ಸಿದ್ದರಾಮಯ್ಯನವರಂತ ಸುಳ್ಳುಗಾರನಿಲ್ಲ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

By Girish GoudarFirst Published Dec 29, 2023, 12:44 PM IST
Highlights

ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರ ಬುರುಡೆ ಸರ್ಕಾರ ಅಂತ ಆರೋಪ ಮಾಡ್ತಾರೆ. ಸಿದ್ದರಾಮಯ್ಯನವರಂತಹ ಸುಳ್ಳುಗಾರನಿಲ್ಲ. ಇವರ ಆಡಳಿತ ಅವಧಿಯಲ್ಲಿ ಇವರಿಗೆ ಗ್ಯಾಸ್ ಕೊಡೋ ಯೋಗ್ಯತೆ ಇರಲಿಲ್ಲ. ಅವರಿಗೆ ಮನೆ ಮನೆ ಗ್ಯಾಸ್ ಸಿಗುವಂತೆ ಮಾಡಿದ್ದು ಪ್ರಧಾನಿ ಮೋದಿ, ಪ್ರಧಾನಿ ಮೋದಿಯವರು 4 ಕೋಟಿ ಮನೆಗಳನ್ನ ಕೊಟ್ಟಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಬುರುಡೆ ಸರ್ಕಾರ ಅಂತಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 

ದಾವಣಗೆರೆ(ಡಿ.29):  ಯಾರೇ ಆಗಲಿ ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡಬಾರದು. ಅವರ ಏನೇ ದೂರು ಸಮಸ್ಯೆ ಇದ್ದರು ಕೇಂದ್ರ ನಾಯಕರ ಜೊತೆ ಮಾತನಾಡಲಿ. ಅಮಿತ್ ಶಾ, ರಾಜನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ಅವರ ಜೊತೆ ಮಾತನಾಡಲಿ. ವಿಜಯೇಂದ್ರ ಅವರನ್ನ ರಾಷ್ಟ್ರೀಯ ನಾಯಕರು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅದರ ಬಗ್ಗೆ ವಿರೋಧ ಮಾಡೋದು ತಪ್ಪು ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. 

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕಿಡಿ ಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಈ ಬಗ್ಗೆ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ತಾರೆ ಎಂದಷ್ಟೇ ಹೇಳಿದ್ದಾರೆ. 

ಯತ್ನಾಳ್‌ ಭವಿಷ್ಯ ಅಂತ್ಯ ಕಾಲ: ರೇಣುಕಾಚಾರ್ಯ ಕಿಡಿ

ಕನ್ನಡ ಪರ ಹೋರಾಟಗಾರರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕೊಟ್ಟಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ. ಕನ್ನಡ ಪರ ಹೋರಾಟಗಾರನ್ನ ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಗಲಭೆ ದಾಂಧಲೆ ಮಾಡಿದವರನ್ನ ಕೇಸ್ ವಾಪಸ್ ಪಡೆಯಲು ಹೇಳ್ತಾರೆ. ಕನ್ನಡ ಪರ ಹೋರಾಟಗಾರರ ಹೋರಾಟ ನ್ಯಾಯಯುತವಾಗಿದೆ. ಮತ್ತೊಮ್ಮೆ ಹೋರಾಟ ಮಾಡದಂತೆ ಎಲ್ಲ ಸೆಕ್ಷನ್ ಹಾಕಿದ್ದಾರೆ. ಕನ್ನಡ ಪರ ಹೋರಾಟಗಾರರನ್ನು ನ್ಯಾಯಾಂಗ ಬಂಧನದಲ್ಲಿಡುವ ಅವಶ್ಯಕತೆ ಇರಲಿಲ್ಲ. ಕೆಜಿ ಹಳ್ಳಿ ಗಲಭೆಕೋರರ ಪೊಲೀಸರನ್ನ ಕೊಲ್ಲಲು ಪೊಲೀಸರನ್ನ ಸುಡಲು ಹೊರಟಿದ್ದರು. ಇದು ಚಾರ್ಜ್ ಸೀಟ್ ನಲ್ಲಿ ಉಲ್ಲೇಖವಿದೆ. ಇಂತಹ ಇಬ್ಬಗೆಯ ನೀತಿ ಬಿಟ್ಟು ಹೋರಾಟಗಾರರನ್ನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರ ಬುರುಡೆ ಸರ್ಕಾರ ಅಂತ ಆರೋಪ ಮಾಡ್ತಾರೆ. ಸಿದ್ದರಾಮಯ್ಯನವರಂತಹ ಸುಳ್ಳುಗಾರನಿಲ್ಲ. ಇವರ ಆಡಳಿತ ಅವಧಿಯಲ್ಲಿ ಇವರಿಗೆ ಗ್ಯಾಸ್ ಕೊಡೋ ಯೋಗ್ಯತೆ ಇರಲಿಲ್ಲ. ಅವರಿಗೆ ಮನೆ ಮನೆ ಗ್ಯಾಸ್ ಸಿಗುವಂತೆ ಮಾಡಿದ್ದು ಪ್ರಧಾನಿ ಮೋದಿ, ಪ್ರಧಾನಿ ಮೋದಿಯವರು 4 ಕೋಟಿ ಮನೆಗಳನ್ನ ಕೊಟ್ಟಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಬುರುಡೆ ಸರ್ಕಾರ ಅಂತಾರೆ. ತಮ್ಮ ಸರ್ಕಾರದ ನ್ಯೂನ್ಯತೆಗಳನ್ನ ಮುಚ್ಚಿ ಹಾಕಲು ಈ ರೀತಿ ವಿಷಯಾಂತರ ಮಾಡ್ತಾರೆ ಅಂತ ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

click me!