Rahul Gandhi T Shirt: 41 ಸಾವಿರ ರೂಪಾಯಿ ಟಿ-ಶರ್ಟ್‌ ಧರಿಸಿ ರಾಹುಲ್‌ ಯಾತ್ರೆ, ಬಿಜೆಪಿಯ ಟೀಕೆ!

By Santosh NaikFirst Published Sep 9, 2022, 3:07 PM IST
Highlights

ಜನಸಾಮಾನ್ಯರು ಕಷ್ಟದಲ್ಲಿರುವ ವೇಳೆ ನಾಯಕರು ದುಬಾರಿ ಬಟ್ಟೆ ತೊಟ್ಟು ಕಾಣಿಸಿಕೊಂಡಿರುವ ಸಾಕಷ್ಟು ಘಟನೆಗಳು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು, ಕೆಲ ರಾಜ್ಯದ ಮುಖ್ಯಮಂತ್ರಿಗಳೂ ಇದರಿಂದ ಹೊರತಾಗಿಲ್ಲ. ಹಿಂದೊಮ್ಮೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಇದೇ ವಿಚಾರವಾಗಿ ಸುದ್ದಿಯಾಗಿದ್ದರು. ಈಗ ಭಾರತ್‌ ಜೋಡೋ ಯಾತ್ರೆಯಲ್ಲಿ ತೊಡಗಿಕೊಂಡಿರುವ ರಾಹುಲ್‌ ಗಾಂಧಿ ಧರಿಸಿರುವ ಟಿ-ಶರ್ಟ್‌ ಬಗ್ಗೆ ಬಿಜೆಪಿ ರಾಜಕೀಯ ಆರಂಭಿಸಿದೆ.

ನವದೆಹಲಿ (ಸೆ.9): ರಾಜಕಾರಣಿಗಳು ಧರಿಸುವ ಬಟ್ಟೆಗಳಿಂದ ಪ್ರಧಾನಿಯಿಂದ ಹಿಡಿದು ಎಲ್ಲರೂ ಈ ಅಪವಾದಕ್ಕೆ ತುತ್ತಾಗಿದ್ದಾರೆ. ಈ ನಡುವೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ದುಬಾರಿ ಬೆಲೆಯ ಟಿ-ಶರ್ಟ್‌ ಬಗ್ಗೆ ಬಿಜೆಪಿ ಟೀಕೆ ಮಾಡಿದೆ. ತಾನು ಬಡವರ ಪರ, ಬಡ ಜನರ ರಕ್ಷಕ ಎಂದು ಹೇಳುವ ರಾಹುಲ್‌ ಗಾಂಧಿ, ಭಾರತ್‌ ಜೋಡೋ ಯಾತ್ರೆಯ ವೇಳೆ ಧರಿಸಿರುವ ಟಿ-ಶರ್ಟ್‌ನ ಬೆಲೆ 41,257 ರೂಪಾಯಿ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. ಇದಕ್ಕೆ ಭಾರತ್‌ ದೇಖೋ ಎಂದೂ ಶೀರ್ಷಿಕೆಯನ್ನೂ ನೀಡಿದೆ. ಇನ್ನು ಬಿಜೆಪಿ ಪಕ್ಷದಿಂದ ಬಂದಿರುವ ಈ ಟ್ವೀಟ್‌ಗೆ ಇಡೀ ಕಾಂಗ್ರೆಸ್‌ ವಕ್ತಾರರು ಹಾಗೂ ರಾಜಕಾರಣಿಗಳ ಮುಗಿಬಿದ್ದಿದ್ದು, ತಮ್ಮ ಹೆಸರನ್ನೇ ಸೂಟ್‌ನ ಮೇಲೆ ಪ್ರಿಂಟ್‌ ಮಾಡಿಸಿಕೊಂಡಿದ್ದ ಪ್ರಧಾನಿಯ ಬಟ್ಟೆಗಿಂತಲೂ ಇದು ಕಡಿಮೆ ಎಂದು ಲೇವಡಿ ಮಾಡಿದೆ. ಯಾತ್ರೆ ಆರಂಭಿಸುವ ವೇಳೆ ರಾಹುಲ್ ಗಾಂಧಿ ಬಿಳಿ ಬಣ್ಣದ ಟೀ ಶರ್ಟ್, ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ಪ್ರಯಾಣಕ್ಕಾಗಿ ರಾಹುಲ್ ಗಾಂಧಿ ಎರಡು ಜೊತೆ ಶೂಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅವರು ಗುರುವಾರ ಧರಿಸಿದ್ದ ಶೂಗಳು 'ಆಸಿಕ್ಸ್' ಬ್ರಾಂಡ್‌ನ ಕ್ರೀಡಾ ಶೂಗಳಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದರ ಬೆನ್ನಲ್ಲಿಯೇ ರಾಹುಲ್‌ ಗಾಂಧಿ ಧರಿಸಿದ್ದ ಟಿ-ಶರ್ಟ್‌ನ ಮೌಲ್ಯವನನ್ನು ಬಿಜೆಪಿ ಪಕ್ಷವು ಕೆದಕಿ ಟ್ವೀಟ್‌ ಮಾಡಿದೆ. ರಾಹುಲ್ ಧರಿಸಿದ ಟಿ-ಶರ್ಟ್‌ ಬರ್‌ಬೆರಿ ಕಂಪನಿಯದ್ದಾಗಿದೆ. ಈ ಒಂದು ಟಿಶರ್ಟ್‌ನ ಮೌಲ್ಯವೇ 41, 257 ರೂಪಾಯಿ ಭಾರತವೇ ಇದನ್ನು ನೋಡಿ ಎಂದು ಟ್ವೀಟ್‌ ಮಾಡಿದೆ.

Bharat, dekho! pic.twitter.com/UzBy6LL1pH

— BJP (@BJP4India)


ಬ್ರ್ಯಾಂಡ್‌ ನ್ಯೂ ಟಿಶರ್ಟ್‌, ಅಡಿಡಾಸ್‌ ಶೂಗಳೊಂದಿಗೆ ಪಾದಯಾತ್ರೆ:  ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶಾದ್ಯಂತ ಪಾದಯಾತ್ರೆಯನ್ನು ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದೆ. ರಾಹುಲ್ ಗಾಂಧಿ, ಪಕ್ಷದ ಹಲವಾರು ನಾಯಕರೊಂದಿಗೆ ಗುರುವಾರ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು.

ಬ್ರಿಟಿಷರ ರೀತಿ ದೇಶದಲ್ಲಿ ಬಿಜೆಪಿ ಆಡಳಿತ: ರಾಹುಲ್‌ ಗಾಂಧಿ

ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗಟ್ಟಿಮುಟ್ಟಾದ ನೀಲಿ ಆಸಿಕ್ಸ್ ಬೂಟುಗಳನ್ನು ಆಯ್ಕೆ ಮಾಡಿದ್ದರೆ, ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಅಡಿಡಾಸ್‌ ಶೂಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಪಕ್ಷದ ಸಹೋದ್ಯೋಗಿ ಕನ್ಹಯ್ಯಾ ಕುಮಾರ್ ತಮಗೆ ಯಾವುದೇ ವಿಶೇಷ ಶೂಗಳ ಅಗತ್ಯವಿಲ್ಲ ಎಂದಿದ್ದರೆ, ಪಕ್ಷದ ತರಬೇತಿಯ ಉಸ್ತುವಾರಿ ಸಂದೇಶ್ ಸಚಿನ್ ರಾವ್ ಅವರು ಯಾತ್ರೆಯ ಮೊದಲ ದಿನ ಬರಿಗಾಲಿನಲ್ಲಿಯೇ ನಡೆದಿದ್ದಾರೆ. ಕಾಂಗ್ರೆಸ್‌ ಪಕ್ಷದ (Congress Party) ಇನ್ನೂ ಕೆಲವು ನಾಯಕರು ತಮ್ಮೊಂದಿಗೆ ಸಾಕಷ್ಟು ಸಂಖ್ಯೆಯ ಶೂಗಳನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.

ಭಾರತ್‌ ಜೋಡೋ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮ: ಪಿ.ಚಿದಂಬರಂ

ಪ್ರತಿದಿನ 22-23 ಕಿಲೋಮೀಟರ್‌ ಪಾದಯಾತ್ರೆ (Padayatre) ಮಾಡಬೇಕಾಗುತ್ತದೆ. ಆ ಕಾರಣಕ್ಕಾಗಿ ರಾಹುಲ್‌ ಗಾಂಧಿ ತಮ್ಮ ಬಳಿ ಸಾಕಷ್ಟು ಸಂಖ್ಯೆ ಶೂಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ. 'ತುಂಬಾ ದೀರ್ಘದ ಪಾದಯಾತ್ರೆಯನ್ನು ನಾವು ಮಾಡುತ್ತಿದ್ದೇವೆ. ಹಾಗಾಗಿ ನಾನು ಐದು ಭಿನ್ನ ಬ್ರ್ಯಾಂಡ್‌ನ ಶೂಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದರಲ್ಲಿ ಅಡಿಡಾಸ್‌ ನನಗೆ ಬಹಳ ಇಷ್ಟವಾಗಿದೆ' ಎಂದು ಜಯರಾಮ್‌ ರಮೇಶ್‌ ಹೇಳಿದ್ದಾರೆ.  ನಮ್ಮೊಂದಿಗೆ ಪಾದಯಾತ್ರೆ ಮಾಡುವವರು ಕೂಡ ಶೂನಲ್ಲಿ ಸಾಕಷ್ಟು ಹಣ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಹುಲ್‌ ಗಾಂಧಿ  (Rahul Gandhi) ದುಬಾರಿ ಟಿ ಶರ್ಟ್‌ ಧರಿಸೋದು ಹೊಸದೇನಲ್ಲ: ರಾಹುಲ್‌ ಗಾಂಧಿ ದುಬಾರಿ ಬೆಲೆಯ ಟಿಶರ್ಟ್‌ ಧರಿಸೋದು ಅದನ್ನು ಬಿಜೆಪಿ ವಿವಾದ ಮಾಡುವುದು ಹೊಸದೇನಲ್ಲ. ಇದಕ್ಕೂ ಮುನ್ನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ವೇಳೆ 12,300 ರೂಪಾಯಿ ಮೌಲ್ಯದ ರಾಲ್ಫ್‌ ಲೌರೆನ್‌ (Ralph Lauren) ಟಿಶರ್ಟ್‌ ಧರಿಸಿದ್ದು ವಿವಾದವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಧರಿಸುವ ದುಬಾರಿ ಬಟ್ಟೆಯನ್ನು ಟೀಕೆ ಮಾಡುವ ರಾಹುಲ್‌ ಗಾಂಧಿ ಕೂಡ ಸ್ವತಃ ದುಬಾರಿ ಮೌಲ್ಯದ ಪೈಜಾಮಾ,  ಶರ್ಟ್‌ ಹಾಗೂ ಅಂಗಿಯನ್ನು ಧರಿಸುತ್ತಾರೆ. ಹಿಂದೊಮ್ಮೆ ಸದನಕ್ಕೆ 12 ಸಾವಿರ ರೂಪಾಯಿಯ ರಾಲ್ಫ್‌ ಲೌರೆನ್‌ ಬಿಳಿ ಬಣ್ಣದ ಶರ್ಟ್‌ ಧರಿಸಿ ಬಂದಿದ್ದರು. ಇದನ್ನೂ ಕೂಡ ಬಿಜೆಪಿ ಟೀಕೆ ಮಾಡಿತ್ತು.

click me!