ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇರಲ್ಲ: ಅಚ್ಚರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಸೋಮಣ್ಣ

By Ravi JanekalFirst Published Aug 17, 2024, 7:56 PM IST
Highlights

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಅಚ್ಚರಿ ಹೇಳಿಕೆ ನೀಡಿದರು.

ತುಮಕೂರು (ಆ.17): ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಅಚ್ಚರಿ ಹೇಳಿಕೆ ನೀಡಿದರು.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ವಿಚಾರ ಸಂಬಂಧ ಇಂದು ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು,  ಸಿದ್ದರಾಮಯ್ಯನವರು ನುರಿತ ರಾಜಕಾರಣಿ. ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಕೆಲಸ ಮಾಡುತ್ತೆ. ಒಂದಂತೂ ಸತ್ಯ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದರು.

Latest Videos

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ವಾಟಾಳ್ ನಾಗರಾಜ್ ಕೆಂಡ!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ ಅದರ ಪ್ರಕಾರ ಕಾನೂನು ಕೆಲಸ ಮಾಡುತ್ತದೆ. ಇಲ್ಲಿ ವ್ಯಕ್ತಿ ಪ್ರಭಾವ, ಅಧಿಕಾರ ಎಲ್ಲವೂ ಗೌಣ ಎಂದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ನೀವು ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನನಗೂ 45 ವರ್ಷದ ರಾಜಕೀಯ ಅನುಭವ ಇದೆ. ಒತ್ತಾಯ ಮಾಡೋದು ಮತ್ತೊಂದು ಮಾಡೋದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸಾಹೇಬ್ರು ನುರಿತ ರಾಜಕಾರಣಿ, ಬುದ್ಧಿವಂತರು. ನಾನು ಅವರು ಬಹಳ ಆತ್ಮೀಯರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಿನ್ನೆ ಕೂಡ ಅವರ ಜೊತೆ ಮಾತನಾಡಿದ್ದೇನೆ. ಅವರು ಮಾತನಾಡಿದ್ದನ್ನ ನಾನು ಬಹಳ ಆನಂದದಿಂದ ಸ್ವೀಕರಿಸಿದ್ದೇನೆ. ಬಾಕಿದ್ದೇಲ್ಲಾ ಕಾನೂನು ನೋಡಿಕೊಳ್ಳುತ್ತೆ. ಕಾನೂನು ಏನು ಹೇಳುತ್ತೆ ಅದು ಆಗುತ್ತೆ. ಬಿಡು ಗುರು, ಒಂದು ಕುಟುಂಬ ಎಂದ ಮೇಲೆ ಐದು ಬೆರಳು ಒಂದೇ ಸಮ ಇದೆಯಾ? ಒಂದೊಂದು ಸರಿ ಆಗುತ್ತೆ, ನಮ್ಮ ಆತ್ಮೀಯತೆ ಅನ್ನೋದಕ್ಕಿಂತ ಹೆಚ್ಚಾಗಿ ಈ ಭಾಗದ ಜನರ ಋಣ ತೀರಿಸೋದು ಹೆಚ್ಚಾಗಿ ಇದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಋಣ ತೀರಿಸಬೇಕಿದೆ ಎಂದರು.

ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರ, ಆ ತೀರ್ಮಾನ ಕಾಂಗ್ರೆಸ್ ಪಾರ್ಟಿ ಮಾಡುತ್ತೆ. ನಾವ್ಯಾರು ಹೇಳೋಕೆ? ನೀವೇನು ಹೇಳಿದ್ರಲ್ಲ ಆ ರೀತಿಯಾಗಿ ಆದರೆ ನನಗಿಂತ ಜಾಸ್ತಿ ಆನಂದ ಪಡೋರು ಬೇರೆ ಯಾರೂ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲಿ ಎಂದ ಸಚಿವ ಸೋಮಣ್ಣ.

ಸಿಎಂ ಗೆ ನೋಟಿಸ್ ಕೊಡೊದು ಪ್ರಜಾಪ್ರಭುತ್ವ ಅಲ್ಲ; ರಾಜ್ಯಪಾಲರಿಗೆ ಹೋರಾಟದ ಎಚ್ಚರಿಕೆ ನೀಡಿದ ವಾಟಾಳ್!

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೋ ಇಲ್ವೋ ನನಗೆ ಗೊತ್ತಿಲ್ಲ. ಅವರ ರಾಜೀನಾಮೆ ಇತ್ಯಾದಿ ವಿಚಾರಗಳಲ್ಲಿ ನಾನು ರಾಜಕೀಯ, ಬೇರೆಯವರ ಬಗ್ಗೆ ಸಣ್ಣತನದ ಮಾತನಾಡುವುದಿಲ್ಲ. ನಾನೂ 45 ವರ್ಷ ಮಣ್ಣು ಹೊತ್ತಿದ್ದೀನಿ, ಸೈಕಲ್ ತುಳಿದಿದ್ದೇನೆ, ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಕಾನೂನು ತನ್ನ ಕೆಲಸ ಮಾಡಲಿ ಎಂದರು. ಮುಡಾ ಹಗರಣದಲ್ಲಿ ಬಿಜೆಪಿ ನಾಯಕರು ಮೈಸೂರು ಚಲೋ ಪಾದಯಾತ್ರೆ, ತೀವ್ರ ಹೋರಾಟ ನಡೆಸಿರುವುದರ ನಡುವೆ ಕೇಂದ್ರ ಸಚಿವರ ಮಾತು ಅಚ್ಚರಿ ಮೂಡಿಸಿದೆ.

click me!