ನಾನು ಅನಿವಾರ್ಯವಾಗಿ ಲೋಕಸಭೆಗೆ ಸ್ಪರ್ಧಿಸಿದೆ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

By Ravi Janekal  |  First Published Jun 23, 2024, 3:53 PM IST

ನಾನು ಅನಿವಾರ್ಯವಾಗಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಚನ್ನಪಟ್ಟಣದ ಜನ ನನಗೆ ಆಶೀರ್ವಾದ ಮಾಡಿ ನನ್ನ ಸಿಎಂ ಮಾಡಿದವರು ಎಂದು ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ನುಡಿದರು.


ಚನ್ನಪಟ್ಟಣ (ಜೂ.23): ನಾನು ಅನಿವಾರ್ಯವಾಗಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಚನ್ನಪಟ್ಟಣದ ಜನ ನನಗೆ ಆಶೀರ್ವಾದ ಮಾಡಿ ನನ್ನ ಸಿಎಂ ಮಾಡಿದವರು ಎಂದು ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ನುಡಿದರು.

ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಸಚಿವರು, ನನ್ನನ್ನು ಗೆಲ್ಲಿಸಿ ಸಿಎಂ ಆಗಿ ಮಾಡಿದವರು ಚನ್ನಪಟ್ಟಣ ಜನ. ನಾನು ಸಿಎಂ ಆಗಿ ರೈತರ ಸಾಲ ಮನ್ನಾ ಮಾಡಲು ಸಹಕಾರ ನೀಡಿದರು. ಸಿಪಿ ಯೋಗೇಶ್ವರ್ ಕೂಡ ಇಲ್ಲೇ ಇದ್ದಾರೆ. ಅವರು ನಾವು ಎರಡು ಬಾರಿ ವಿರುದ್ಧವಾಗಿ ಚುನಾವಣೆ ಎದುರಿಸಿದ್ದೇವೆ. ಈ ತಾಲೂಕಿನ ಜನರು ಸ್ವಾಭಿಮಾನಿಗಳು. ಈ ಜಿಲ್ಲೆಯ ಜನರು ನನನಗೆ ರಾಜಕೀಯವಾಗಿ ಜನ್ಮ ಕೊಟ್ಟಿರೋದನ್ನ ನಾನು ಬದುಕಿರೋವರೆಗೂ ಮರೆಯಲಾರೆ ಎಂದರು.

Latest Videos

undefined

ಪೆಟ್ರೋಲ್ ಡೀಸೆಲ್ ದರ ಏರಿಕೆಗೆ ಬಿಜೆಪಿ ಕಾರಣ: ಕೇಂದ್ರದ ವಿರುದ್ಧ ಡಾ.ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ!

ಮಂಡ್ಯ ಜನರು ನನ್ನನ್ನು ಆಯ್ಕೆ ಮಾಡಿದ ಬಳಿಕ ನಾನು ಇಲ್ಲಿ ರಾಜೀನಾಮೆ ಕೊಟ್ಟಿದ್ದೇನೆ. ಮಂಡ್ಯದಲ್ಲಿ ಗೆದ್ದು ಮೋದಿ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗಿರೋದ್ರಿಂದ ಜನ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿತ್ಯ ಮನೆಯ ಬಳಿ ಸಾವಿರಾರು ಜನರು ಬರ್ತಿದ್ದಾರೆ. ಬಹಳ ಜನರಿಗೆ ನಾನು ಕೃಷಿ ಸಚಿವ ಆಗಬೇಕೆಂದು ಆಸೆ ಇತ್ತು. ಆದರೆ ಮೋದಿಯವರು ಎರಡು ದೊಡ್ಡ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ. ಇದು ಕಠಿಣವಾದ ಹಾಗೂ ಸವಾಲಿನದ್ದಾಗಿದೆ. ರಾಜ್ಯದ ಆಡಳಿತ ಒಂದು ರೀತಿಯಾದರೆ, ಕೇಂದ್ರ ಆಡಳಿತವೇ ಬೇರೆ. ನಾನು ಕೇಂದ್ರದ ಆಡಳಿತಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದೇ ವೇಳೆ ರಾಜ್ಯದ ಕೆಲಸಗಳ ಬಗ್ಗೆಯೂ ಗಮನ ಹರಿಸಲು ಸಮಯ ಬೇಕಾಗುತ್ತದೆ. ನಾನು ಎಲ್ಲೇ ಇದ್ರೂ ನನ್ನ ಹೃದಯ ನನ್ನ ಮನಸು ಚನ್ನಪಟ್ಟಣದಲ್ಲಿರುತ್ತದೆ ಎಂದರು.

ನಿನ್ನೆ ಮಹಾನುಭವ ಇಲ್ಲಿಗೆ ಬಂದು ನನ್ನ ಹೃದಯ ಚನ್ನಪಟ್ಟಣ ಅಂದವ್ರೆ. ಇಷ್ಟು ದಿನ ಚನ್ನಪಟ್ಟಣದ ದಾರಿ ಗೊತ್ತಿರಲಿಲ್ಲವ? ಚನ್ನಪಟ್ಟಣಕ್ಕೆ ಆ ಮಹಾನುಭಾವರ ಕೊಡುಗೆ ಏನು? ಅವರ ಸಹೋದರ (ಡಿಕೆ ಸುರೇಶ್) ಜನಸಂಪರ್ಕ ಸಭೆ ಮಾಡಿದ್ರಲ್ಲ ಏನು ಆಯ್ತು? ಉಪಚುನಾವಣೆ ಬಂದಿರೋದ್ರಿಂದ ಮೊನ್ನೆ ಬಂದು ಸುಮಾರು ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ, ಅಧಿಕಾರಿಗಳ ಮೀಟಿಂಗ್ ಮಾಡಿ ಹೋಗಿದ್ದಾರೆ. ಅಧಿಕಾರಿಗಳಿಗೆ ಯಾವ ರೀತಿ ಮಾತನಾಡುತ್ತಾರೆ ಅಂತಾ ಗೊತ್ತಿದೆ. ನಾನು ಒಂದೂ ಕೆಡಿಪಿ ಸಭೆ ಮಾಡಿಲ್ಲ ಎಂದು ಹೇಳಿದ್ದಾರೆ. ಮೀಟಿಂಗ್‌ನಲ್ಲಿ ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಮಾಡಿಸಿದ್ದಾರೆ. ಮಾಧ್ಯಮದವರನ್ನೂ ಹೊರಗೆ ಇಟ್ಟಿದ್ದಾರೆ. ಇಂತಹವರ ಆಡಳಿತ ಚನ್ನಪಟ್ಟಣದ ಜನತೆ ಬೇಕಾ? ಎಂದು ಪ್ರಶ್ನಿಸಿದರು.


 ನಮ್ಮ ಹಾಗೂ ಯೋಗೇಶ್ವರ್ ನಡುವೆ ಯಾವುದೇ ವೈಮನಸ್ಸು ಇಲ್ಲ. ಇದನ್ನ ನಾವು ಸರಿಪಡಿಸಿಕೊಂಡು ಹೋಗ್ತೀವಿ. ಯೋಗೇಶ್ವರ್ ಹೇಳಿದ್ರೂ ಈಗ ಯಾವುದೋ ಸಮುದಾಯದ ಮತಗಳನ್ನ ಜಾಸ್ತಿ ಮಾಡ್ತಿದ್ದಾರಂತೆ. ಓಟ್ ಹೆಚ್ಚಿಸಿಕೊಳ್ಳಲು ಅಣ್ಣತಮ್ಮಂದಿರು  ಏನೋ ಮಾಡ್ತಿದ್ದಾರೆ. ನಾನು ಮುಸ್ಲಿಂ ಸಮುದಾಯಕ್ಕೆ ಕೇಳಲು ಬಯಸುತ್ತೇನೆ. ಮುಸ್ಲಿಂ ಸಮಾಜಕ್ಕೆ ದೇವೇಗೌಡರು ಯಾವರೀತಿ ಸಹಕಾರ ಕೊಟ್ಟಿದ್ರು ನೆನಪಿಸಿಕೊಳ್ಳಿ. ರಾಮನಗರದಲ್ಲಿ ಹಿಂದೆ ಮುಸ್ಲಿಂ ಕಾಲೋನಿ ಹೇಗಿತ್ತು? ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇತ್ತು. ನಾವು ಯಾವರೀತಿ ಅಭಿವೃದ್ಧಿ ಮಾಡಿದ್ದೀವಿ ಅದನ್ನ ನೆನಪಿಸಿಕೊಳ್ಳಿ ಎಂದು ಮುಸ್ಲಿಂ ಮುಖಂಡರ ವಿರುದ್ಧ ಹೆಚ್ಡಿಕೆ ಕಿಡಿಕಾರಿದರು.

'ಓಹ್, ಸೂರಜ್ ರೇವಣ್ಣ ಕೂಡ ಅರೆಸ್ಟ್ ಆದ್ರಾ? ನಂಗೆ ಗೊತ್ತೇ ಇರಲಿಲ್ಲ' ಎಂದ ಜಿಟಿ ದೇವೇಗೌಡ!

ಅದೆಲ್ಲೋ ಕಲ್ಲು ಒಡೆದುಕೊಂಡು ಕೂತಿದ್ದವರಿಗೆ ಈಗ ಚನ್ನಪಟ್ಟಣ ನೆನಪಾಗಿದೆ. ಚನ್ನಪಟ್ಟಣ ಜನತೆ ಇವರನ್ನ ನಂಬಬಾರದು. ಇಲ್ಲಿ ಯೋಗೇಶ್ವರ್ ಅವರೇ ಅಭ್ಯರ್ಥಿ ಆಗಬಹುದು ಅಥವಾ ಜೆಡಿಎಸ್ ಅಭ್ಯರ್ಥಿ ಆಗಬಹುದು. ಆದರೆ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬಾರದು. ಅಭ್ಯರ್ಥಿ ಬಗ್ಗೆ ನಾವು ಕೂತು ಮಾತನಾಡುತ್ತೇವೆ. ನಿಖಿಲ್ ಈಗಾಗಲೇ ಎರಡು ಬಾರಿ ಸೋತು ನೋವು ತಿಂದಿದ್ದಾನೆ. ಆ ನೋವು ನನಗೆ ಮಾತ್ರ ಗೊತ್ತು ಎನ್ನುವ ಮೂಲಕ ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಕುರಿತು ಪರೋಕ್ಷವಾಗಿ ಸುಳಿವು ನೀಡಿದರು.

click me!