ವಿತ್ತ ಸಚಿವೆ ನಿರ್ಮಲಾ ವಿಷ ಸರ್ಪ: ಟಿಎಂಸಿ ಸಂಸದನಿಂದ ವಿವಾದ!

By Suvarna NewsFirst Published Jul 6, 2020, 2:58 PM IST
Highlights

ವಿತ್ತ ಸಚಿವೆ ನಿರ್ಮಲಾ ವಿಷ ಸರ್ಪ: ಟಿಎಂಸಿ ಸಂಸದನಿಂದ ವಿವಾದ| ತೈಲ ಬೆಲೆ ಏರಿಕೆ ಮತ್ತು ರೈಲ್ವೆ ಖಾಸಗೀಕರಣದ ವಿರುದ್ಧದ ಪ್ರತಿಭಟನಾ ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದ ಕಲ್ಯಾಣ್‌ ಬ್ಯಾನರ್ಜಿ|

ಕೋಲ್ಕತಾ(ಜು.06): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ವಿಷಪೂರಿತ ಹಾವಿಗೆ ಹೋಲಿಸಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದ ಕಲ್ಯಾಣ್‌ ಬ್ಯಾನರ್ಜಿ ವಿವಾದಕ್ಕೆ ಕಾರಣವಾಗಿದ್ದಾರೆ.

ತೈಲ ಬೆಲೆ ಏರಿಕೆ ಮತ್ತು ರೈಲ್ವೆ ಖಾಸಗೀಕರಣದ ವಿರುದ್ಧದ ಪ್ರತಿಭಟನಾ Rallyಯಲ್ಲಿ ಪಾಲ್ಗೊಂಡಿದ್ದ ಕಲ್ಯಾಣ್‌ ಬ್ಯಾನರ್ಜಿ, ‘ವಿಷಪೂರಿತ ಹಾವು ಮನುಷ್ಯನನ್ನು ಕೊಲ್ಲುವಂತೆ, ದೇಶದ ಆರ್ಥಿಕತೆಯನ್ನು ಛಿದ್ರಗೊಳಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಒಬ್ಬೊಬ್ಬರೇ ಜನರನ್ನು ಬಲಿ ಪಡೆಯುತ್ತಿದ್ದಾರೆ. ಅವರು ದೇಶದ ಅತಿ ಕೆಟ್ಟಹಣಕಾಸು ಸಚಿವೆ. ಈ ಕೂಡಲೇ ಅವರು ರಾಜೀನಾಮೆ ನೀಡಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ್‌ ಅವರ ಈ ಹೇಳಿಕೆಗೆ ಬಿಜೆಪಿ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ್ದು, ಹೀಗೆ ಅಸಂಬದ್ಧವಾಗಿ ಮಾತನಾಡುವ ತಮ್ಮ ಪಕ್ಷದ ಸದಸ್ಯರ ಮೇಲೆ ಮಮತಾ ಬ್ಯಾನರ್ಜಿ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದೆ.

click me!