ಕೇಂದ್ರ ಸಂಪುಟದಲ್ಲಿ‌‌ ಸ್ಥಾನ ಸಿಗದ ವಿಷಯ ಬೇಡವೇ ಬೇಡ, ಬೇರೆ ಏನಾದ್ರೂ ಇದ್ರೆ ಕೇಳಿ: ರಮೇಶ್‌ ಜಿಗಜಿಣಗಿ‌

By Girish GoudarFirst Published Jul 16, 2024, 4:14 PM IST
Highlights

ನನಗೆ ಕೇಂದ್ರದ ನಾಯಕರು‌ ಫೋನ್ ಮಾಡಿದ್ದಾರೆ ಅಷ್ಟೇ ನಾ ಹೇಳಬಲ್ಲೆ. ಹೆಚ್ಚಿನದ್ದು ಏನೂ ಕೇಳಬೇಡಿ. ಈ ಹಿಂದೆ ಟಿಕೆಟ್ ನೀಡಿದ್ದರೆ ಚುನಾವಣೆ ನಿಲ್ಲುತ್ತೇನೆ ಎಂದು ಹೇಳಿದ್ದೆ, ಟಿಕೆಟ್ ಕೊಟ್ಡಿದ್ದಾರೆ. ಈಗ ಅದರ ಬಗ್ಗೆ ಮಾತನಾಡೋದು ಬೇಡ ಎಂದು ಮನವಿ ಮಾಡಿದ ವಿಜಯಪುರ ಬಿಜೆಪಿ ಸಂಸದ ರಮೇಶ್‌ ಜಿಗಜಿಣಗಿ‌

ವಿಜಯಪುರ(ಜು.16):  ಕೇಂದ್ರ ಸಂಪುಟದಲ್ಲಿ‌‌ ಸ್ಥಾನ ಸಿಗದಿದಕ್ಕೆ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ‌, ಈಗ ಅದರ ಬಗ್ಗೆ ನಾನೇನು ಮಾತನಾಡೋದಿಲ್ಲ. ಅದನ್ನ ಬಿಟ್ಟು ಬಿಡಿ. ಬೇರೆ ಏನಾದ್ರು ಕೇಳಿ ಈ‌ ವಿಷಯ ಬೇಡವೇ ಬೇಡ ಎಂದು ಹೇಳಿದ್ದಾರೆ.

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ ಜಿಗಜಿಣಗಿ‌ ಅವರು, ನನಗೆ ಕೇಂದ್ರದ ನಾಯಕರು‌ ಫೋನ್ ಮಾಡಿದ್ದಾರೆ ಅಷ್ಟೇ ನಾ ಹೇಳಬಲ್ಲೆ. ಹೆಚ್ಚಿನದ್ದು ಏನೂ ಕೇಳಬೇಡಿ. ಈ ಹಿಂದೆ ಟಿಕೆಟ್ ನೀಡಿದ್ದರೆ ಚುನಾವಣೆ ನಿಲ್ಲುತ್ತೇನೆ ಎಂದು ಹೇಳಿದ್ದೆ, ಟಿಕೆಟ್ ಕೊಟ್ಡಿದ್ದಾರೆ. ಈಗ ಅದರ ಬಗ್ಗೆ ಮಾತನಾಡೋದು ಬೇಡ ಎಂದು ಮನವಿ ಮಾಡಿದ್ದಾರೆ.

Latest Videos

ನನ್ನ ಅನುಭವ ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ: ಸ್ವಪಕ್ಷದ ವಿರುದ್ಧ ಸಂಸದ ಜಿಗಜಿಣಗಿ ಅಸಮಾಧಾನ

ರಾಜ್ಯದಲ್ಲಿ ವಾಲ್ಮೀಕಿ, ಮೂಡಾ ಹಗರಣಗಳ ವಿಚಾರದ ಬಗ್ಗೆ ಮಾತನಾಡಿದ ರಮೇಶ ಜಿಗಜಿಣಗಿ‌, ದಲಿತರ, ಮೈನಾರಟಿಗಳ‌ ಹಿರೋಗಳು ಈ ಕಾಂಗ್ರೆಸ್‌ನವರು. ಕಾಂಗ್ರೆಸ್ ನಾಯಕರಿಗೆ ದಲಿತರ ಬಗ್ಗೆ ಮಾತನಾಡೋಕೆ ಯಾವ ನೈತಿಕತೆ ಇದೆ. 187 ಕೋಟಿ ದಲಿತರ ಹಣ ಎಲ್ಲಿ ಹೋಯಿತು. ಎಲ್ಲಾ ಸಮಾಜಗಳ ಹಿರೋ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನವರಿಗೆ ನಾಚಿಕೆ ಇಲ್ವಾ ಎಂದು ರಾಜ್ಯ ಸರ್ಕಾರದ ‌ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಜನತಾ ಪರಿವಾರದ ಸಿದ್ದರಾಮಯ್ಯ ಬದಲಾಗಿದ್ದಾರೆ. ಮೊದಲು ಜನತಾ ಪರಿವಾರದಲ್ಲಿದ್ದರು. ಈಗ ಕಾಂಗ್ರೆಸ್‌ನಲ್ಲಿ ಸಿದ್ರಾಮಣ್ಣ ದಲಿತರಿಗೆ ಮೈನಾರಿಟಿಗೆ ಹಿರೋ ಆಗಿದ್ದಾರೆ. ರಾಜ್ಯದಲ್ಲಿ ಕೇಳಿ ಬಂದ ಪ್ರಕರಣಗಳ ಬಗ್ಗೆ ಜನರಿಗೆ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆ ಮಾಡಿಸಬೇಕು ಎಂದು ಜಿಗಜಿಣಗಿ‌ ಆಗ್ರಹಿಸಿದ್ದಾರೆ. 

ಬಿಜೆಪಿಯಿಂದ ಸರ್ಕಾರದ ವಿರುದ್ಧ ಸರಿಯಾದ ಹೋರಾಟ ಇಲ್ಲವೆಂಬ ಆರೋಪ‌ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಮೇಸ್‌ ಜಿಗಜಿಣಗಿ, ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ಹೋರಾಟದಿಂದ ಚೇರಮೆನ್ ರಾಜೀನಾಮೆ ನೀಡಿದರು. ಮುಂದೆಯೂ‌ ಹೋರಾಟ ಮಾಡಲಾಗುವುದು. ಅಷ್ಟು ಸಲೀಸಾಗಿ ಇದನ್ನ‌ ಬಿಡೋದಿಲ್ಲ. ನಾನು ಲೋಕಸಭಾ ಸದಸ್ಯ ನಾನು ಹೋರಾಟ ಮಾಡುತ್ತೇನೆ. ಪಕ್ಷದವರು ಕರೆದರೆ ಹೋಗಿ ನೇತೃತ್ವ ವಹಿಸಿಕೊಂಡು ಹೋರಾಟ ಮಾಡುತ್ತೇನೆ. ಇಲ್ಲದಿದ್ದರೆ ಕಾರ್ಯಕರ್ತರ ಜೊತೆಗೂಡಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ. 

click me!