿಯುತ್ತೆ. ನಾವೇನು ಹೇಳಬೇಕಾಗಿಲ್ಲ, ಜನಾನೇ ಸರ್ಕಾರದ ಬಗ್ಗೆ ಹೇಳ್ತಿದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.


ಬಾಗಲಕೋಟೆ (ಜ.15): ಇನ್ನು 3 ತಿಂಗಳು ತಡ್ಕೊಳ್ರಯ್ಯೋ, ಸರ್ಕಾರದ ಬಗ್ಗೆ ನಿಮಗೆ ತಿಳಿಯುತ್ತೆ. ನಾವೇನು ಹೇಳಬೇಕಾಗಿಲ್ಲ, ಜನಾನೇ ಸರ್ಕಾರದ ಬಗ್ಗೆ ಹೇಳ್ತಿದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಜಿಲ್ಲೆಯ ಖಜ್ಜಿಡೋಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಹೇಳಬೇಕಾಗಿಲ್ಲ. ಜನಾನೇ ಸರ್ಕಾರದ ಬಗ್ಗೆ ಹೇಳುತ್ತಿದಾರೆ ಎಂದ ಅವರು, ಹಾಗಾದ್ರೆ ಮೂರು ತಿಂಗಳ ನಂತರ ಸರ್ಕಾರ ಇರಲ್ಲ ಅಂತಾನಾ ಅರ್ಥ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಆ ರೀತಿ ಹೇಳಿಲ್ಲ. ನಾನು ಮೂರು ತಿಂಗಳು ನೋಡ್ರಿ ಅಂದಷ್ಟೇ ಹೇಳಿದೆ ಎಂದು ಸ್ಪಷ್ಟನೆ ನೀಡಿದರು.

ನಾನು ಬೇರೆಯವರ ಹಾಗೇ ಮಾತನಾಡಲ್ಲ. ಯಾಕೆ ಹೇಳ್ತೀನಿ ಅಂದ್ರೆ ಒಂದು ರೀತಿ ಅಸಹ್ಯ, ಅಲರ್ಜಿ, ಬೇಸರ ಈ ಸರ್ಕಾರದ ಬಗ್ಗೆ ಬಂದಿದೆ. ನಮ್ಮ ಸರ್ಕಾರ ಈಗಿನ ಸರ್ಕಾರ ನೋಡಿದರೆ, ಮೋದಿ ಅವರ ಕಾರ್ಯವೈಖರಿ, ದೇಶದ ಬಗ್ಗೆ ಇರುವ ಕಾಳಜಿ ಒಂದು ಪರ್ಸೆಂಟ್‌ ಇವರಲ್ಲಿ ಇಲ್ಲ. ಈ ಸರ್ಕಾರದವರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಸಿಎಂ ಕುರ್ಚಿ ವಿಚಾರದ ಕುರಿತು ಮಾತನಾಡಿ, ಯಾರ ಸಿಎಂ, ಯಾರ ಮಂತ್ರಿನೋ, ಈ ಸರ್ಕಾರ ಏನಾಗಿದೆ ಅಂತಾ ನಂಗೆ ಒಂದು ಗೊತ್ತಾಗುತ್ತಿಲ್ಲ. ಒಂದಂತೂ ಸತ್ಯ, ಈ ಸರ್ಕಾರಕ್ಕೆ ಕಿವಿ, ಬಾಯಿ ಇಲ್ಲ. ಎಲ್ಲವೂ ಮುಗಿದು ಹೋಗಿದೆ. ಈ ಸರ್ಕಾರ ಅಸ್ಥಿಪಂಜರವಾಗಿದೆ. 

Tap to resize

Latest Videos

ನಂಬಿಕೆಯೇ ದೇವರು ಎಂಬುದಕ್ಕೆ ನಾನೇ ಸಾಕ್ಷಿ: ಕೇಂದ್ರ ಸಚಿವ ವಿ.ಸೋಮಣ್ಣ

ಅಸ್ಥಿಪಂಜರ ಯಾವತ್ತೂ ಸುಟ್ಟೋಗ್ತದೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ನಾನು ಸಿಎಂ ಸಿದ್ದರಾಮಯ್ಯ ಜೊತೆ ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರ 5 ವರ್ಷದ ಹಿಂದಿನ ಆಡಳಿತ ನೋಡಿದ್ದೇನೆ. ಇವತ್ತಿನ ಆಡಳಿತ ಇದು ನನಗೆ ಮಾನಸಿಕವಾಗಿ ಅವರು ಸಿಎಂ ಕಾರ್ಯವೈಖರಿ ಇದೇನಾ ಎನ್ನುವಂತಾಗಿದೆ. ಅಲ್ಲಾರಿ ಈ ಸರ್ಕಾರದಲ್ಲಿ ಯಾವ ಅಧಿಕಾರಿಗೆ ಬೆಲೆ ಇದೆ ಅಂದುಕೊಂಡಿದ್ದೀರಿ? ಅವರು ಯಾವ ಜನ್ರು ತಲೆಯಲ್ಲಿ ಹಿಡಿದುಕೊಂಡು ಅಧಿಕಾರ ನಡೆಸ್ತಿದ್ದಾರೆ. ಸರ್ಕಾರ ಇದೆಯಾ ರಾಜ್ಯದಲ್ಲಿ? ನನಗಂತೂ ರಾಜ್ಯದಲ್ಲಿ ಸರ್ಕಾರ ಇದೆ ಅಂತಾ ಅನಿಸಿಲ್ಲ ಎಂದು ಹೇಳಿದರು.

ತುಮಕೂರಿನಲ್ಲೇ ವಿಮಾನ ನಿಲ್ದಾಣ ಆಗಲಿ: ತುಮಕೂರು ಅಥವಾ ನೆಲಮಂಗಲ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಬೇಕು. ಇದರ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ನಾನು ಈಗಾಗಲೇ ಚರ್ಚಿಸಿದ್ದೇನೆ. ನೀವೇನಾದರೂ ಬೇರೆಡೆ ಮಾಡಲು ಪ್ರಯತ್ನಿಸಿದರೆ ನಮಗೆ ಎಚ್‌ಎಎಲ್ ನಿಲ್ದಾಣವೇ ಸಾಕು. ಇದಕ್ಕೆ ನಾನೇ ಟ್ರಂಪ್‌ಕಾರ್ಡ್ ಆಗಿರುತ್ತೇನೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಕ್ರಮ: ಕೇಂದ್ರ ಸಚಿವ ವಿ.ಸೋಮಣ್ಣ

ಕೊರಟಗೆರೆ ತಾಲೂಕು ಕೋಳಾಲದ ೭ ಗ್ರಾಪಂ ಮತ್ತು ಕಸಬಾ ಹೋಬಳಿಯ ೬ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಸಭೆ ಹಾಗೂ ಕೇಂದ್ರ ಸರ್ಕಾರದ ಯೋಜನೆಯಡಿ ಬರುವ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಣಕಾಸು ಮಂತ್ರಾಲಯ ರಾಜ್ಯ ಸರ್ಕಾರಕ್ಕೆ ೬೩೧೦ ಕೋಟಿ ರು. ಹಣ ಬಿಡುಗಡೆ ಮಾಡಿದೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ನರೇಂದ್ರ ಮೋದಿ ಸರ್ಕಾರ ಅಸ್ತು ಅಂದಿದೆ ಎಂದರು.

click me!