ಜನೋಪಯೋಗಿ ಕೆಲಸ ಮಾಡುವುದು ರಾಜಕಾರಣದ ಮೂಲ ಗುರಿ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಭರಮಸಾಗರದ ಎಸ್‌ಜೆಎಂ ಬಡಾವಣೆಯಲ್ಲಿ 50 ಲಕ್ಷ ರು. ವೆಚ್ಚದಲ್ಲಿ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಸಿರಿಗೆರೆ (ಅ.15) : ಜನೋಪಯೋಗಿ ಕೆಲಸ ಮಾಡುವುದು ರಾಜಕಾರಣದ ಮೂಲ ಗುರಿ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಭರಮಸಾಗರದ ಎಸ್‌ಜೆಎಂ ಬಡಾವಣೆಯಲ್ಲಿ 50 ಲಕ್ಷ ರು. ವೆಚ್ಚದಲ್ಲಿ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಮುರುಘಾ ಶ್ರೀಗೆ ಶುರುವಾದ ಮತ್ತೊಂದು ಸಂಕಷ್ಟ: 4 ಹೊಸ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
undefined
ಚುನಾವಣೆಯಲ್ಲಿ ಗೆದ್ದ ಮೇಲೆ ಕ್ಷೇತ್ರದಲ್ಲಿ ನಾವು ಮಾಡಿದ ಕೆಲಸಗಳನ್ನು ನಾಲ್ವರು ನೆನಪಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು. ಹಗಲು-ರಾತ್ರಿ ಕೆಲಸ ಮಾಡಿ ಮತದಾರರ ಋುಣ ತೀರಿಸುತ್ತೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಪ್ರೀತಿ ವಿಶ್ವಾಸಕ್ಕಿಂತ ದೊಡ್ಡ ಅಧಿಕಾರ ಮತ್ತೊಂದಿಲ್ಲ. ಈ ಹಿಂದೆ ಹೊಳಲ್ಕೆರೆ ಕ್ಷೇತ್ರದಿಂದ ಗೆದ್ದು ಮಂತ್ರಿಯಾದವರು ಈಗ ಏನಾಗಿದ್ದಾರೆನ್ನುವುದು ನಿಮಗೆಲ್ಲಾ ಗೊತ್ತಿದೆ. ಹೊಸದಾಗಿ ನಾನು ಶಾಸಕನಾಗಿದ್ದಾಗ ಸರ್ಕಾರದಿಂದ ಹಣ ತರುವುದು ಕಷ್ಟವಾಗಿತ್ತು. ಆಗಲೆ 4 ಸಾವಿರ ಕೋಟಿ ರು.ಗಳ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಿಂದ ಯುವಕರು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಕುಣಿಸಿ ಎರಡನೆ ಬಾರಿಗೆ ಜಯಶಾಲಿಯನ್ನಾಗಿಸಿದರು. ಐದು ಬಾರಿ ಗೆದ್ದಿದ್ದೇನೆ. ಇದಕ್ಕೆ ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸವೇ ಕಾರಣ ಎಂದರು.
ದೊಡ್ಡಕೆರೆ ಏರಿ ರಿಪೇರಿ:
ಕ್ಷೇತ್ರದಲ್ಲಿರುವ 493 ಹಳ್ಳಿಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ರಸ್ತೆ, ಬ್ರಿಡ್ಜ್, ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಯಾವ ಕೆಲಸವನ್ನು ಕಡೆಗಣಿಸಿಲ್ಲ. ದೊಡ್ಡ ಕೆರೆ ಏರಿ ಬಿರುಕು ಬಿಟ್ಟಿದೆ. ಎಷ್ಟೇ ಕೋಟಿ ರು. ಖರ್ಚಾದರೂ ಪರವಾಗಿಲ್ಲ. ಸಿರಿಗೆರೆ ಶ್ರೀಗಳ ಜೊತೆ ಚರ್ಚಿಸಿ ಸರ್ಕಾರದಿಂದ ಹಣ ತಂದು ರಿಪೇರಿ ಮಾಡಿಸುತ್ತೇನೆ. ಮೂರ್ನಾಲ್ಕು ತಿಂಗಳಿನಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕೆರೆ ಕಟ್ಟೆಗಳು ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ರಸ್ತೆಗಳು ಹಾಳಾಗಿದೆ. ಸೇತುವೆ ಮುಳುಗಡೆಯಾಗಿದೆ. ಮತ್ತೆ ಸರ್ಕಾರದಿಂದ ಹಣ ಮಂಜೂರು ಮಾಡಿಸಿ ಬೇವಿನಹಳ್ಳಿ ಬಳಿ ದೊಡ್ಡ ಸೇತುವೆ ನಿರ್ಮಿಸಿ ಇನ್ನೊಂದು ತಿಂಗಳೊಳಗೆ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದರು.
ಸರ್ಕಾರದಿಂದ ಹಣ ತರುವುದು ನನಗೆ ಕಷ್ಟವಲ್ಲ. ಯಾವುದೇ ಇಲಾಖೆಯಲ್ಲಾಗಲಿ ಕೆಲಸ ತೆಗೆದುಕೊಳ್ಳುತ್ತೇನೆ. ಎಸ್‌ಜೆಎಂ ಬಡಾವಣೆಯಲ್ಲಿ ಸಿಸಿ ರಸ್ತೆಗೆ 50 ಲಕ್ಷ ರು.ಗಳನ್ನು ನೀಡಿದ್ದೇನೆ. ಇನ್ನೂ 50 ಲಕ್ಷ ರು.ಗಳಿಗೆ ಟೆಂಡರ್ ಕರೆದು ಈ ಭಾಗದಲ್ಲಿ ಕೆಲಸ ಮಾಡುತ್ತೇನೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾಂಕ್ರಿಟ್ ರಸ್ತೆ ಮಾಡಿಸಲು ಒಂದು ಕೋಟಿ ರು. ಅನುದಾನ ತರುವುದಾಗಿ ಆಶ್ವಾಸನೆ ನೀಡಿದರು. ಈ ಬಾರಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಭರ್ತಿಯಾಗಿದ್ದರೆ , ಮತ್ತೆ ಕೆಲವೆಡೆ ಬೆಳೆ ಹಾನಿಯಾಗಿದೆ. ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರ್ಕಾರ ಪರಿಹಾರ ನೀಡುವುದರ ಮೂಲಕ ರೈತರ ನೆರವಿಗೆ ಧಾವಿಸಿದೆ ಎಂದು ಚಂದ್ರಪ್ಪ ಹೇಳಿದರು.
Chitradurga: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬೆಂಬಲಿಗನಿಂದ ದರ್ಪ: ಮಾರಣಾಂತಿಕ ಹಲ್ಲೆ ಆರೋಪ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಕೋಗುಂಡೆ ಮಂಜುನಾಥ್, ಸಾಮಿಲ್ ಶಿವಣ್ಣ, ಲಕ್ಷ್ಮಣ್‌ನಾಯ್ಕ, ಡಿ.ಎಸ್.ಪ್ರವೀಣ್, ಜಯಣ್ಣ, ಚಂದ್ರಶೇಖರ, ವೀರೇಶ್, ಗುತ್ತಿಗೆದಾರ ನಾಗನಗೌಡ ಉಪಸ್ಥಿತರಿದ್ದರು.