ಮೋದಿ, ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ: ಕೇಂದ್ರ ಸಚಿವ ಜೋಶಿ

By Kannadaprabha News  |  First Published Jun 22, 2023, 2:30 AM IST

ಕೇಂದ್ರ ಸರ್ಕಾರ ದೇಶದಾದ್ಯಂತ ಐದು ಕೆ.ಜಿ. ಅಕ್ಕಿ ಕೊಡುತ್ತಿದೆ. ಕರ್ನಾಟಕದಲ್ಲೂ ನಾವು ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ. 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಇದು ಸಿಎಂ ಸಿದ್ದರಾಮಯ್ಯ ಅವರ ಅಕ್ಕಿ ಅಲ್ಲ. 10 ಕೆ.ಜಿ. ಅಕ್ಕಿಯನ್ನು ಅವರು ಕೊಡುತ್ತೇನೆ ಅಂತ ಜನರಿಗೆ ಮಾತು ಕೊಟ್ಟಿದ್ದಾರೆ. ಅದನ್ನು ಕೊಡಲಿ ಎಂದ ಪ್ರಹ್ಲಾದ ಜೋಶಿ 


ಹುಬ್ಬಳ್ಳಿ(ಜೂ.22):  ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆ ವಿಚಾರದಲ್ಲಿ ದಿನಕ್ಕೊಂದು ಕಂಡೀಷನ್‌ ಹಾಕಿ ಜನರಿಗೆ ಮೋಸ ಮಾಡುತ್ತಿದೆ. ಆದರೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಯೋಗ ದಿನದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನೇ ಆದರೂ ಮೋದಿಗೆ ಬೈಯುದು ಕಾಂಗ್ರೆಸ್‌ನವರ ಚಾಳಿ ಆದಂತಾಗಿದೆ ಎಂದರು.

ಕೇಂದ್ರ ಸರ್ಕಾರ ದೇಶದಾದ್ಯಂತ ಐದು ಕೆ.ಜಿ. ಅಕ್ಕಿ ಕೊಡುತ್ತಿದೆ. ಕರ್ನಾಟಕದಲ್ಲೂ ನಾವು ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ. 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಇದು ಸಿಎಂ ಸಿದ್ದರಾಮಯ್ಯ ಅವರ ಅಕ್ಕಿ ಅಲ್ಲ. 10 ಕೆ.ಜಿ. ಅಕ್ಕಿಯನ್ನು ಅವರು ಕೊಡುತ್ತೇನೆ ಅಂತ ಜನರಿಗೆ ಮಾತು ಕೊಟ್ಟಿದ್ದಾರೆ. ಅದನ್ನು ಕೊಡಲಿ ಎಂದರು.

Tap to resize

Latest Videos

ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಡ್ಡಿ: ಸಚಿವ ಸಂತೋಷ್ ಲಾಡ್ ಕಿಡಿ

ಮತ ಪಡೆಯುವಾಗ ಕೇಂದ್ರದ ಅಕ್ಕಿ ಬಗ್ಗೆ ಸ್ಪಷ್ಟಪಡಿಸಿಲ್ಲ. ಇದೀಗ ಅಕ್ಕಿ ಕೊಡುತ್ತಿಲ್ಲ ಅಂತಾ ಹೇಳಿದ್ದಾರೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ಹೀಗೆ ಹೆಚ್ಚುವರಿ ಅಕ್ಕಿ ಕೇಳಿದ್ದಾರೆ. ಆದರೂ ನಾವು ಅಕ್ಕಿ ಕೊಡುತ್ತಿಲ್ಲ. ಇಷ್ಟುಅಕ್ಕಿ ಸ್ಟಾಕ್‌ ಇರಬೇಕು ಎನ್ನುವ ನಿಯಮ ಇದೆ. ಅಷ್ಟುಅಕ್ಕಿ ಸ್ಟಾಕ್‌ ಇರಲೇಬೇಕು. ಭಾರತ ಸರ್ಕಾರ ಕೊಟ್ರೆ ನಾವ ಕೊಡುತ್ತೇವೆ ಎಂದು ಹೇಳಬೇಕಿತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಎಲ್ಲರೂ ಮನಸ್ಸಿಗೆ ಬಂದಂತೆ ಅಕ್ಕಿ ಕೇಳುತ್ತಿದ್ದಾರೆ. ಕೇಂದ್ರದ ಗೋಡೌನ್‌ ಖಾಲಿಯಾದರೆ ಆಹಾರ ಭದ್ರತೆ ಪ್ರಶ್ನೆ ಬರುತ್ತದೆ. ಮನಸಿಗೆ ಬಂದಂತೆ ಘೋಷಣೆ ಮಾಡಿದರೆ ಸರಿ ಇರಲ್ಲ ಎಂದರು.

ಸರ್ವಾಧಿಕಾರದ ಪ್ರತೀಕ:

ಸಾಮಾಜಿಕ ಜಾಲತಾಣದ ಮೇಲೆ ರಾಜ್ಯ ಸರ್ಕಾರದ ಹದ್ದಿನ ಕಣ್ಣು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಸಿದ್ದರಾಮಯ್ಯ ಅವರದ್ದು ಸರ್ವಾಧಿಕಾರ ಪ್ರತೀಕ. ಹಿಟ್ಲರ್‌ ಪ್ರವೃತ್ತಿ. ಇಂದಿರಾ ಗಾಂಧಿ ಎಮರ್ಜೆನ್ಸಿ ಕಾಲ ಈಗಿಲ್ಲ ಸಿದ್ದರಾಮಯ್ಯನವರೇ. ಜನತೆ ಎಲ್ಲವನ್ನು ಗಮನಿಸುತ್ತಿದೆ. ಮೋದಿ ಬಗ್ಗೆ ಬಾಯಿಗೆ ಬಂದಂತೆ ಸೋಶಿಯಲ್‌ ಮಿಡಿಯಾದಲ್ಲಿ ಇವರೇ ಬೈದಿಲ್ವಾ? ಇದನ್ನೆಲ್ಲ ಬಿಡಿ, ಜನ ನಿಮಗೆ ತೀರ್ಪು ಕೊಟ್ಟಿದ್ದಾರೆ. ವಿನಮ್ರತೆಯಿಂದ ಮಾತನಾಡಿ ಎಂದು ಸಲಹೆ ಮಾಡಿದರು.

ಹುಚ್ಚರಂತೆ ಮಾತಾಡಬೇಡಿ:

ವಿದ್ಯುನ್ಮಾನ ಮತಯಂತ್ರ ರೀತಿ ನಮ್ಮ ಯೋಜನೆಗಳ ಜಾರಿಗೆ ಬೇಕಾಗಿರುವ ಯಂತ್ರಗಳ ಸರ್ವರ್‌ಗಳನ್ನು ಕೇಂದ್ರ ಸರ್ಕಾರ ಹ್ಯಾಕ್‌ ಮಾಡಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ಜೋಶಿ ತಿರುಗೇಟು ನೀಡಿದರು. ಮಂತ್ರಿಗಳೆಲ್ಲ ಹೀಗೆ ಮಾತನಾಡುತ್ತಾರೆ ಎಂದರೆ ಹೇಗೆ? ಸೀರಿಯಸ್‌ ಇಲ್ಲದೇ ಅಕ್ಕಿ ವಿಷಯದಲ್ಲಿ ಮಾತನಾಡುತ್ತಾರೆ. ಈ ವಿಷಯದಲ್ಲೂ ಹಾಗೆ ಮಾತನಾಡುತ್ತಾರೆ. ಜಾರಕಿಹೊಳಿ ಇವಿಎಂ ಬಗ್ಗೆ ಮಾತನಾಡಿದ್ದಾರೆ. ಚುನಾವಣಾ ಆಯೋಗ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಬೇಕು. ಆಯೋಗ ಇವಿಎಂ ಫೇಲ್‌ ಆಗಿರುವುದನ್ನು ಸಿದ್ಧಪಡಿಸಿ, ಇಲ್ಲವೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿತ್ತು. ಇದೀಗ ಚುನಾವಣಾ ಆಯೋಗ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದರು. ಸುಮ್ಮನೆ ಹುಚ್ಚರ ರೀತಿ ಏನೇನೋ ಮಾತನಾಡಬೇಡಿ. ಸಿದ್ದರಾಮಯ್ಯ, ಜಾರಕಿಹೊಳಿ ಅವರೇ ನಿಮಗೆ 135 ಸೀಟು ಬಂದಿದ್ದು ಇವಿಎಂನಿಂದಲೇ ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದರು.

click me!