
ಮೈಸೂರು (ಸೆ.20): ಕರಾವಳಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಎಂಬುದು ಕೇವಲ ಬೂಟಾಟಿಕೆ. ಅದು ನಿಷ್ಪ್ರಯೋಜಕ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಮಂಗಳೂರು ರೈಲ್ವೆ ವಿಭಾಗವನ್ನು ನೈಋತ್ಯ ವಲಯಕ್ಕೆ ಸೇರಿಸಿದ್ದಕ್ಕೆ ರಾಜ್ಯ ಸರ್ಕಾರ ಕೃತಜ್ಞತೆ ಸಲ್ಲಿಸಬಹುದಿತ್ತು. ರಾಜ್ಯ ಸರ್ಕಾರ ಸಣ್ಣತನ ಪ್ರದರ್ಶಿಸಿದೆ. ಕೇರಳ ಸರ್ಕಾರಕ್ಕೆ ಹೆದರಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಅಭಿನಂದನೆ ಸಲ್ಲಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದಲ್ಲಿ ಕಾಸಿಲ್ಲ. ಸುಮ್ಮನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏನೇನೋ ಹೇಳಿಕೊಂಡು ಓಡಾಡುತ್ತಿದ್ದಾರೆ. ಸಿಎಂ ಸ್ಪೀಡ್‌ಗೆ ಬಹಳ ಬೇಗ ಬ್ರೇಕ್ ಬೀಳುತ್ತದೆ. ಕಾಂಗ್ರೆಸ್ ಮಾತುಗಳನ್ನು ನಂಬಲು ಕರಾವಳಿ ಜನರೇನು ದಡ್ಡರಾ? ಕರಾವಳಿ ಜನಕ್ಕೆ ದೇಶ ಬೇಕು. ದೇಶ ಉಳಿಸುವವರು ಬೇಕು. ದೇಶ ವಿಭಜನೆ ಮಾಡುವವರು ಅವರಿಗೆ ಬೇಡ. ಕರಾವಳಿ ಜನಕ್ಕೆ ಮೋದಿ ಬೇಕು. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಬೇಡ ಎಂದು ಅವರು ಹೇಳಿದರು.
ಈ ಸಚಿವ ಸಂಪುಟ ಸಭೆ ಬಂದ ಪುಟ್ಟ, ಹೋದ ಪುಟ್ಟ ಅಷ್ಟೇ. ಸಚಿವ ಬಾಲಕೃಷ್ಣ ಪ್ರಧಾನಿ ಬಗ್ಗೆ ಟೀಕೆ ಮಾಡುತ್ತಾರೆ. ಬಾಲಕೃಷ್ಣನಿಗೆ ಬಾಲ ಒಂದಿಲ್ಲ. ಬಾಲಕೃಷ್ಣ ಒಳ್ಳೆಯ ನಡವಳಿಕೆ, ನೈತಿಕತೆ ಇಟ್ಟುಕೊಂಡು ಮಾತಾಡುವುದನ್ನು ಕಲಿಯಲಿ ಎಂದು ಅವರು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.