ಬಿಜೆಪಿ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ: ಶಾಸಕ ಮಹೇಶ ಟೆಂಗಿನಕಾಯಿ

By Kannadaprabha News  |  First Published Jan 29, 2024, 9:23 PM IST

ಪಕ್ಷದ ಸೂಚನೆಯ ಪ್ರಕಾರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ಕಚೇರಿಗೆ ಭೇಟಿ ಹಿನ್ನೆಲೆ ಎಲ್ಲರನ್ನೂ ಆಗಮಿಸುವಂತೆ ತಿಳಿಸಲಾಗಿತ್ತು. ಅದರಂತೆ ಅವರು ಕಚೇರಿಗೆ ಬಂದ ವೇಳೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. 
 


ಹುಬ್ಬಳ್ಳಿ (ಜ.29): ಪಕ್ಷದ ಸೂಚನೆಯ ಪ್ರಕಾರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ಕಚೇರಿಗೆ ಭೇಟಿ ಹಿನ್ನೆಲೆ ಎಲ್ಲರನ್ನೂ ಆಗಮಿಸುವಂತೆ ತಿಳಿಸಲಾಗಿತ್ತು. ಅದರಂತೆ ಅವರು ಕಚೇರಿಗೆ ಬಂದ ವೇಳೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಗದೀಶ ಶೆಟ್ಟರ್ ಬಿಜೆಪಿ ಕಚೇರಿ ಭೇಟಿ ನೀಡಿದ ವೇಳೆ ಅವರ ಸ್ವಾಗತಕ್ಕೆ ಸ್ಥಳೀಯ ನಾಯಕರ ಗೈರು ವಿಚಾರ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಜಗದೀಶ ಶೆಟ್ಟರ್ ಅವರನ್ನು ಪಕ್ಷದ ಕಚೇರಿಯಲ್ಲಿಯೇ ಸ್ವಾಗತ ಮಾಡುವಂತೆ ಪಕ್ಷದ ನಾಯಕರ ತೀರ್ಮಾನವಾಗಿತ್ತು ಎಂದರು. ಪಕ್ಷದಲ್ಲಿ ಎಲ್ಲರೂ ಒಂದೇ ಇಲ್ಲಿ ಯಾವುದೇ ಬಣಗಳಿಲ್ಲ. ಈ ವರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಬ್ಬರೇ ಇದ್ದರು. ಈಗ ಜಗದೀಶ ಶೆಟ್ಟರ್ ಅವರು ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಎಲ್ಲರ ನೇತೃತ್ವದಲ್ಲಿ, ಹಿರಿಯ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ಎಚ್‌ಡಿಕೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಸೇರ್ಪಡೆ: ಸಚಿವ ಚಲುವರಾಯಸ್ವಾಮಿ

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸದೃಢ ನಾಯಕ: ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಸದೃಢ ನಾಯಕರು ಎಂದು ದೇಶದ ಜನತೆಗೆ ಗೊತ್ತಾಗಿದೆ. ಒಬ್ಬ ಸದೃಢ ನಾಯಕನಾದವನು ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬುದನ್ನು ಪ್ರಧಾನಿಗಳು ಮಾಡಿ ತೋರಿಸಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಅವರು ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ಬಿಜೆಪಿ ಯುವಮೋರ್ಚಾದಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ನವ ಮತದಾತ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಪ್ರಸಾರ ವೀಕ್ಷಣೆ, ಹೊಸ ಮತದಾರರ ಮಿಸ್‌ಕಾಲ್‌ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದ ಸುಮಾರು 5ಸಾವಿರ ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಮೋ ನವಭಾರತ ಸಮ್ಮೇಳನದ ಮೂಲಕ ಕೋಟ್ಯಂತರ ಯುವಮತದಾರರಿಗೆ ಮತದಾನದ ಅರಿವು ಮೂಡಿಸಿದ್ದಾರೆ. ದೇಶದಲ್ಲಿ 7 ಕೋಟಿಗೂ ಅಧಿಕ ಯುವ ಮತದಾರರಿದ್ದು, ಇವರೆಲ್ಲರ ನೋಂದಣಿ ಮಾಡುವ ಉದ್ದೇಶದಿಂದ ದೇಶಾದ್ಯಂತ ಈ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ದೇಶದ ಪ್ರತಿಯೊಬ್ಬ ಯುವಕರು ಉದ್ಯೋಗ ಹೊಂದುವ ಗುರಿ ಪ್ರಧಾನಿಗಳದ್ದಾಗಿದೆ. ಬರೀ ಉದ್ಯೋಗ ಪಡೆಯದೇ ಇತರರಿಗೂ ಉದ್ಯೋಗ ನೀಡುವ ಸಾಮರ್ಥ್ಯ ನಿಮ್ಮಲ್ಲಿ ಬರಬೇಕಿದೆ ಎಂಬುದು ಮೋದಿ ಅವರ ಸಂಕಲ್ಪ. 

ಪ್ರಧಾನಿ ಮೋದಿಯನ್ನು ಕಂಡರೆ ರಾಜ್ಯದ ಸಂಸದರಿಗೆ ಹೆದರಿಕೆ: ಸಚಿವ ಶಿವರಾಜ ತಂಗಡಗಿ

ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಹಲವು ಸಾಲ ಸೌಲಭ್ಯ, ಯೋಜನೆ ಜಾರಿಗೊಳಿಸುವ ಮೂಲಕ ಸದೃಢ ರಾಷ್ಟ್ರ ಮಾಡುವ ಸಂಕಲ್ಪ ಹೊಂದಿದ್ದಾರೆ. ಇವುಗಳ ಸದುಪಯೋಗ ಯುವಜನತೆ ಪಡೆದುಕೊಳ್ಳಬೇಕು ಎಂದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆಯೇ 500 ವರ್ಷಗಳ ಹೋರಾಟಕ್ಕೆ ಈಗ ಜಯ ದೊರೆತಿದೆ. ಅವರ ಅಧಿಕಾರವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ದೇಶದ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದ್ದು, 2047ಕ್ಕೆ ಭಾರತವು ಮುಂದುವರೆದ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಖಚಿತ. ಒಟ್ಟಾರೆ ಭಾರತವನ್ನು ಜಗನ್ಮಾಥೆಯನ್ನಾಗಿ ಬೆಳೆಸುವುದು ಮೋದಿ ಉದ್ದೇಶವಾಗಿದೆ ಎಂದರು.

click me!